ಸಾಮಾಜಿಕ ಕಾರ್ಯಕರ್ತನ ತರಾಟೆ ಬಳಿಕ ಲಂಚದ ಹಣ ವಾಪಸ್ ನೀಡಿದ ಕ್ಯಾಶಿಯರ್, ವಿಡಿಯೋ ವೈರಲ್

| Updated By: ಆಯೇಷಾ ಬಾನು

Updated on: Jul 11, 2021 | 8:44 AM

ಸಾಮಾಜಿಕ ಕಾರ್ಯಕರ್ತ ಲಂಚ ಪಡೆಯುತ್ತಿದ್ದೀರಾ ಎಂದು ಕ್ಯಾಶಿಯರ್ಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಕ್ಕೆ ಭಯದಿಂದ ಲಂಚದ ಹಣ ವಾಪಾಸ್ ನೀಡಿದ್ದಾನೆ. ಹಣ ನೀಡಿದ ವಿಡಿಯೋ ಈಗ ವೈರಲ್ ಆಗಿದೆ.

ಸಾಮಾಜಿಕ ಕಾರ್ಯಕರ್ತನ ತರಾಟೆ ಬಳಿಕ ಲಂಚದ ಹಣ ವಾಪಸ್ ನೀಡಿದ ಕ್ಯಾಶಿಯರ್, ವಿಡಿಯೋ ವೈರಲ್
ಪಿಡಬ್ಲೂಡಿ ಕ್ಯಾಶಿಯರ್ ಬೀರೇಂದ್ರ
Follow us on

ಶಿವಮೊಗ್ಗ: ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯ ಕಚೇರಿಯಲ್ಲಿ ಪಿಡಬ್ಲೂಡಿ ಕ್ಯಾಶಿಯರ್ ಬೀರೇಂದ್ರ ಗುತ್ತಿಗೆದಾರನ ಬಳಿ 10 ಸಾವಿರ ಲಂಚ ಸ್ವೀಕಾರ ಮಾಡಿದ್ದಾರೆ. ಅದೇ ಸಂದರ್ಭದಲ್ಲಿ ಲಂಚ ಪಡೆದಿದ್ದಕ್ಕೆ ಸಾಮಾಜಿಕ ಕಾರ್ಯಕರ್ತ ಕ್ಯಾಶಿಯರ್ಗೆ ತರಾಟೆಗೆ ತೆಗೆದುಕೊಂಡಿದ್ದು ಬೈದ ಬಳಿಕ ಬೀರೇಂದ್ರ ಹಣ ಹಿಂತಿರುಗಿಸಿದ ವಿಡಿಯೋ ವೈರಲ್ ಆಗಿದೆ.

ಸಾಮಾಜಿಕ ಕಾರ್ಯಕರ್ತ ಲಂಚ ಪಡೆಯುತ್ತಿದ್ದೀರಾ ಎಂದು ಕ್ಯಾಶಿಯರ್ಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಕ್ಕೆ ಭಯದಿಂದ ಲಂಚದ ಹಣ ವಾಪಾಸ್ ನೀಡಿದ್ದಾನೆ. ಹಣ ನೀಡಿದ ವಿಡಿಯೋ ಈಗ ವೈರಲ್ ಆಗಿದೆ. ಕಾಮಗಾರಿ ಟೆಂಡರ್ ಪಡೆಯುವಾಗ ಠೇವಣಿ ಇಟ್ಟಿದ್ದ ಬಾಂಡ್ ವಾಪಾಸ್ ನೀಡಲು ಗುತ್ತಿಗೆದಾರನಿಗೆ ಲಂಚ ನೀಡಬೇಕೆಂದು ಬೀರೇಂದ್ರ ಬೇಡಿಕೆ ಇಟ್ಟಿದ್ದರು. ಹೀಗಾಗಿ ಮೂರು ಬಾಂಡ್ಗಳನ್ನ ವಾಪಾಸ್ ನೀಡಲು ಪಿಡಬ್ಲೂಡಿ ನಗರ ಶಾಖೆಯ ಕ್ಯಾಶಿಯರ್ ಗುತ್ತಿಗೆದಾರನ ಬಳಿ ಲಂಚ ಹಣ ಸ್ವೀಕರಿಸಿದ್ದಾನೆ. ಇದಕ್ಕೆ ಸಾಮಾಜಿಕ ಕಾರ್ಯಕರ್ತ ಓಂಕಾರ್‌ರಿಂದ ವಿರೋಧ ವ್ಯಕ್ತವಾಗಿದೆ.

ಲಂಚ ಪಡೆದ ಕ್ಯಾಶಿಯರ್ ಬೀರೇಂದ್ರಗೆ ತರಾಟೆಗೆ ತೆಗೆದುಕೊಂಡ ಬಳಿಕ ಗುತ್ತಿಗೆದಾರನಿಗೆ ಲಂಚದ ಹಣ ವಾಪಸ್ ನೀಡಿ ಎಲ್ಲ ಬಾಂಡ್ ವಾಪಾಸ್ ನೀಡಿದ್ದಾರೆ. ಜುಲೈ 8ರಂದು ನಡೆದಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಗೋಮಾಂಸ ಸೇವಿಸುವವರ ಡಿಎನ್​ಎ ನಮ್ಮಲ್ಲಿಲ್ಲ: ವಿಹಿಂಪ ನಾಯಕಿ ಸಾಧ್ವಿ ಪ್ರಾಚಿಯಿಂದ ಆರ್​ಎಸ್​ಎಸ್​ ಮುಖ್ಯಸ್ಥರಿಗೆ ಟಾಂಗ್