ಕರ್ನಾಟಕಕ್ಕೆ ಮತ್ತೆ ಹಿನ್ನೆಡೆ: CWRC ಹೇಳಿದಷ್ಟೇ ನೀರು ಹರಿಸಬೇಕೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ

| Updated By: ರಮೇಶ್ ಬಿ. ಜವಳಗೇರಾ

Updated on: Aug 29, 2023 | 6:27 PM

ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನೆಡೆಯಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ( CWRC) ಹೇಳಿದಷ್ಟೇ ನೀರು ಹರಿಸಬೇಕೆಂದು ಇಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನವಾಗಿದೆ. ಇದರಿಂದ ಕರ್ನಾಟಕ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.

ಕರ್ನಾಟಕಕ್ಕೆ ಮತ್ತೆ ಹಿನ್ನೆಡೆ: CWRC ಹೇಳಿದಷ್ಟೇ ನೀರು ಹರಿಸಬೇಕೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ
Follow us on

ನವದೆಹಲಿ, (ಆಗಸ್ಟ್ 29): ಕಾವೇರಿ ನದಿ ನೀರಿಗಾಗಿ(Cauvery Water) ಕರ್ನಾಟಕದ ಜೊತೆ ತಮಿಳುನಾಡು(Tamil Nadu) ಕ್ಯಾತೆ ಮುಂದುವರೆಸಿದ್ದು, ಅಂತಿಮವಾಗಿ ಕಾವೇರಿ ನೀರು ನಿಯಂತ್ರಣ ಸಮಿತಿ (Cauvery Water Regulation Committee ) ಹೇಳಿದಷ್ಟೆ ನೀರು ಬಿಡಬೇಕೆಂಬ ನಿರ್ಧಾರವಾಗಿದೆ. ಇಂದು (ಆಗಸ್ಟ್ 29) ನವದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ(Cauvery Water Management Authority) ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಲ್ಲ ಆಗಲ್ಲ ಎಂದು ಕರ್ನಾಟಕದ ಅಧಿಕಾರಿಗಳು ಪಟ್ಟು ಹಿಡಿದರು. ಅತ್ತ ತಮಿಳುನಾಡು ಸಹ ಯಾವ ಆಧಾರದ ಮೇಲೆ ನೀರು ಬಿಡಲು ಅಸಾಧ್ಯ ಎಂದು ಹೇಳುತ್ತೀರಿ. ಮೆಥಡಾಲೋಜಿಯನ್ನು ಸಭೆಯ ಮುಂದಿಡಿ ಎಂದು ತಮಿಳುನಾಡು ಅಧಿಕಾರಿಗಳ ಪಟ್ಟು ಹಿಡಿದರು. ಅಂತಿಮವಾಗಿ ಕಾವೇರಿ ನೀರು ನಿಯಂತ್ರಣ ಸಮಿತಿ CWRC ಹೇಳಿದಷ್ಟೆ ನೀರು ಬಿಡಬೇಕೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರಿಂದ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ.

ಮುಂದಿನ 15 ದಿನ ನಿತ್ಯ 5000 ಕ್ಯೂಸೆಕ್ ನೀರು ಹರಿಸಬೇಕು ಎಂದು ನಿನ್ನೆ(ಆಗಸ್ಟ್ 28) ನಡೆದ ಸಭೆಯಲ್ಲಿ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿತ್ತು. ಇದಕ್ಕೆ ಕರ್ನಾಟಕವು ಸಹ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇಂದು ನಡೆದ ಸಭೆಯಲ್ಲೂ ಸಹ ಯಾವುದೇ ಕಾರಣಕ್ಕೂ ನೀರು ಹರಿಸಲು ಆಗುವುದಿಲ್ಲ ಎಂದು ಕರ್ನಾಟಕ ಅಧಿಕಾರಿಗಳು ವಾದ ಮಂಡಿಸಿದರು.

ಇದನ್ನೂ ಓದಿ: ಕರ್ನಾಟಕಕ್ಕೆ ಬಿಗ್ ಶಾಕ್, ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚನೆ

ಕರ್ನಾಟಕದ ಪರಿಸ್ಥಿತಿ ಬಹಳ ಕಠಿಣವಾಗಿದೆ. ಹೀಗಾಗಿ ತಮಿಳುನಾಡಿಗೆ ಡ್ಯಾಮ್​ನಿಂದ ನೀರು ಬಿಡಲು ಸಾಧ್ಯವಿಲ್ಲ. CWMA ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ಪ್ರಸ್ತಾಪಿಸಿದರು. ಇದರಿಂದ CWMA ಕರ್ನಾಟಕದ ವಾಸ್ತವ ಸ್ಥಿತಿ ಬಗ್ಗೆ ತಮಿಳುನಾಡು ಪರ ಅಧಿಕಾರಿಗಳಿಗೆ ಮನರಿಕೆ ಮಾಡಿಕೊಡಲು ಕಸರತ್ತು ನಡೆಸಿತು. ಆದ್ರೆ, ಇದಕ್ಕೆ ಒಪ್ಪದ ತಮಿಳುನಾಡು ಅಧಿಕಾರಿಗಳು, ಯಾವ ಆಧಾರದ ಮೇಲೆ ನೀರು ಬಿಡಲು ಅಸಾಧ್ಯ ಎಂದು ಹೇಳುತ್ತೀರಿ. ಮೆಥಡಾಲೋಜಿ ಸಭೆಯ ಮುಂದಿಡಿ ಎಂದು ಪಟ್ಟು ಹಿಡಿದರು. ಅಂತಿಮವಾಗಿ ಸಭೆಯಲ್ಲಿ CWRC ಹೇಳಿದಷ್ಟೆ ನೀರು ಬಿಡಬೇಕೆಂಬ ತೀರ್ಮಾನ ಕೈಗೊಳ್ಳಲಾಯಿತು.

ನಿನ್ನೆ ಕರ್ನಾಟಕಕ್ಕೆ ಸೂಚನೆ ನೀಡಿದ್ದೇನು?

ಸದ್ಯ ಕರ್ನಾಟಕ ತಮಿಳುನಾಡಿಗೆ 1900 ಕ್ಯೂಸೆಕ್‌ ನೀರು ಹರಿಸುತ್ತಿದೆ. ಆದ್ರೆ, ನಿನ್ನೆ ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯು ಹೆಚ್ಚುವರಿಯಾಗಿ 3,100 ಕ್ಯೂಸೆಕ್ಸ್​ ನೀರು ಹರಿಸಬೇಕೆಂದು ಕರ್ನಾಟಕಕ್ಕೆ ಸೂಚಿಸಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 5:11 pm, Tue, 29 August 23