AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭ್ರೂಣಹತ್ಯೆ ತಡೆಗೆ ಚನ್ನೇಶ್ ರೂಪಿಸಿದ ಮಾಸ್ಟರ್​ಪ್ಲಾನ್ ಇದು: ಒಂದೇ ನಂಬರ್​ನಲ್ಲಿ ಸಮಗ್ರ ಮಾಹಿತಿ

ಗರ್ಭಿಣಿಯ ತಪಾಸಣೆಯ ಮಾಹಿತಿಯೂ ಇದೇ ಕೋಡ್​ನಲ್ಲಿ ದಾಖಲಾಗಿರುತ್ತದೆ. ಒಂದು ವೇಳೆ ಆಕೆ ಮೂರ್ನಾಲ್ಕು ತಿಂಗಳು ತಪಾಸಣೆಗೆ ಬಾರದಿದ್ದರೆ ಅಂಥವರು ಭ್ರೂಣ ಹತ್ಯೆಗೆ ಮುಂದಾಗಿರಬಹುದು ಎಂಬ ಶಂಕೆ ಮೂಡುತ್ತದೆ. ಅಂಥವರನ್ನು ಆರೋಗ್ಯಕಾರ್ಯಕರ್ತರು ಭೇಟಿಯಾಗಿ ವಾಸ್ತವ ಪರಿಶೀಲಿಸಬಹುದು.

ಭ್ರೂಣಹತ್ಯೆ ತಡೆಗೆ ಚನ್ನೇಶ್ ರೂಪಿಸಿದ ಮಾಸ್ಟರ್​ಪ್ಲಾನ್ ಇದು: ಒಂದೇ ನಂಬರ್​ನಲ್ಲಿ ಸಮಗ್ರ ಮಾಹಿತಿ
ಸಾಂದರ್ಭಿಕ ಚಿತ್ರ
Follow us
shruti hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 14, 2020 | 5:36 PM

ದಾವಣಗೆರೆ: ತಾಯಿಯ ಗರ್ಭದಲ್ಲಿರುವಾಗಲೇ ಭ್ರೂಣಕ್ಕೊಂದು ಕೋಡ್ ಕೊಡುವ ಹೊನ್ನಾಳಿ ತಾಲ್ಲೂಕು ಹಳ್ಳೂರು ಗ್ರಾಮದ ಸಾಮಾಜಿಕ ಕಾರ್ಯಕರ್ತ ಚನ್ನೇಶ್ ಜಕ್ಕಳ್ಳಿ ಅಭಿವೃದ್ಧಿಪಡಿಸಿದ್ದಾರೆ.

ಸ್ತ್ರೀ ಭ್ರೂಣಹತ್ಯೆ ತಡೆಯುವ ಪರಿಣಾಮಕಾರಿ ಕ್ರಮಗಳ ಬಗ್ಗೆ ಯೋಚಿಸುತ್ತಿದ್ದ ಚನ್ನೇಶ್ ಅವರಿಗೆ ಹೊಸತೊಂದು ಆಲೋಚನೆ ಬಂತು. ತಾಯಿಯ ಗರ್ಭದಲ್ಲಿ ಇರುವಾಗಲೇ ಮದರ್​ ನಂಬರ್ ರೂಪಿಸಿ, ಭ್ರೂಣಕ್ಕೆ ಡಿಜಿಟಲ್ ಸಂಕೇತ ಕೊಡುವ ಮೂಲಕ ಸಮಗ್ರ ಮಾಹಿತಿಯನ್ನು ಒಂದೆಡೆ ಕ್ರೋಡೀಕರಿಸಬಹುದು ಎನಿಸಿತು ಅವರಿಗೆ.

ಇದು ಬಹುತೇಕ ಕಂಡಕ್ಟರ್ ಇಟಿಎಂ ಯಂತ್ರ ಬಳಸಿ ಟಿಕೆಟ್ ಕೊಡುವ ವ್ಯವಸ್ಥೆಯನ್ನೇ ಹೋಲುತ್ತದೆ. ಗ್ರಾಮದಲ್ಲಿರುವ ಗರ್ಭಿಣಿಯ ಮಾಹಿತಿಯನ್ನು ಆಶಾ ಕಾರ್ಯಕರ್ತೆಯರು ಮೇಲಾಧಿಕಾರಿಗಳಿಗೆ ವರದಿ ಮಾಡುತ್ತಾರೆ. ಆದರೆ ಈ ವ್ಯವಸ್ಥೆಯಲ್ಲಿ ಸಂಗ್ರಹಗೊಳ್ಳುವ ಮಾಹಿತಿ ಒಂದೆಡೆಯೇ ಸಿಗಲು ಸಾಧ್ಯವಿಲ್ಲ. ಮಾಹಿತಿ ಒಂದೆಡೆ ಸಿಗುವಂತಾಗಲು ಮದರ್ ನಂಬರ್ ಅಗತ್ಯ ಎಂದು ಪ್ರತಿಪಾದಿಸುತ್ತಾರೆ ಚನ್ನೇಶ್.

ಹೀಗಿರುತ್ತೆ ಮದರ್ ನಂಬರ್

ಚನ್ನೇಶ್ ಆಲೋಚನೆಯ ಮದರ್​ನಂಬರ್ ಒಟ್ಟು 12 ಅಂಕಿಗಳನ್ನು ಹೊಂದಿರುತ್ತದೆ. ಇದರಲ್ಲಿ ಮೊದಲ 2 ಅಂಕಿಗಳು ಆಯಾ ರಾಜ್ಯದ ಗುರುತು, ಮುಂದಿನ 3 ಅಂಕಿಗಳು ತಾಲೂಕಿನ ಕೋಡ್​, ಇನ್ನೆರಡು ಅಂಕಿಗಳು ಹಿರಿಯ ಆರೋಗ್ಯ ಸಹಾಯಕಿಯರ ಕೋಡ್​ ಮತ್ತು ಉಳಿದ 5 ಅಂಕಿಗಳು ತಾಯಿ ಹೆಸರಿನ ಕೋಡ್ ಆಗಿರುತ್ತದೆ. ಅಂದರೆ, 99 000 33 44231 ಎನ್ನುವ ಕೋಡ್ ಇದ್ದರೆ 99 ಎನ್ನುವುದು ಕರ್ನಾಟಕ, 000 ಹೊನ್ನಾಳಿ, 33 ಅಲ್ಲಿನ ಹಿರಿಯ ಆರೋಗ್ಯ ಸಹಾಯಕಿ, 44231 ಅಂದ್ರೆ ಗರ್ಭಿಣಿಯ ಹೆಸರಾಗಿರುತ್ತದೆ. ಇದು ಜಿಪಿಎಸ್ ಮೂಲಕ ಕೆಲಸ ಮಾಡುತ್ತದೆ.

ಪ್ರತಿ ಬಾರಿ ಮಾಹಿತಿ ಅಪ್​ಡೇಟ್ ಮಾಡುವವರು ಈ ಕೋಡ್ ಬಳಸಿದರೆ, ಒಂದೆಡೆಯೇ ಗರ್ಭಿಣಿಯೊಬ್ಬರ ಸಮಗ್ರ ಮಾಹಿತಿ ಸಂಗ್ರಹಿಸಬಹುದು. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿರುವ ಸರ್ವರ್​ನಲ್ಲಿ ಈ ಮಾಹಿತಿಯನ್ನು ಸುರಕ್ಷಿತವಾಗಿ ಸಂಗ್ರಹಿಸಿಡಬಹುದು ಎನ್ನುತ್ತಾರೆ ಅವರು.

ಇದರ ಜೊತೆಗೆ ಗರ್ಭಿಣಿಯ ತಪಾಸಣೆಯ ಮಾಹಿತಿಯೂ ಇದೇ ಕೋಡ್​ನಲ್ಲಿ ದಾಖಲಾಗಿರುತ್ತದೆ. ಒಂದು ವೇಳೆ ಆಕೆ ಮೂರ್ನಾಲ್ಕು ತಿಂಗಳು ತಪಾಸಣೆಗೆ ಬಾರದಿದ್ದರೆ ಅಂಥವರು ಭ್ರೂಣ ಹತ್ಯೆಗೆ ಮುಂದಾಗಿರಬಹುದು ಎಂಬ ಶಂಕೆ ಮೂಡುತ್ತದೆ. ಅಂಥವರನ್ನು ಆರೋಗ್ಯಕಾರ್ಯಕರ್ತರು ಭೇಟಿಯಾಗಿ ವಾಸ್ತವ ಪರಿಶೀಲಿಸಬಹುದು.

ತಮ್ಮ ಆಲೋಚನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕಾನೂನು ಸಚಿವ ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ದೇಶದ ಪ್ರತಿಷ್ಠಿತ 70 ವ್ಯಕ್ತಿಗಳಿಗೆ ಪತ್ರ ಬರೆದು ತಮ್ಮ ಯೋಜನೆಯನ್ನು ವಿವರಿಸಿದ್ದಾರೆ.

ಹತ್ತಾರು ವರ್ಷಗಳಿಂದ ಸಮಾಜ ಸೇವೆ, ದೇವದಾಸಿಯರ ಕಲ್ಯಾಣ, ಹೆಣ್ಣು ಮಕ್ಕಳ ಸುರಕ್ಷತೆ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಚನ್ನೇಶ್ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದಕ್ಕೆಂದೇ ಹೊಸಬೆಳಕು ಎಂಬ ಎನ್​ಜಿಒ ಪ್ರಾರಂಭಿಸಿದ್ದಾರೆ. ಸಂಪರ್ಕ ಸಂಖ್ಯೆ 94492 48545.

-ಬಸವರಾಜ್ ದೊಡ್ಮನಿ

ವರದಕ್ಷಿಣೆ ಕಾಟ, ಗರ್ಭಪಾತ ಮಾಡಿಸಿಕೊಳ್ಳಲು ಕಿರುಕುಳ ಆರೋಪ: ಗರ್ಭಿಣಿ ನೇಣಿಗೆ ಶರಣು

27 ವರ್ಷಗಳ ಹಿಂದಿನ ಹೆಪ್ಪುಗಟ್ಟಿದ ಭ್ರೂಣಕ್ಕೆ ಈಗ ಬಂತು ಜೀವ!

ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಸುಹಾಸ್ ಕಾರಿಗೆ ಮೀನಿನ ವಾಹನ ಡಿಕ್ಕಿ ಹೊಡೆದ ಸಿಸಿಟಿವಿ ದೃಶ್ಯ ಇಲ್ಲಿದೆ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಆಂಧ್ರ ಡಿಸಿಎಂ ಪವನ್ ಕಲ್ಯಾಣ್​​ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ಸುಹಾಸ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ:ವಿಜಯೇಂದ್ರ
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದೇನೆ, ಅಂಗೀಕರಿಸಿಲ್ಲ: ಸ್ಪೀಕರ್ ಖಾದರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯೋಗಿ ಆದಿತ್ಯನಾಥರಂತೆ ಡೇರಿಂಗ್ ರಾಜಕೀಯ ನಾಯಕನಾಗುತ್ತೇನೆಂದ SSLC ಟಾಪರ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಯತ್ನಾಳ್ ಮಾತುಗಳ ಆಡಿಯೋ ಕ್ಲಿಪ್ ಮಾಧ್ಯಮಗಳ ಮುಂದೆ ಪ್ಲೇ ಮಾಡಿದ ಪಾಟೀಲ್
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪೊಲೀಸ್ ಠಾಣೆಗಳಿಗೆ ಕೊಳ್ಳಿಯಿಡುವ ರಾಜ್ಯದಲ್ಲಿ ಕಾನೂನು ಎಲ್ಲಿರುತ್ತೆ? ಶಾಸಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಪಾಕಿಸ್ತಾನದವರು ಬೈದರೂ ದಿನೇಶ್ ಗುಂಡೂರಾವ್​ಗೆ ಏನೂ ಅನಿಸಲ್ಲ: ಅಶೋಕ
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್
ಚಿಕ್ಕಪ್ಪನ ಮಗಳ ಮದುವೆ ಅಟೆಂಡ್ ಮಾಡಿ ಸುಹಾಸ್ ಬಜ್ಪೆಗೆ ಹೋಗಿದ್ದ: ಮೋಹನ್