ಚಿಕ್ಕಬಳ್ಳಾಪುರ, ಜೂನ್ 03: ಚುನಾವಣೆ ವೇಳೆ ರಾಜ್ಯ ಸರ್ಕಾರದ ಲೇಟರ್ ಹೆಡ್ ದುರ್ಬಳಕೆ ಆರೋಪಡಿ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್ (K Sudhakar) ವಿರುದ್ಧ ನಗರ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ (code of conduct) ದಾಖಲಾಗಿದೆ. ರಾಜ್ಯ ಸರ್ಕಾರದ ಚಿಹ್ನೆ ಇರುವ ಲೆಟರ್ ಹೆಡ್ನಲ್ಲಿ ಚುನಾವಣಾ ಆಯುಕ್ತರು, ಬೆಂಗಳೂರು ವಿಭಾಗಕ್ಕೆ ಪತ್ರ ವ್ಯವಹಾರ ಮಾಡಿದ್ದಾರೆ. ಹೀಗಾಗಿ ಬೆಂಗಳೂರು ಪ್ರಾದೇಶಿಕ ಆಯುಕ್ತರ ಸೂಚನೆ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಚಿಹ್ನೆಯನ್ನು ಅನಧಿಕೃತವಾಗಿ ಬಳಕೆಮಾಡಿರುವುದರಿಂದ ಈ ಬಗ್ಗೆ, ಸದರಿಯವರ ವಿರುದ್ಧ ಪೋಲೀಸ್ ಅಧಿಕಾರಿಗಳ ಮೂಲಕ ಮಾಜಿ ಸಚಿವ ಡಾ. ಕೆ.ಸುಧಾಕರ್ ರವರ ವಿರುದ್ಧ ಉಲ್ಲೇಖ ರೀತಾ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲಾ ಚುನಾವಣಾಧಿಕಾರಿಗಳು ಸೂಚಿಸಿ ಪತ್ರವನ್ನು ರವಾನಿಸಿಕೊಂಡಿರುತ್ತಾರೆ.
ಇದನ್ನೂ ಓದಿ: ಲೋಕಸಭಾ ರಿಸಲ್ಟ್ ವೇಳೆ ಸಮಸ್ಯೆ ನಿವಾರಣೆಗೆ ಟಾಸ್ಕ್ ಫೋರ್ಸ್ ರಚಿಸಿದ ಕಾಂಗ್ರೆಸ್
ಏಪ್ರಿಲ್ 2ರಂದು ಹಿಂದೆ ಚುನಾವಣೆ ಮಾದರಿ ನೀತಿ ಸಂಹಿತೆ ಸಂದರ್ಭದಲ್ಲಿ ಡಾ. ಕೆ.ಸುಧಾಕರ್ ತಮ್ಮ ಕಚೇರಿ, ಮನೆಯಲ್ಲಿ (ಸ್ಪಷ್ಟವಾಗಿ ವಿಳಾಸ ತಿಳಿದುಬಂದಿರುವುದಿಲ್ಲ) ಲೆಟರ್ ಹೆಡ್ನಲ್ಲಿ ಚುನಾವಣಾ ಆಯುಕ್ತರು, ಬೆಂಗಳೂರು ವಿಭಾಗ ರವರಿಗೆ ಪತ್ರ ವ್ಯವಹಾರ ಮಾಡಿದ್ದು, ಸದರಿ ಲೆಟರ್ ಹೆಡ್ನಲ್ಲಿ ಕರ್ನಾಟಕ ಸರ್ಕಾರದ ಚಿಹ್ನೆಯನ್ನು ಅನಧಿಕೃತವಾಗಿ ಬಳಕೆಮಾಡಿರುವುದಾಗಿ ಕಂಡ ಪತ್ರದಲ್ಲಿ ನಮೂದಿಸಿದೆ.
ಇದನ್ನೂ ಓದಿ: ಎಕ್ಸಿಟ್ ಪೋಲ್ ಗಳು ಗೊಂದಲ ಸೃಷ್ಟಿಸಿವೆ, ಅವಸರ ಯಾಕೆ? ನಾಳೆ ಮಧ್ಯಾಹ್ನ ಎಲ್ಲ ಗೊತ್ತಾಗಲಿದೆ: ಸತೀಶ್ ಜಾರಕಿಗೊಳಿ
ಕರ್ನಾಟಕ ಸರ್ಕಾರದ ಚಿಹ್ನೆಯನ್ನು ಅನಧಿಕೃತವಾಗಿ ಬಳಸಿರುವ the Emblem and Names (Prevention of Improper use) Act-1950. 03 of the state Emblem of India (Provibition of Improper use) Act-2005, 5, 500, 170, 171, 171(f), 260, 481 ಐಪಿಎಸ್ರಡಿ ಡಾ. ಕೆ.ಸುಧಾಕರ್ ರವರ ವಿರುದ್ಧ ಕಾನೂನು ರೀತಾ ಕ್ರಮ ಕೈಗೊಳ್ಳಲು ಕೋರಿ ದೂರು ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:06 pm, Mon, 3 June 24