Viral Video: ಜೀಪು ವೇಗವಾಗಿ ಚಲಿಸುತ್ತಿರುವಾಗಲೇ ರಸ್ತೆಗಿಳಿಯುವ ದುಸ್ಸಾಹಸ! ಶಾಂಕಿಂಗ್​ ವಿಡಿಯೋ ನೋಡಿ

ಕೆಲವು ನಂಬಲಾರದ ಸ್ಟಂಟ್​ ದೃಶ್ಯಗಳನ್ನು ನೋಡಿದಾಕ್ಷಣ ಮೈ ಜುಂ.. ಎನ್ನುವುದಂತೂ ಸತ್ಯ. ಅಂಥಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Viral Video: ಜೀಪು ವೇಗವಾಗಿ ಚಲಿಸುತ್ತಿರುವಾಗಲೇ ರಸ್ತೆಗಿಳಿಯುವ ದುಸ್ಸಾಹಸ! ಶಾಂಕಿಂಗ್​ ವಿಡಿಯೋ ನೋಡಿ
ಜೀಪು ವೇಗವಾಗಿ ಚಲಿಸುತ್ತಿರುವಾಗಲೇ ರಸ್ತೆಗಿಳಿಯುವ ದುಸ್ಸಾಹಸ!
TV9kannada Web Team

| Edited By: Apurva Kumar Balegere

Jul 07, 2021 | 4:10 PM

ಸೋಷಿಯಲ್​ ಮೀಡಿಯಾದಲ್ಲಿ ಅದೆಷ್ಟೋ ಸ್ಟಂಟ್​ ವಿಡಿಯೋಗಳು ಹರಿದಾಡುತ್ತಿರುತ್ತವೆ. ಕೆಲವು ವಿಡಿಯೋ ನೋಡಿದಾಕ್ಷಣ ಇದು ಸಾಧ್ಯನಾ.. ಎಂದು ಆಶ್ಚರ್ಯವೂ ಆಗುತ್ತದೆ. ವಾಹನಗಳು ಚಲಿಸುತ್ತಿರುವಾಗ ಸ್ಟಂಟ್​ ಮಾಡುವುದು ಅಷ್ಟು ಸುಲಭದ ಮಾತಲ್ಲ! ಸಾಮಾನ್ಯ ಜನರು ಅದನ್ನು ಪ್ರಯತ್ನಿಸುವುದೂ ಸರಿಯಲ್ಲ. ಜೀಪು ಚಲಿಸುತ್ತಿರುವಾಗಲೇ ಪ್ರಯಾಣಿಕರು ಬಾಗಿಲು ತೆಗೆದು ಒಬ್ಬಾರದ ಮೇಲೆ ಒಬ್ಬರು ಇಳಿಯುತ್ತಿದ್ದಾರೆ. ಈ ದೃಶ್ಯ ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ. ವಿಡಿಯೋ ನೋಡಿದಾಕ್ಷಣ ಒಮ್ಮೆಲೆ ಭಯವೂ ಆಗುವಂತಿದೆ.

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ಸಾಹದ ವಿಡಿಯೋಗಳು ಹರಿದಾಡುತ್ತವೆ. ಅಷ್ಟೇ ತಮಾಷೆಯ ವಿಡೀಯೋಗಳನ್ನು ನೋಡಿ ಜನರು ನಕ್ಕಿದ್ದೂ ಇದೆ. ಏತನ್ಮಧ್ಯೆ ಯುವಜನತೆಯ ಪ್ರತಿಭೆಯ ವಿಡಿಯೋಗಳೂ ಸಹ ಹರಿದಾಡುತ್ತವೆ. ಕೆಲವು ನಂಬಲಾರದ ಸ್ಟಂಟ್​ ದೃಶ್ಯಗಳನ್ನು ನೋಡಿದಾಕ್ಷಣ ಮೈ ಜುಂ.. ಎನ್ನುವುದಂತೂ ಸತ್ಯ. ಅಂಥಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇತ್ತೀಚಿನ ಜನರು ಅಪಾಯಕಾರಿ ಸಾಹಸಗಳನ್ನು ಮಾಡುತ್ತಿದ್ದಾರೆ. ಜನರು ತಮ್ಮ ಜೀವದ ಬಗ್ಗೆಯೂ ಕಾಳಜಿ ವಹಿಸುತ್ತಿಲ್ಲ. ಇಂತಹ ವಿಡಿಯೋಗಳು ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತದೆ. ಇನ್ನಿತರರಿಗೆ ಎಚ್ಚರಿಕೆ ಸಂದೇಶವನ್ನೂ ಸಾರುತ್ತದೆ.

ನಿರ್ಜನ ಪ್ರದೇಶದ ಹೈವೇ ರಸ್ತೆಯಲ್ಲಿ ಜೀಪನ್ನು ಓಡಿಸಲಾಗುತ್ತಿದೆ. ಜೀಪು ಚಲಿಸುತ್ತಿದ್ದಾಗಲೇ ಬಾಗಿಲು ತೆರೆದು ರಸ್ತೆಗಿಳಿಯುವ ಪ್ರಯತ್ನವನ್ನು ಪ್ರಯಾಣಿಕರು ಮಾಡುತ್ತಿದ್ದಾರೆ. ಒಬ್ಬರಾದ ಮೇಲೆ ಒಬ್ಬರು ರಸ್ತೆಗಿಳಿದು ಪುನಃ ಜೀಪನ್ನು ಹತ್ತುವ ಸಾಹಸವನ್ನೂ ಮಾಡುತ್ತಿದ್ದಾರೆ. ಜೀಪು ಅಡ್ಡವಾಗಿ ಎರಡೇ ಚಕ್ರದಲ್ಲಿ ಚಲಿಸುತ್ತಿದೆ. ವಿಡಿಯೋ ನೋಡಿದಾಕ್ಷಣ ಇನ್ನೇನು ಜೀಪು ಪಲ್ಟಿಯಾಗುತ್ತದೆಯೇನೋ ಎಂದೆನಿಸುತ್ತದೆ.

ವಿಡಿಯೋ ನೋಡಿದಾಕ್ಷಣ ನಿಮಗೆ ಅನಿಸಿರಬಹುದು.. ಈ ಸ್ಟಂಟ್​ ಎಷ್ಟು ಭಯಂಕರವಾಗಿದೆ ಜತೆಗೆ ಅಪಾಯವನ್ನೂ ತರಬಹುದು. ವಿಡಿಯೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ 53 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಆದರೆ ಯಾವುದೇ ಕಾರಣಕ್ಕೂ ಸಹ ಇಂತಹ ಅಪಾಯಕಾರಿ ಸ್ಟಂಟ್​ಗಳನ್ನು ಪ್ರಯತ್ನಿಸದಿರಿ.

ಇದನ್ನೂ ಓದಿ:

ಹಾಯಾಗಿದೆ ಪ್ರಯಾಣವೆನ್ನುತ್ತಾ.. ಮೆಟ್ರೋ ರೈಲಿನಲ್ಲಿ ಮಂಗನ ಸ್ಟಂಟ್​! ವಿಡಿಯೋ ನೋಡಿ

Viral Video: ಬೈಕ್​ನಲ್ಲಿ ಸ್ಟಂಟ್ ಮಾಡಿದ ಹುಡುಗಿಯರಿಗೆ ಪೊಲೀಸರಿಂದ ಭರ್ಜರಿ ಗಿಫ್ಟ್! ಸರ್ಕಸ್ ಮಾಡಿದವರಿಗೆ ಸಂಕಷ್ಟ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada