RTE ದುರ್ಬಳಕೆ: ಖಾಸಗಿ ಶಾಲೆಗಳಿಂದ ಸರ್ಕಾರಕ್ಕೆ ಮೋಸ.. YouTube ನಲ್ಲಿ ವಂಚನೆ ಬಹಿರಂಗ!
1 ಆರ್‌ಟಿಇ ಸೀಟ್‌ಗೆ ಸರ್ಕಾರ 16 ಸಾವಿರ ರೂ. ನೀಡುತ್ತೆ. ಆದರೆ ಸರ್ಕಾರಕ್ಕೆ ಸುಳ್ಳು ಲೆಕ್ಕ ನೀಡಿ ಖಾಸಗಿ ಶಾಲೆಗಳು ಕೋಟ್ಯಂತರ ರೂ. ವಂಚನೆ ಮಾಡಿವೆ. ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ, ಬೆಂಗಳೂರು, ತುಮಕೂರು, ಮೈಸೂರು ಭಾಗದ ಶಾಲೆಗಳು ಬಿಇಒಗಳ ಮೂಲಕ ಸರ್ಕಾರಕ್ಕೆ ಸುಳ್ಳು ಲೆಕ್ಕ ನೀಡಿ ವಂಚನೆ ಮಾಡಿವೆ.
ಬೆಂಗಳೂರು: RTE ದುರ್ಬಳಕೆ ಮಾಡಿಕೊಂಡು ಕೆಲ ಖಾಸಗಿ ಶಾಲೆಗಳು ರಾಜ್ಯ ಸರ್ಕಾರಕ್ಕೆ ದೋಖಾ ಮಾಡಿವೆ ಎಂಬ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ. ಸರ್ಕಾರಕ್ಕೆ ಸುಳ್ಳು ಲೆಕ್ಕ ನೀಡಿ ಖಾಸಗಿ ಶಾಲೆಗಳು ಕೋಟ್ಯಾಂತರ ರೂಪಾಯಿ ವಂಚನೆ ಮಾಡಿವೆ. ಈ ಬಗ್ಗೆ ಖಾಸಗಿ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ RTE ಹಗರಣದ ಮಾಹಿತಿ ನೀಡಿದ್ದಾರೆ.
1 ಆರ್‌ಟಿಇ ಸೀಟ್‌ಗೆ ಸರ್ಕಾರ 16 ಸಾವಿರ ರೂ. ನೀಡುತ್ತೆ. ಆದರೆ ಸರ್ಕಾರಕ್ಕೆ ಸುಳ್ಳು ಲೆಕ್ಕ ನೀಡಿ ಖಾಸಗಿ ಶಾಲೆಗಳು ಕೋಟ್ಯಂತರ ರೂ. ವಂಚನೆ ಮಾಡಿವೆ. ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ, ಬೆಂಗಳೂರು, ತುಮಕೂರು, ಮೈಸೂರು ಭಾಗದ ಶಾಲೆಗಳು ಬಿಇಒಗಳ ಮೂಲಕ ಸರ್ಕಾರಕ್ಕೆ ಸುಳ್ಳು ಲೆಕ್ಕ ನೀಡಿ ವಂಚನೆ ಮಾಡಿವೆ.
ಇನ್ನು RTE ಸುಳ್ಳು ದಾಖಲೆ ನೀಡಲು ಬಿಇಒ ಹಾಗೂ ಕ್ಯಾಮ್ಸ್ ಶಾಲಾ ಒಕ್ಕೂಟ ಕೂಡ ಸಾಥ್ ನೀಡಿದೆಯಂತೆ. ಈ ಎಲ್ಲದರ ಬಗ್ಗೆ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಎಳೆ ಎಳೆಯಾಗಿ ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.
ಆದರೆ ಮುಂದೆ ಖಾಸಗಿ ಶಾಲೆಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತಾ? ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡುತ್ತಾ? ಇಷ್ಟೆಲ್ಲಾ ಹಗರಣ ನಡೆದರೂ ಸಚಿವರ ಗಮನಕ್ಕೆ ಬಂದಿಲ್ವ? ಎಂಬ ಹಲವು ಅನುಮಾನಗಳು ಮೂಡಿದ್ದು ಸರ್ಕಾರದ ಮುಂದಿನ ಹೆಜ್ಜೆ ಏನೂ ಎಂಬ ಕುತೂಹಲ ಹೆಚ್ಚಾಗಿದೆ.
ಖಾಸಗಿ ಶಾಲೆಗಳಿಂದ ಶುಲ್ಕ ಟಾರ್ಚರ್: ಸಿಡಿದೆದ್ದ ಪೋಷಕರಿಂದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಭಾನುವಾರ ಪ್ರತಿಭಟನೆ