ಈ‌ ಹಿಂದೆ HDK ನಮಗೆ ಸಾಕಷ್ಟು ನೋವು ಕೊಟ್ಟಿದ್ದಾರೆ, ಚಪ್ಪಲಿಯಿಂದೆಲ್ಲಾ ಹೊಡೆಸಿದ್ದಾರೆ -ನಾರಾಯಣಗೌಡ

ಹೆಚ್.ಡಿ. ಕುಮಾರಸ್ವಾಮಿ ನಮಗೆ ಸಾಕಷ್ಟು ನೋವು ಕೊಟ್ಟಿದ್ದಾರೆ. ನಮಗೆ ಚಪ್ಪಲಿಯಿಂದೆಲ್ಲಾ ಹೊಡೆಸಿದ್ದಾರೆ ಎಂದು ಮಂಡ್ಯ ಜಿಲ್ಲೆ K.R.ಪೇಟೆಯಲ್ಲಿ ಸಚಿವ ನಾರಾಯಣಗೌಡ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಈ‌ ಹಿಂದೆ HDK ನಮಗೆ ಸಾಕಷ್ಟು ನೋವು ಕೊಟ್ಟಿದ್ದಾರೆ, ಚಪ್ಪಲಿಯಿಂದೆಲ್ಲಾ ಹೊಡೆಸಿದ್ದಾರೆ -ನಾರಾಯಣಗೌಡ
ಸಚಿವ ನಾರಾಯಣಗೌಡ
Ayesha Banu

| Edited By: sadhu srinath

Dec 14, 2020 | 3:02 PM

ಮಂಡ್ಯ: ಈ‌ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ನಮಗೆ ಸಾಕಷ್ಟು ನೋವು ಕೊಟ್ಟಿದ್ದಾರೆ. ನಮಗೆ ಚಪ್ಪಲಿಯಿಂದೆಲ್ಲಾ ಹೊಡೆಸಿದ್ದಾರೆ ಎಂದು ಮಂಡ್ಯ ಜಿಲ್ಲೆ K.R. ಪೇಟೆಯಲ್ಲಿ ಸಚಿವ ನಾರಾಯಣಗೌಡ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಬಿಜೆಪಿ ಜತೆ ಜೆಡಿಎಸ್ ಪಕ್ಷದ ವಿಲೀನ ವದಂತಿ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಚಿವ ನಾರಾಯಣಗೌಡ, HD ಕುಮಾರಸ್ವಾಮಿ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಕುಮಾರಸ್ವಾಮಿ ಈ ಬಗ್ಗೆ ಮಂಡ್ಯದಲ್ಲಿ ನಾಲ್ಕು ಜನರ ಜೊತೆ ಮಾತನಾಡಿದ್ದಾರೆ.

ಯಡಿಯೂರಪ್ಪರನ್ನ ಅವರು ಟಚ್ ಸಹ ಮಾಡಲು ಸಾಧ್ಯವಿಲ್ಲ: ನಾನು ಸಿಎಂ ಆಗುತ್ತೇನೆ, ನಿಮ್ಮನ್ನ ಮಂತ್ರಿ ಮಾಡ್ತೇನೆ ಅಂದಿದ್ದಾರೆ. ಹೀಗೆ ಅಂದುಕೊಂಡರೆ ಅದು ಕುಮಾರಸ್ವಾಮಿಯವರ ಭ್ರಮೆ. ವಿಲೀನ ವಿಚಾರ ಮೇಲ್ಮಟ್ಟಕ್ಕೆ ಬಿಟ್ಟಿದ್ದು, ಬಿಜೆಪಿಗೆ ಇದರ ಅಗತ್ಯವಿಲ್ಲ, ಬಿಜೆಪಿಗೆ 120 ಸೀಟ್‌ಗಳು ಇವೆ. ಯಡಿಯೂರಪ್ಪರನ್ನ ಅವರು ಟಚ್ ಸಹ ಮಾಡಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ.

ಇನ್ನು ಈ‌ ಹಿಂದೆ ಕುಮಾರಸ್ವಾಮಿ ನಮಗೆ ಸಾಕಷ್ಟು ನೋವು ಕೊಟ್ಟಿದ್ದಾರೆ. ನಮಗೆ ಚಪ್ಪಲಿಯಲ್ಲೆಲ್ಲ ಹೊಡೆಸಿದ್ದಾರೆ. ಅವರು ನಾನೀಗ ಸಿಎಂ ಆಗ್ತೀನಿ ಅಂದುಕೊಂಡರೆ ಅದು ಅವರ ಭ್ರಮೆ. ಆ ಭ್ರಮೆಯಿಂದ ಕುಮಾರಸ್ವಾಮಿ ಮೊದಲು ಹೊರಬರಬೇಕು.

ಅವರಿಗೆ ಪವರ್ ಇದ್ದಾಗ ಏನೂ ಮಾಡಲಿಲ್ಲ. ಈಗ ಪವರ್ ಇಲ್ಲ. ಆದ್ರೂ ಅದು ಇದು ಅಂತಾ ಮಾತಾಡುತ್ತಾರೆ. JDS ಹೆಸರಿನಲ್ಲಿ ನಿಂತ್ರೆ ಕೆ.ಆರ್.ಪೇಟೆಯಲ್ಲಿ ಒಂದು ಚಿಕ್ಕ ಮಗು ಕೂಡ ಗೆಲ್ಲುತ್ತ ಅಂತಿದ್ರು. ಈಗ ಅವರ ಮಗ ಸಹ ಗೆಲ್ಲಲು ಸಾಧ್ಯವಾಗಿಲ್ಲ. ಆ ನೋವು ಅವರಿಗೆ ಇದೆ ಎಂದು ನಾರಾಯಣಗೌಡ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ನಾಮಪತ್ರ ಸಲ್ಲಿಸಿದ ನಾರಾಯಣ ಗೌಡಗೆ ಚಪ್ಪಲಿ ಎಸೆತ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada