ಚಿತ್ರದುರ್ಗ: ಬಾವಿ ಬಳಿ ನಿಂತಿದ್ದ ಹಿಟಾಚಿಗೆ ಕಾರು ಡಿಕ್ಕಿ, ಸ್ಥಳದಲ್ಲೇ ವ್ಯಕ್ತಿ ಸಾವು

ಕಾಮಗಾರಿ ಹಿನ್ನೆಲೆ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಹಿಟಾಚಿಗೆ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಕೆಂಚಪ್ಪ(40) ಸ್ಥಳದಲ್ಲೇ ಸಾವನ್ನಪ್ಪಿದ್ದು, ಕೆಂಚಪ್ಪನ ಪತ್ನಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಚಿತ್ರದುರ್ಗ: ಬಾವಿ ಬಳಿ ನಿಂತಿದ್ದ ಹಿಟಾಚಿಗೆ ಕಾರು ಡಿಕ್ಕಿ, ಸ್ಥಳದಲ್ಲೇ ವ್ಯಕ್ತಿ ಸಾವು
ಚಿತ್ರದುರ್ಗದಲ್ಲಿ ನಡೆದ ಅಪಘಾತ
Edited By:

Updated on: Dec 28, 2020 | 11:51 AM

ಚಿತ್ರದುರ್ಗ: ನಿಂತಿದ್ದ ಹಿಟಾಚಿಗೆ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ನಗರದ ಕೆಂಚಮಲ್ಲಪ್ಪನ ಬಾವಿ ಬಳಿ ನಡೆದಿದೆ.

ಕಾಮಗಾರಿ ಹಿನ್ನೆಲೆ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಹಿಟಾಚಿಗೆ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಕೆಂಚಪ್ಪ(40) ಸ್ಥಳದಲ್ಲೇ ಸಾವನ್ನಪ್ಪಿದ್ದು, ಕೆಂಚಪ್ಪನ ಪತ್ನಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಚಿತ್ರದುರ್ಗ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹಿಟಾಚಿ ಮತ್ತು ಕಾರು ನಡುವೆ ಡಿಕ್ಕಿ

ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ, ಇಬ್ಬರು ಸ್ಥಳದಲ್ಲೇ ದುರ್ಮರಣ

Published On - 11:50 am, Mon, 28 December 20