ಚಿಕ್ಕಬಳ್ಳಾಪುರ: ಸಾಕುಪ್ರಾಣಿಗಳು ಮಕ್ಕಳಿಗಿಂತಲೂ ಹೆಚ್ಚು ನಿಯತ್ತಾಗಿರುತ್ತವೆ ಎನ್ನುವ ಮಾತಿಗೆ ಬೆಕ್ಕೊಂದು ಸಾಕ್ಷಿಯಾಗಿದೆ. ತನ್ನ ಒಡೆಯನ ಮನೆ ಬಳಿ ಬಂದ ಹಾವಿನ ಮೇಲೆ ಬೆಕ್ಕು ದಾಳಿ ನಡೆಸಿದ ಆಶ್ಚರ್ಯಕರ ಘಟನೆಯೊಂದು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅರಿಕೇರೆ ಗ್ರಾಮದ ದೊಡ್ಡಮುನಿಯಪ್ಪ ಎನ್ನುವವರ ಮನೆಯಲ್ಲಿ ನಡೆದಿದೆ. ದೊಡ್ಡಮುನಿಯಪ್ಪನ ಮನೆ ಬಳಿ ಇಂದು (ಜುಲೈ 7) ಹಾವೊಂದು ಬಂದಿದೆ. ಅದನ್ನು ಗಮನಿಸಿದ ಬೆಕ್ಕು, ತಕ್ಷಣ ಹಾವಿನ ಮೇಲೆ ಹಾರಿ ದಾಳಿ ನಡೆಸಿದೆ.
ಕೆಲಕಾಲ ಬೆಕ್ಕು ಹಾಗೂ ಹಾವಿನ ಮಧ್ಯೆ ಘೋರ ಕಾಳಗವೆ ನಡೆದಿದೆ. ಆದರೆ ಹಾವು ಬೆಕ್ಕಿನ ರೋಷವನ್ನು ಕಂಡು ತಪ್ಪಿಸಿಕೊಳ್ಳಲು ಯೋಚಿಸಿತ್ತು. ಆದರೆ ಬೆಕ್ಕು ಹಾವನ್ನು ಹೋಗಲು ಬಿಟ್ಟಿಲ್ಲ. ಹಾವನ್ನು ಹಿಡಿದು ತನ್ನ ಬಾಯಿಯಿಂದ ಮೂರು ತುಂಡು ಮಾಡಿದೆ. ನಂತರ ಸತ್ತ ಹಾವನ್ನು ಅಲ್ಪ ಸ್ವಲ್ಪ ಬೆಕ್ಕು ತಿಂದಿದೆ. ಈ ಅಪರೂಪದ ಕ್ಷಣಗಳನ್ನು ದೊಡ್ಡಮುನಿಯಪ್ಪನ ಮಗ ಮುನಿರಾಜು ಎಂಬುವವರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾನೆ.
ಬೆಕ್ಕು ಹಾವನ್ನು ತಿಂದಿದ್ದು ಇದೆ ಮೊದಲೇನಲ್ಲ
ದೊಡ್ಡಮುನಿಯಪ್ಪ ಸಾಕಿದ ಬೆಕ್ಕು ಇದೆ ಮೊದಲ ಭಾರಿಗೆ ಹಾವನ್ನು ಕೊಂದು, ತಿಂದಿಲ್ಲ. ಇದಕ್ಕೂ ಮೊದಲು ತೋಟದ ಬಳಿ ಬಂದ ನಾಗರಹಾವನ್ನು ಇದೆ ರೀತಿ ಕಚ್ಚಿ ಕಚ್ಚಿ ಗಾಯಗೊಳಿಸಿ, ನಂತರ ನಾಗರಹಾವನ್ನೇ ಸ್ವಾಹ ಮಾಡಿತ್ತು.
ಬೆಕ್ಕು ಮೊಲವನ್ನೂ ತಿಂದಿತ್ತು
ಬೆಕ್ಕು ಕಳೆದ ಎರಡು ತಿಂಗಳ ಹಿಂದೆ ಅರಿಕೇರೆ ಗ್ರಾಮದ ದೊಡ್ಡಮುನಿಯಪ್ಪನ ಜಮೀನಿನ ಬಳಿ ಬಂದ ಮೊಲವನ್ನು ಅಟ್ಟಾಡಿಸಿ ಹಿಡಿದು ನಂತರ ಅದನ್ನು ತಿಂದು ಹಾಕಿತ್ತು ಎಂದು ಮುನಿರಾಜು ತಿಳಿಸಿದರು.
ಇದನ್ನೂ ಓದಿ
World Chocolate Day 2021 : ಸುಪ್ರಿಯಾ ‘ಫೆರೆರೋಧಾರೆ’ಯೊಂದಿಗೆ ‘ಪಿಂಕಿ’ಯ ಟ್ಯಾಂಗೋ ಜುಗಲಬಂದಿ
Viral Video: ಜೀಪು ವೇಗವಾಗಿ ಚಲಿಸುತ್ತಿರುವಾಗಲೇ ರಸ್ತೆಗಿಳಿಯುವ ದುಸ್ಸಾಹಸ! ಶಾಂಕಿಂಗ್ ವಿಡಿಯೋ ನೋಡಿ
(cat has bitten and eat the snake at Chikkaballapur)
Published On - 2:09 pm, Wed, 7 July 21