ಶಾಂತ ಶಿವಯೋಗಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲು

| Updated By: ರಾಜೇಶ್ ದುಗ್ಗುಮನೆ

Updated on: Feb 11, 2021 | 8:40 PM

ಅಚ್ಚರಿಯ ಸಂಗತಿ ಏನು ಎಂದರೇ ಸ್ವಾಮೀಜಿ ಅವರು ನಮಗೆ ಬಂದೂಕಿನಿಂದ ಸಾಯಿಸುತ್ತೇನೆ ಎಂದು ಹೇಳಿದ್ದಾರೆ ಎಂದು ದಾಖಲಿಸಿರುವ ಪ್ರಕರಣದಲ್ಲಿ ತಿಳಿಸಿದ್ದಾರೆ. ಇದು ನೀಜಕ್ಕೂ ಕೂಡ ಗಂಭೀರವಾದ ಆಪಾದನೆಯಾಗಿದ್ದು, ಇದನ್ನು ಪೊಲೀಸರು ಯಾವ ರೀತಿ ತನಿಖೆ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಶಾಂತ ಶಿವಯೋಗಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲು
ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ
Follow us on

ಯಾದಗಿರಿ: ತಾಲೂಕಿನ ಹೆಡಗಿಮದ್ರ ಗ್ರಾಮದ ಶಾಂತ ಶಿವಯೋಗಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮೇಲೆ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿರುವ ಕೇಸ್ ದಾಖಲಾಗುತ್ತಿದಂತೆ ಮಠಕ್ಕೆ ಪೊಲೀಸ್ ಬಂದೋಬಸ್ತ್ ಕಲ್ಪಿಸಿರುವುದು ಭಕ್ತರಲ್ಲಿ ತಳಮಳ ಶುರುವಾಗಿದೆ. ಗ್ರಾಮದ ನಿವಾಸಿಗಳಾದ ಬಸವರಾಜ್ ಶಿವಪ್ಪ ವಡ್ನಳ್ಳಿ ಹಾಗೂ ಮಲ್ಲಿಕಾರ್ಜುನ್ ಕಟಕಟಿ ಎಂಬುವವರು ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದು ಅಸಂಖ್ಯಾತ ಭಕ್ತರಿಗೆ ತೀವ್ರ ಆಘಾತ ನೀಡಿದೆ. ಶ್ರೀಮಠದಲ್ಲಿ ಈ ಘಟನೆಯಿಂದ ಯಾವುದೆ ರೀತಿಯ ತೊಂದರೆಗಳು ಆಗಬಾರದು ಎಂದು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ.  

ಸ್ವಾಮೀಜಿ ಮೇಲೆ ಪ್ರಕರಣ ದಾಖಲಿಸಿರುವ ಇಬ್ಬರು ಫೆಬ್ರವರಿ 5 ರಂದು ಸಂಜೆ 7 ಗಂಟೆಗೆ ಶ್ರೀಮಠ ದರ್ಶನ ಪಡೆಯಲು ಹೋಗಿರುತ್ತಾರೆ. ಇದೆ ವೇಳೆ ಶ್ರೀಮಠದ ಪೀಠಾಧಿಪತಿಗಳು ಶ್ರೀ ಶಾಂತ ಮಲ್ಲಿಕಾರ್ಜುನ್ ಸ್ವಾಮೀಗಳು ನೀವು ಏಕೆ ನನ್ನ ಮಠಕ್ಕೆ ಬರುತ್ತೀರಿ. ನೀಮ್ಮನ ನೋಡಿದರೆ ನಮಗೆ ಬೆಂಕಿ ಬರುತ್ತದೆ. ನೀಮ್ಮದು ಬಹಳವಾಗಿದೆ, ನೀಮ್ಮ ಜೀವ ಖಲಾಸ್ ಮಾಡುತ್ತೆನೆ, ನೀಮ್ಮ ಆಸ್ತಿಯನ್ನ ಸರ್ಕಾರಕ್ಕೆ ಮುಟ್ಟಗೋಲು ಹಾಕಿಸುತ್ತೆನೆ. ಗ್ರಾಮದಲ್ಲಿ ಏನು ಮಾಡುತ್ತಿರಿ ಎಂದು ಏರು ಧ್ವನಿಯಲ್ಲಿ ಸ್ವಾಮೀಜಿ ನಮಗೆ ಬಾಯಿಗೆ ಬಂದ ಹಾಗೆ ಬೈದಿದ್ದಾರೆ ಎಂದು ದಾಖಲಿಸಿರುವ ಪ್ರಕರಣದಲ್ಲಿ ತಿಳಿಸಿದ್ದಾರೆ.

ಎಫ್​ಐಆರ್​  ಪ್ರತಿ

ಎಫ್​ಐಆರ್​ ಪ್ರತಿ

ಮತ್ತೊಂದು ಅಚ್ಚರಿಯ ಸಂಗತಿ ಏನು ಎಂದರೇ ಸ್ವಾಮೀಜಿ ಅವರು ನಮಗೆ ಬಂದೂಕಿನಿಂದ ಸಾಯಿಸುತ್ತೇನೆ ಎಂದು ಹೇಳಿದ್ದಾರೆ ಎಂದು ದಾಖಲಿಸಿರುವ ಪ್ರಕರಣದಲ್ಲಿ ತಿಳಿಸಿದ್ದಾರೆ. ಇದು ನೀಜಕ್ಕೂ ಕೂಡ ಗಂಭೀರವಾದ ಆಪಾದನೆಯಾಗಿದ್ದು, ಇದನ್ನು ಪೊಲೀಸರು ಯಾವ ರೀತಿ ತನಿಖೆ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಏನಾದರೂ ಹೆಚ್ಚು ಕಡಿಮೆಯಾದರೆ ಭಕ್ತರಿಂದ ಪ್ರತಿಭಟನೆ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ಪಾರದರ್ಶಕವಾಗಿ ತನಿಖೆ ನಡೆಸುವುದು ಆಗತ್ಯವಾಗಿದೆ.

ಸ್ವಾಮಿಜಿ ಮಠದ ಮುಂದೆ ಪೊಲೀಸ್ ಬಂದೋಬಸ್ತ್

ಮಠಕ್ಕೆ ಪೊಲೀಸ್ ಬಂದೋಬಸ್ತ್:
ಶಾಂತ ಮಲ್ಲಿಕಾರ್ಜುನ್ ಸ್ವಾಮೀಜಿಗಳ ಮೇಲೆ ಜಾತಿ ನಿಂದನೆ ಕೇಸ್ ದಾಖಲಾಗುತ್ತಿದಂತೆ ಮಠಕ್ಕೆ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಕಳೆದ 3 ದಿನಗಳ ಹಿಂದೆ ಸ್ವಾಮೀಜಿಗಳ ಮೇಲೆ ಕೇಸ್ ದಾಖಲಾಗಿದೆ. ಹೀಗಾಗಿ ಮೂರು ದಿನಗಳಿಂದ ಮಠದ ಆವರಣದಲ್ಲೇ ಪೊಲೀಸರು ಬೀಡು ಬಿಟ್ಟಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎನ್ನುವ ಕಾರಣಕ್ಕೆ ಪೊಲೀಸ್ ಭದ್ರತೆಯನ್ನ ಕೂಡ ನೀಡಲಾಗಿದೆ.

ಇನ್ನೂ ಈ ವಿಚಾರವಾಗಿ ಟಿವಿ9 ಡಿಜಿಟಲ್​ಗೆ ಸ್ವಾಮೀಜಿ ಪ್ರತಿಕ್ರಿಯೆ ಸಿಕ್ಕಿಲ್ಲ. ಸಿಕ್ಕ ನಂತರ ಈ ವಿಚಾರವನ್ನು ಪರಿಷ್ಕರಿಸುತ್ತೇವೆ.

ಇದನ್ನೂ ಓದಿ: ಐ ಆಮ್ ಕಿಂಗ್ ಮೇಕರ್, ನಾಟ್ ಎ ಕಿಂಗ್: ನಿರಂಜನಾನಂದಪುರಿ ಸ್ವಾಮೀಜಿ