ರಸ್ತೆ ಮೇಲೆ ಒಕ್ಕಣೆ ಮಾಡಬೇಡಿ: K.R. ಪೇಟೆ ಭೂವರಾಹ ದೇಗುಲ ರೆಸ್ತೆಯಲ್ಲಿ ಹೊತ್ತಿ ಉರಿದ ಬೆಂಗಳೂರಿನ ಕಾರು

| Updated By: ಸಾಧು ಶ್ರೀನಾಥ್​

Updated on: Jan 23, 2021 | 6:26 PM

ಮಂಡ್ಯ: ‘ರಸ್ತೆ ಮೇಲೆ ಒಕ್ಕಣೆ ಮಾಡಬೇಡಿ’ ಎಂದು ಅಂದಿನಿಂದಲೂ ರೈತಾಪಿ ವರ್ಗಕ್ಕೆ ಹೇಳುತ್ತಾ ಬಂದಿದ್ದರೂ ರೈತರು ಎಚ್ಚೆತ್ತುಕೊಳ್ಳುವ ಲಕ್ಷಣ ಕಾಣುತ್ತಿಲ್ಲ. ರಸ್ತೆ ಮೇಲಿನ ಒಕ್ಕಣೆಯಿಂದ ಮತ್ತೊಂದು  ಅನಾಹುತಕ್ಕೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಭೂ ವರಾಹನಾಥ ದೇವಸ್ಥಾನದ ರಸ್ತೆಯಲ್ಲಿ ಕಾರ್​ ಒಂದು ಹೊತ್ತಿ ಉರಿದ ಘಟನೆ ನಡೆದಿದೆ.

ರಸ್ತೆ ಮೇಲೆ ಒಕ್ಕಣೆ ಮಾಡಬೇಡಿ: K.R. ಪೇಟೆ ಭೂವರಾಹ ದೇಗುಲ ರೆಸ್ತೆಯಲ್ಲಿ ಹೊತ್ತಿ ಉರಿದ ಬೆಂಗಳೂರಿನ ಕಾರು
ಸಾಂದರ್ಭಿಕ ಚಿತ್ರ
Follow us on

ಮಂಡ್ಯ: ‘ರಸ್ತೆ ಮೇಲೆ ಒಕ್ಕಣೆ ಮಾಡಬೇಡಿ’ ಎಂದು ಅಂದಿನಿಂದಲೂ ರೈತಾಪಿ ವರ್ಗಕ್ಕೆ ಹೇಳುತ್ತಾ ಬಂದಿದ್ದರೂ ರೈತರು ಎಚ್ಚೆತ್ತುಕೊಳ್ಳುವ ಲಕ್ಷಣ ಕಾಣುತ್ತಿಲ್ಲ. ರಸ್ತೆ ಮೇಲಿನ ಒಕ್ಕಣೆಯಿಂದ ಮತ್ತೊಂದು  ಅನಾಹುತಕ್ಕೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಭೂ ವರಾಹನಾಥ ದೇವಸ್ಥಾನದ ರಸ್ತೆಯಲ್ಲಿ ಕಾರ್​ ಒಂದು ಹೊತ್ತಿ ಉರಿದ ಘಟನೆ ನಡೆದಿದೆ. ಭಕ್ತಾದಿಗಳ ತಂಡವೊಂದು ಬೆಂಗಳೂರಿನಿಂದ ದೇವಸ್ಥಾನಕ್ಕೆ ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಅಂದ ಹಾಗೆ, ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರೈತರು ಹುರುಳಿ ಕಾಳು ಒಕ್ಕಣೆ ಮಾಡ್ತಿದ್ದರು. ಈ ವೇಳೆ, ಬೆಂಗಳೂರಿನ ಕಡೆಯಿಂದ ಬಂದಿದ್ದ ಕಾರಿಗೆ ಹುರುಳಿ ಸೊಪ್ಪು ಸಿಕ್ಕಿ ಬೆಂಕಿ ಹೊತ್ತಿಕೊಂಡಿದೆ.

ಇದನ್ನು ಗಮನಿಸಿದ ಸ್ಥಳೀಯರು ಕಾರನ್ನು ಹಿಂಬಾಲಿಸಿ ವಿಚಾರ ತಿಳಿಸಿದ್ದಾರೆ. ಹಾಗಾಗಿ, ಭಾರಿ ಅನಾಹುತ ತಪ್ಪಿದೆ. ಕಾರು ಸಂಪೂರ್ಣವಾಗಿ ಹೊತ್ತಿಕೊಳ್ಳುವುದರಲ್ಲಿ ವಾಹನದಲ್ಲಿದ್ದವರು ಹೊರಬಂದಿದ್ದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ, ಸ್ಥಳೀಯರೆಲ್ಲರು ಸೇರಿ ಬೆಂಕಿ ನಂದಿಸಲು ಯತ್ನಿಸುವಷ್ಟರಲ್ಲೇ ಕಾರ್​ ಸಂಪೂರ್ಣ ಸುಟ್ಟು ಕರಕಲಾಗಿ ಹೋಯಿತು.

ಸಿಎಂ ಮಮತಾ ಭಾಷಣ ಆರಂಭಿಸುತ್ತಿದ್ದಂತೆ ಜೈ ಶ್ರೀರಾಮ್ ಘೋಷಣೆ; ಸಿಟ್ಟಿಗೆದ್ದ ದೀದಿಯಿಂದ ಭಾಷಣ ಮೊಟಕು