ವಿನಯ್​ ಕುಲಕರ್ಣಿಗೆ NO ರಿಲೀಫ್​: ಜಾಮೀನು ನಿರಾಕರಣೆ

ವಿನಯ್​ ಕುಲಕರ್ಣಿಗೆ ಜಾಮೀನು ನೀಡಲು ಕೋರ್ಟ್​ ನಿರಾಕರಿಸಿದೆ. ಧಾರವಾಡದ ಸಿಬಿಐ ನ್ಯಾಯಾಲಯದಿಂದ ಜಾಮೀನು ನಿರಾಕರಿಸಿ ತೀರ್ಪು ನೀಡಲಾಗಿದೆ.

ವಿನಯ್​ ಕುಲಕರ್ಣಿಗೆ NO ರಿಲೀಫ್​: ಜಾಮೀನು ನಿರಾಕರಣೆ
ಮಾಜಿ ಸಚಿವ ವಿನಯ್​ ಕುಲಕರ್ಣಿ
KUSHAL V

|

Dec 14, 2020 | 6:11 PM

ಧಾರವಾಡ: ವಿನಯ್​ ಕುಲಕರ್ಣಿಗೆ ಜಾಮೀನು ನೀಡಲು ಕೋರ್ಟ್​ ನಿರಾಕರಿಸಿದೆ. ಧಾರವಾಡದ ಸಿಬಿಐ ನ್ಯಾಯಾಲಯದಿಂದ ಜಾಮೀನು ನಿರಾಕರಿಸಿ ತೀರ್ಪು ನೀಡಲಾಗಿದೆ.

ಧಾರವಾಡ ಜಿ.ಪಂ.ಸದಸ್ಯ ಯೋಗೀಶ್​ ಗೌಡ ಹತ್ಯೆ ಕೇಸ್​ನಲ್ಲಿ ವಿನಯ್​ ಕುಲಕರ್ಣಿಗೆ ಜಾಮೀನು ನಿರಾಕರಣೆಯಾಗಿದೆ. ಸದ್ಯ ಮಾಜಿ ಸಚಿವ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ.

ಇತ್ತ, ಯೋಗೀಶ್​ಗೌಡ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ವಿನಯ್​ ಕುಲಕರ್ಣಿ ಸೋದರಮಾವ ಚಂದ್ರಶೇಖರ ಇಂಡಿಯನ್ನು ಡಿ.28ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯದಿಂದ ಆದೇಶ ನೀಡಲಾಗಿದೆ. ಚಂದ್ರಶೇಖರನನ್ನು ಅಕ್ರಮ ಶಸ್ತ್ರಾಸ್ತ್ರ ಪೂರೈಸಿದ್ದ ಆರೋಪದಡಿ CBI ಅಧಿಕಾರಿಗಳು ಬಂಧಿಸಿದ್ದರು. ಚಂದ್ರಶೇಖರ ಇಂಡಿಯನ್ನ ಧಾರವಾಡದ ಸೆಂಟ್ರಲ್ ಜೈಲಿಗೆ  ಶಿಫ್ಟ್​ ಮಾಡಲಾಗಿದೆ.

ಯೋಗೀಶ್ ಗೌಡ ಹತ್ಯೆ ಕೇಸ್: ಪ್ರಮುಖ ಆರೋಪಿ ಕೊಲೆಗೆ ಮಾಜಿ ಸಚಿವರಿಂದ ನಡೆದಿತ್ತಾ ಸ್ಕೆಚ್?​

ವಿನಯ್ ಕುಲಕರ್ಣಿಯ ಸೋದರ ಮಾವ ಅರೆಸ್ಟ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada