ಆರ್ಟಿಜಿಎಸ್ ಮೂಲಕ ಇನ್ನು ಮುಂದೆ 24X7 ಹಣ ವರ್ಗಾವಣೆ ಸಾಧ್ಯ
ಆರ್ಟಿಜಿಎಸ್ ಸೌಲಭ್ಯ 24X7 ಲಭ್ಯವಿರುವ ಕೆಲವೇ ದೇಶಗಳ ಸಾಲಿಗೆ ಭಾರತವೂ ಇಂದಿನಿಂದ (ಡಿ.14) ಸೇರ್ಪಡೆಯಾಗಿದೆ. ಈ ವಿಷಯವನ್ನು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

ದೆಹಲಿ: ಹೆಚ್ಚಿನ ಮೌಲ್ಯದ ಹಣ ವರ್ಗಾವಣೆಗೆ ಬಳಸುವ ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ ಸಿಸ್ಟಮ್ (RTGS) ಸೌಲಭ್ಯ ಇನ್ನು ಮುಂದೆ ದಿನವಿಡೀ ಲಭ್ಯ. ಆರ್ಟಿಜಿಎಸ್ ಸೌಲಭ್ಯ 24X7 ಲಭ್ಯವಿರುವ ಕೆಲವೇ ದೇಶಗಳ ಸಾಲಿಗೆ ಭಾರತವೂ ಇಂದಿನಿಂದ (ಡಿ.14) ಸೇರ್ಪಡೆಯಾಗಿದೆ. ಈ ವಿಷಯವನ್ನು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಎನ್ಇಎಫ್ಟಿ ಮೂಲಕ ಹಣ ವರ್ಗಾವಣೆಯನ್ನು 24×7 ಚಾಲ್ತಿಗೆ ತಂದ ಕೇವಲ ಒಂದು ವರ್ಷದೊಳಗೆ ಆರ್ಟಿಜಿಎಸ್ ವ್ಯವಸ್ಥೆಯನ್ನೂ ಆರ್ಬಿಐ ಸದಾ ಲಭ್ಯದ ಸ್ಥಿತಿಗೆ ತಂದಿದೆ. ದೇಶದಲ್ಲಿ ಕೇವಲ 4 ಬ್ಯಾಂಕ್ಗಳ ಸಹಯೋಗದೊಂದಿಗೆ ಆರ್ಟಿಜಿಎಸ್ ಸೇವೆ ಮಾರ್ಚ್ 26, 2004 ರಂದು ಆರಂಭವಾಗಿತ್ತು. ಈಗ 237 ಬ್ಯಾಂಕ್ಗಳಲ್ಲಿ ಆರ್ಟಿಜಿಎಸ್ ಸೇವೆ ಲಭ್ಯವಿದ್ದು, ವಾರ್ಷಿಕ ₹ 6.35 ಲಕ್ಷ ಕೋಟಿ ವಹಿವಾಟು ನಡೆಯುತ್ತಿದೆ.
ನವೆಂಬರ್ 2020ರಲ್ಲಿ ಆರ್ಟಿಜಿಎಸ್ನ ಸರಾಸರಿ ವಹಿವಾಟು ಪ್ರಮಾಣ ₹ 57.96ಕ್ಕೇರಿತ್ತು. ಐಎಸ್ಒ 20022ರ ಮಾನಕಗಳಿಗೆ ಅನುಗುಣವಿರುವ ನಿರ್ವಹಣಾ ವ್ಯವಸ್ಥೆಯ ಮೂಲಕ ಕೆಲಸ ಮಾಡುತ್ತಿದೆ. ಭಾರತೀಯ ಹಣಕಾಸು ಮಾರುಕಟ್ಟೆಗಳ ಕಾರ್ಯಾಚರಣೆಯನ್ನು ಹೆಚ್ಚಿಸಲು ಮತ್ತು ಗಡಿಯಾಚೆಗಿನ ಪಾವತಿಗಳನ್ನು ಹತೋಟಿಗೆ ತರಲು ಇದು ಸಹಾಯಕವಾಗಿದೆ ಎಂದು ಆರ್ಬಿಐ ಹೇಳಿದೆ.
ಈ ಹಿಂದೆ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಸಲುವಾಗಿ ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ಮೂಲಕ ನಡೆಯುವ ವಹಿವಾಟುಗಳ ಮೇಲಿನ ಶುಲ್ಕ ರದ್ದತಿಗೆ ಆರ್ಬಿಐ ನಿರ್ಧರಿಸಿತ್ತು.
RBI ನಿರ್ಲಕ್ಷ್ಯವೇ ಲಕ್ಷ್ಮಿ ವಿಲಾಸ್ ಬ್ಯಾಂಕ್ ದುಃಸ್ಥಿತಿಗೆ ಕಾರಣವಾಯ್ತು: ಹಣಕಾಸು ಸಚಿವೆಗೆ AIBEA ದೂರು