ಹಿಂದೂಸ್ತಾನ್ ಅಲ್ಲ, ಸಿಂಧೂಸ್ತಾನ್ ಮಾಡಿ: ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದ ಬಂಡಾಯ ಸಾಹಿತಿ ಬಸವರಾಜ್ ಸೂಳಿಭಾವಿ

ಹಿಂದೂ ಪದ ಭಾರತೀಯರದ್ದು ಅಲ್ಲಾ, ಅದು ಪರ್ಷಿಯನ್​ನಿಂದ ಬಂದಿದೆ ಅಂತ ಗದಗನಲ್ಲಿ ಬಂಡಾಯ ಸಾಹಿತಿ ಬಸವರಾಜ್ ಸೂಳಿಭಾವಿ ಹೇಳಿಕೆ ನೀಡುವ ಮೂಲಕ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಹಿಂದೂಸ್ತಾನ್ ಅಲ್ಲ, ಸಿಂಧೂಸ್ತಾನ್ ಮಾಡಿ: ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದ ಬಂಡಾಯ ಸಾಹಿತಿ ಬಸವರಾಜ್ ಸೂಳಿಭಾವಿ
ಬಂಡಾಯ ಸಾಹಿತಿ ಬಸವರಾಜ್ ಸೂಳಿಭಾವಿ
Follow us
TV9 Web
| Updated By: Rakesh Nayak Manchi

Updated on:Nov 10, 2022 | 2:43 PM

ಗದಗ: ಪರ್ಷಿಯನ್ ಹಾಗೂ ಇಸ್ಲಾಮ್​ನಲ್ಲಿ ನೋಡಿದರೆ ಆ ಪದದ ಅರ್ಥ ಬೇರೆ ಇದೆ. ನಮ್ಮದು ಅಲ್ಲದ ಪದದಿಂದ ಇಷ್ಟೆಲ್ಲಾ ಚರ್ಚೆ ಯಾಕೇ? ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Sathish Jarakiholi) ಹೇಳಿಕೆ ಸರಿಯಿದೆ. ಹಿಂದೂ ಪದ ಒಂದು ನಾಗರಿಕ ಸಮಾಜ ಬಳಸದಂತ ಪದವಾಗಿದೆ ಎಂದು ಬಂಡಾಯ ಸಾಹಿತಿ ಬಸವರಾಜ್ ಸೂಳಿಭಾವಿ ಹೇಳಿದರು. ಇಸ್ಲಾಂ ಸಂಸ್ಕೃತಿಯನ್ನು ಪರಕೀಯರ ಸಂಸ್ಕೃತಿ ಅಂತ ವಿರೋಧ ಮಾಡುತ್ತೀರಿ. ಅವರು ಕೊಟ್ಟಿರುವ ಪದದ ಬಗ್ಗೆ ನಿಮಗೆ ಯಾಕೇ ಇಷ್ಟೊಂದು ಪ್ರೀತಿ ಅಂತ ಪ್ರಶ್ನಿಸಿದ್ದಾರೆ. ಹಿಂದೂಸ್ತಾನ್ ಎನ್ನುವುದು ಮಮ್ಮಡಿಯನ್ಸ್ ಕೊಟ್ಟಿರುವ ಪದ. ನೀವು ಹಿಂದುಸ್ತಾನ್ ಅಲ್ಲಾ ಸಿಂದೂಸ್ತಾನ ಅಂತಾ ಮಾಡಿ ಎಂದು ಸವಾಲು ಹಾಕಿದ್ದಾರೆ.

ಒಂದು ಪದವನ್ನು ಹುಟ್ಟಿಸಲಾಗದಂತ ಬೌದ್ಧಿಕ ದಾರಿದ್ರ್ಯ ಇದಿಯಾ ಅಂತ ಪ್ರಶ್ನಿಸಿದ ಬಸವರಾಜ್ ಸೂಳಿಭಾವಿ, ನಮ್ಮದು ಸಿಂಧೂ ಸಂಸ್ಕೃತಿ, ದ್ರಾವಿಡ ಸಂಸ್ಕೃತಿ, ದೇಶಕ್ಕೆ ಭಾರತ್ ಖಂಡ ಅಂತಾ ಹೆಸರು ಇದೆ. ಭಾರತ್ ಖಂಡ್ ಭಾರತ್ ಖಂಡೇ, ಜಂಬೂ ದ್ವೀಪ ಎಂದು ಹೆಸರು ಇದೆ. ಚರಿತ್ರೆಯನ್ನು ಹುಡುಕಿದರೆ ಹಿಂದೂಸ್ತಾನ್ ಅಂತಾ ಎಲ್ಲಿದೆ ಎಂದು ಪ್ರಶ್ನಿಸಿದರು. ಪದಗಳ ಬಗ್ಗೆ ಚರ್ಚೆ ನಡೆಯಬೇಕು, ಭಾವನಾತ್ಮಕ ಅಂಧತ್ವದಿಂದ ನೋಡಬಾರದು. ಹಿಂದೂ ಪದ ಪರ್ಷಿಯನ್ ಭಾಷೆಯಿಂದ ಬಂದಿದೆ. ಹಿಂದೂ ಪದ ಎನ್ನುವದು ಈ ದೇಶದ ಮೂಲತವಾದರೆ ಬಹಿರಂಗ ಚರ್ಚೆಗೆ ಬನ್ನಿ ಅಂತ ಸವಾಲು ಹಾಕಿದರು.

ಗದಗನಲ್ಲಿ ಸಂವಾದ ಕಾರ್ಯಕ್ರಮವನ್ನು ಆಯೋಜನೆ ಮಾಡೋಣ. ಯಾವುದು ನಮ್ಮ ಪದ ಅಲ್ಲವೋ ಆ ಪದವನ್ನು ಇಟ್ಟುಕೊಂಡು ಮೂಲ ನಿವಾಸಿಗಳ ವಿರುದ್ಧ ಷಡ್ಯಂತರ ಮಾಡಲಾಗುತ್ತಿದೆ ಎಂದ ಬಂಡಾಯ ಸಾಹಿತಿ ಬಸವರಾಜ್, ಸತೀಶ್ ಜಾರಕಿಹೊಳಿಯವರ ಮಾತನ್ನು ಎಲ್ಲರು ಒಪ್ಪಿಕೊಳ್ಳಬೇಕು. ನನ್ನ ಮಾತಿನಲ್ಲಿ ಸತ್ಯಾಂಶ ಇಲ್ಲದಿದ್ದರೆ, ಇತಿಹಾಸಕಾರರ ಸಮಿತಿಯನ್ನು ರಚನೆ ಮಾಡಿ. ಅದನ್ನು ಮಾಡಬೇಕಾದವರು ಸರ್ಕಾರದವರಲ್ಲ, ಬದಲಾಗಿ ಈಗೀನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು. ಸರ್ಕಾರ ತನಿಖೆ ಬೇಕಾದನ್ನು ಮಾಡಿಕೊಳ್ಳುತ್ತದೆ. ಹಿಂದೂ ಪದದ ಮೂಲವನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಬೇಕು. ಇಲ್ಲವಾದರೆ ಇಂತಹ ಭಾವನಾತ್ಮಕ ಪದಗಳನ್ನು ಇಟ್ಟುಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡುವ ಕೆಲಸವಾಗುತ್ತದೆ ಎಂದರು.

ಈವಾಗ ನಮ್ಮ ಅಭಿಪ್ರಾಯ ಹೇಳಲು ಆಗದಂತ ಸ್ಥಿತಿ ನಿರ್ಮಣವಾಗಿದೆ. ಇಲ್ಲಿ ಪ್ರಜಾಪ್ರಭುತ್ವ ಇಲ್ಲ, ಅಂದಾ ಗುಂದಿ ಆಡಳಿತ ನಡೆಯುತ್ತಿದೆ. ಸರ್ವಾಧಿಕಾರಿ ಆಡಳಿದ ನಡೆಯುತ್ತಿದೆ. ರಾಮಾಯಣ ಹಾಗೂ ಮಹಾಭಾರತದಲ್ಲಿ ಈ ವಿಚಾರಗಳು ಇಲ್ಲ. ಈ ದೇಶದ ಅತ್ಯುನ್ನತ ಗ್ರಂಥಗಳನ್ನು ಬ್ರಾಹ್ಮಣೇತರರು ಬರೆದಿದ್ದಾರೆ. ಆ ಗ್ರಂಥಗಳನ್ನು ಇಟ್ಟುಕೊಂಡು ಬ್ರಾಹ್ಮಣರು ಆಟವನ್ನು ಆಡುತ್ತಿದ್ದಾರೆ. ಅದು ನಮ್ಮ ದುರಂತ. ಹಿಂದೂ ಪದದ ಬಹಿರಂಗವಾಗಿ ಚರ್ಚೆ ಮಾಡಲಿ, ಅದಕ್ಕೆ ನಾವು ಬದ್ಧರಿದ್ದೇವೆ ಎಂದರು.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Thu, 10 November 22

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು