ಸಂಜನಾ, ರಾಗಿಣಿ ಡ್ರಗ್ಸ್ ಮಾರಾಟ ಮಾಡ್ತಿದ್ರು.. ಬಂದ ಲಾಭ ಹೇಗೆ ಹಂಚಿಕೊಳ್ತಿದ್ರು ಗೊತ್ತಾ?

ಸಂಜನಾ, ರಾಗಿಣಿ ಡ್ರಗ್ಸ್ ಮಾರಾಟ ಮಾಡ್ತಿದ್ರು.. ಬಂದ ಲಾಭ ಹೇಗೆ ಹಂಚಿಕೊಳ್ತಿದ್ರು ಗೊತ್ತಾ?

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆಯಾಗಿದೆ. ಡ್ರಗ್ಸ್ ಸಿಗದೇ ನಟಿಯರನ್ನು ಅರೆಸ್ಟ್ ಮಾಡಿದ್ದಾರೆ ಎಂದವರಿಗೆ ಅರಗಿಸಿಕೊಳ್ಳಲಾಗದ ಸತ್ಯ ಬಯಲಾಗಿದೆ. ಅರೋಪಿಗಳು ಒಳಸಂಚು ರೂಪಿಸಿ ದಂಧೆ ನಡೆಸುತ್ತಿದ್ದರು ಜೊತೆಗೆ ಡ್ರಗ್ಸ್ ವ್ಯವಹಾರ ನಡೆಸುತ್ತಿದ್ದರು ಎಂಬುವುದನ್ನು ಸಿಸಿಬಿ ಬಯಲಿಗೆಳೆದಿದೆ. ಹೀಗಾಗಿ ಸಂಜನಾ, ರಾಗಿಣಿ ಮನೆಯಲ್ಲಿ ಅಥವಾ ಅವರ ಬಳಿ ಡ್ರಗ್ಸ್ ಸಿಕ್ಕಿಲ್ಲ. ಆದರೆ ಈ ಇಬ್ಬರು ನಟಿಮಣಿಯರು ಈ ದಂಧೆಯಲ್ಲಿ ಹಣ ಮಾಡಿರುವುದು ಸಾಬೀತಾಗಿದೆ. ಈವರೆಗಿನ ತನಿಖೆಯಲ್ಲಿ ವೀರೇನ್ ಖನ್ನನೇ ಕಿಂಗ್ ಪಿನ್ ಎಂಬುವುದು ಬೆಳಕಿಗೆ ಬಂದಿದೆ. ವಿರೇನ್ […]

pruthvi Shankar

| Edited By: bhaskar hegde

Nov 09, 2020 | 1:51 PM

ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆಯಾಗಿದೆ. ಡ್ರಗ್ಸ್ ಸಿಗದೇ ನಟಿಯರನ್ನು ಅರೆಸ್ಟ್ ಮಾಡಿದ್ದಾರೆ ಎಂದವರಿಗೆ ಅರಗಿಸಿಕೊಳ್ಳಲಾಗದ ಸತ್ಯ ಬಯಲಾಗಿದೆ. ಅರೋಪಿಗಳು ಒಳಸಂಚು ರೂಪಿಸಿ ದಂಧೆ ನಡೆಸುತ್ತಿದ್ದರು ಜೊತೆಗೆ ಡ್ರಗ್ಸ್ ವ್ಯವಹಾರ ನಡೆಸುತ್ತಿದ್ದರು ಎಂಬುವುದನ್ನು ಸಿಸಿಬಿ ಬಯಲಿಗೆಳೆದಿದೆ.

ಹೀಗಾಗಿ ಸಂಜನಾ, ರಾಗಿಣಿ ಮನೆಯಲ್ಲಿ ಅಥವಾ ಅವರ ಬಳಿ ಡ್ರಗ್ಸ್ ಸಿಕ್ಕಿಲ್ಲ. ಆದರೆ ಈ ಇಬ್ಬರು ನಟಿಮಣಿಯರು ಈ ದಂಧೆಯಲ್ಲಿ ಹಣ ಮಾಡಿರುವುದು ಸಾಬೀತಾಗಿದೆ. ಈವರೆಗಿನ ತನಿಖೆಯಲ್ಲಿ ವೀರೇನ್ ಖನ್ನನೇ ಕಿಂಗ್ ಪಿನ್ ಎಂಬುವುದು ಬೆಳಕಿಗೆ ಬಂದಿದೆ. ವಿರೇನ್ ಖನ್ನ ಆಯೋಜನೆ ಮಾಡ್ತಿದ್ದ ಪಾರ್ಟಿಗಳಿಗೆ ಸೆಲೆಬ್ರೆಟಿಗಳನ್ನು ಕರೆಸಲಾಗುತ್ತಿತ್ತು. ಸೆಲೆಬ್ರೆಟಿಗಳನ್ನ ಕರೆಸಿ ಯುವ ಜನತೆಯನ್ನು ಸೆಳೆಯುತಿದ್ದರು. ಪಾರ್ಟಿಯಲ್ಲಿ ಭಾಗಿಯಾಗುತಿದ್ದ ಯುವಕ ಯುವತಿಯರಿಗೆ ಡ್ರಗ್ಸ್ ನೀಡುತಿದ್ದರು.

ಡ್ರಗ್ಸ್ ಮಾರಾಟದಿಂದ ಬಂದ ಲಾಭವನ್ನು ವಿರೇನ್ ಖನ್ನ ಹಂಚಿದ್ದಾನೆ.. ಈ ರೀತಿಯಲ್ಲಿ ನಗರದ ನಾನಾ ಭಾಗದಲ್ಲಿ ಪಾರ್ಟಿ ನಡೆಸಿ ಡ್ರಗ್ಸ್ ಮಾರಾಟ ಮಾಡಿದ್ದಾರೆ. ಡ್ರಗ್ಸ್ ಮಾರಾಟದಿಂದ ಬಂದ ಲಾಭದ ಹಣವನ್ನು ರಾಗಿಣಿ ಸಂಜನಾ ಸೇರದಂತೆ ಎಲ್ಲಾ ಅರೋಪಿಗಳಿಗೆ ವಿರೇನ್ ಖನ್ನ ಹಂಚಿದ್ದಾನೆ. ಕೋಟಿ ಕೋಟಿ ವ್ಯವಹಾರ ನಡೆಸಿರುವ ವಿರೇನ್ ಖನ್ನ ಕಂಪನಿಯ ಬಹುಪಾಲು ಹಣವನ್ನು ಅಕ್ರಮವಾಗಿ ಗಳಿಸಿದ್ದ ಎಂಬ ಅನುಮಾನ ವ್ಯಕ್ತವಾಗಿದೆ.

ಸಿಸಿಬಿ ಅಧಿಕಾರಿಗಳು ಆರೋಪಿಗಳನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ. ಫೈನಾನ್ಸಿಯರ್, ಡ್ರಗ್ಸ್ ಪೆಡ್ಲರ್ಸ್, ಫೆಸಿಲಿಟೇಟರ್ಸ್ ಎಂದು ವಿಂಗಡಿಸಲಾಗಿದೆ. ಬಹುಮುಖ್ಯ ಹಣಕಾಸು ವ್ಯವಹಾರ ಮತ್ತು ವ್ಯವಸ್ಥೆಗಳನ್ನು ವಿರೇನ್ ಖನ್ನ ಮಾಡಿಸುತಿದ್ದ. ನೈಜೀರಿಯಾ ಪ್ರಜೆಗಳು ಮತ್ತು ಮೆಸ್ಸಿ , ಪ್ರತೀಕ್ ಶೆಟ್ಟಿ ಮೂಲಕ ಡ್ರಗ್ಸ್ ಪೆಡ್ಲಿಂಗ್ ಮಾಡಲಾಗುತಿತ್ತು. ರಾಗಿಣಿ ಸಂಜನಾ ಸಹ ಹಲವು ಬಾರಿ ಪೆಡ್ಲರ್ಸ್ ಜೊತೆ ನೇರವಾಗಿ ವ್ಯವಹಾರ ನಡೆಸಿದ್ದಾರೆ.

ಐಶಾರಾಮಿ ಹೋಟೆಲ್ ಬುಕ್ ಮಾಡುತಿದ್ದರು.. ವಿರೇನ್ ಖನ್ನ ತನ್ನ ಕಂಪನಿ ಮೂಲಕ ಫೆಸಿಲಿಟೇಟರ್ಸ್ ಆಗಿರುತಿದ್ದ. ವಿರೇನ್ ಖನ್ನ ರಾಗಿಣಿ ಸಂಜನಾ ಮೂಲಕ ಯುವಜನತೆಯನ್ನು ಸೆಳೆಯುತಿದ್ದ. ಸೆಲೆಬ್ರಿಟಿಗಳು ಪಾರ್ಟಿಯಲ್ಲಿ ಭಾಗಿಯಾಗ್ತಾರೆ ಎನ್ನುವುದನ್ನೆ ಬಂಡವಾಳ ಮಾಡಿಕೊಂಡು ಐಶಾರಾಮಿ ಹೋಟೆಲ್ ಬುಕ್ ಮಾಡುತಿದ್ದ.

ತನಿಖೆ ವೇಳೆ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಇದುವರೆಗೆ ಸಿಸಿಬಿ ವಶಪಡಿಸಿಕೊಂಡ ಡ್ರಗ್ಸ್ ಮೊತ್ತ ನಿಜಕ್ಕೂ ಆಘಾತಕಾರಿಯಾಗಿದೆ. ಬಾಣಸವಾಡಿ ಡ್ರಗ್ಸ್ ಕೇಸ್ ತನಿಖೆ ವೇಳೆ ಸ್ಪೋಟಕ ಮಾಹಿತಿ ಹೊರಬಿದ್ದಿದೆ. 2018 ರಿಂದಲೂ ಈ ಗ್ಯಾಂಗ್ ಸಂಪೂರ್ಣ ಆಕ್ಟಿವ್ ಆಗಿರುವುದು ತಿಳಿದುಬಂದಿದೆ.

ಬಾಣಸವಾಡಿಯಲ್ಲಿ ಸಿಸಿಬಿ ವಶಪಡಿಸಿಕೊಂಡಿದ್ದ ಡ್ರಗ್ಸ್ ಮೌಲ್ಯ ಎಷ್ಟು? ಬಾಣಸವಾಡಿಯಲ್ಲಿ ಸಿಸಿಬಿ ವಶಪಡಿಸಿಕೊಂಡಿದ್ದ ಒಂದೂವರೆ ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದಿಲ್ಲಾ ಅಂದಿದ್ರೆ ಆದಿತ್ಯ ಅಗರ್ವಾಲ್ ಮೂಲಕ ವಿರೇನ್ ಖನ್ನ ತಲುಪುತಿತ್ತು. ಖನ್ನ ಬಳಿಗೆ ಡ್ರಗ್ಸ್ ತಲುಪುವ ಮೊದಲೆ ಸೀಜ್ ಮಾಡಲಾಗಿದ್ದ ಕಾರಣ ಡ್ರಗ್ಸ್ ಎಲ್ಲಿಗೆ ತಲುಪುತಿತ್ತು ಎಂದು ತಿಳಿದಿರಲಿಲ್ಲ. ಈಗ ತನಿಖೆ ವೇಳೆ ಡ್ರಗ್ಸ್ ಖನ್ನ ಮೂಲಕ ಪಾರ್ಟಿಯಲ್ಲಿ ಹಂಚಿಕೆ ಮಾಡುತ್ತಿದ್ದರು ಎಂಬುದು ಬಹಿರಂಗವಾಗಿದೆ.

ನಗರದ ಹೈಫೈ ಪಾರ್ಟಿಯಲ್ಲಿ ಡ್ರಗ್ಸ್ ಮಾರಾಟವಾಗಿರುವುದು ತಿಳಿದುಬಂದಿದೆ. ಸಂಜನಾ ರಾಗಿಣಿ ತೆರಳುತಿದ್ದ ಪಾರ್ಟಿಗಳಲ್ಲಿ ಕೋಟಿ ಕೋಟಿ ಮೌಲ್ಯದ ಡ್ರಗ್ಸ್ ಮಾರಾಟ ನಡೆದಿದೆ. ನಿರಂತರವಾಗಿ ಪಾರ್ಟಿ ಆಯೋಜನೆ ಮಾಡಿದ್ದಕ್ಕೆ ಸೂಕ್ತ ಸಾಕ್ಷಿಗಳು ಲಭ್ಯವಾಗಿವೆ. ಪಾರ್ಟಿಗಳಲ್ಲಿ ತಾವು ಡ್ರಗ್ಸ್ ಸೇವನೆ ಮಾಡಿ ಬರುವವರಿಗೂ ಡ್ರಗ್ಸ್ ಸೇವನೆ ಮಾಡುವಂತೆ ಪ್ರೇರೇಪಿಸುತ್ತಿದ್ದ ನಟಿಯರು ಹಲವು ಬಾರಿ ಡ್ರಗ್ಸ್ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

ನಟಿಯರು ಕಡಿಮೆ ಪ್ರಮಾಣದಲ್ಲಿ ಡ್ರಗ್ಸ್ ಸೇವನೆ ಮಾಡಿರಬಹುದು.. ಇದುವರೆಗೆ ಪಾರ್ಟಿಗಳಲ್ಲಿ ಎಷ್ಟು ಡ್ರಗ್ಸ್ ಮಾರಾಟ ಆಗಿದೆ ಎಂಬುದರ ಪತ್ತೆಯೇ ಅಗಿಲ್ಲಾ. ಕೋಟಿಗಳ ಲೆಕ್ಕದಲ್ಲಿ ಕಳೆದ ಮೂರು ವರ್ಷಗಳಿಂದಲೂ ನಿರಂತರವಾಗಿ ಡ್ರಗ್ಸ್ ಮಾರಾಟವಾಗಿದೆ. ನಟಿಯರು ಕಡಿಮೆ ಪ್ರಮಾಣದಲ್ಲಿ ಡ್ರಗ್ಸ್ ಸೇವನೆ ಮಾಡಿರಬಹುದು ಆದ್ರೆ ಬೃಹತ್ ಪ್ರಮಾಣದ ಮಾರಾಟ ಮಾಡಿದ್ದಾರೆ ಎಂಬುದು ಬಹಿರಂಗವಾಗಿದೆ.

ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣ ಕೇಸ್​ನಲ್ಲಿ ಸಿಸಿಬಿ ಬಳಿ ಸಾಕ್ಷಿ ನುಡಿದವರಿಗೆ ಭಯ ಶುರುವಾಗಿದೆ. ಸಾಕ್ಷಿ ನುಡಿದ ಬಳಿಕ ಸಿಸಿಬಿ ಮುಂದೆ ಸಾಕ್ಷಿಗಳು ಭಯ ವ್ಯಕ್ತಪಡಿಸಿದ್ದಾರೆ. ಎರಡು ಪ್ರತ್ಯೇಕ FIR ಸಮಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಒಟ್ಟು ನಲವತ್ತೆರಡಕ್ಕು ಹೆಚ್ಚಿನ ಸಾಕ್ಷಿ ಕಲೆ ಹಾಕಿದ್ದಾರೆ. ಪ್ರತ್ಯಕ್ಷ ಸಾಕ್ಷಿಗಳು ಮತ್ತು ಸಾಂದರ್ಭಿಕ ಸಾಕ್ಷಿಗಳನ್ನು ಕಲೆ ಹಾಕಲಾಗಿದೆ.

ಸಾಕ್ಷಿಗಳಿಗೆ ಜೀವ ಭಯ ಇದೆ.. ಸಿಸಿಬಿ ಅಧಿಕಾರಿಗಳು ಹಲವು ಸಾಕ್ಷಿಗಳ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ಜೊತೆಗೆ ಡ್ರಗ್ಸ್ ಸಪ್ಲೈ ಮತ್ತು ಖಾಸಗಿ ಪಾರ್ಟಿಗಳಲ್ಲಿ ಭಾಗಿಯಾಗಿದ್ದವರ ಹಾಗೂ ಕೆಲಸ ಮಾಡಿದವರನ್ನು ಸೇರಿ ಹಲವರನ್ನು ಸಾಕ್ಷಿಯಾಗಿ ಮಾಡಿಕೊಂಡಿದೆ. ಸಾಕ್ಷಿಗಳು ಹಲವು ಪ್ರಭಾವಿಗಳ ವಿರುದ್ದ ಸತ್ಯ ನುಡಿದ್ದಿದ್ದಾರೆ. ಹೀಗಾಗಿ ಸಾಕ್ಷಿಗಳಿಗೆ ಜೀವ ಭಯ ಇದೆ ಎಂಬ ಮಾಹಿತಿ ತಿಳಿದುಬಂದಿದೆ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಪ್ರಮುಖ ಆರೋಪಿ ದೇಶದಿಂದಲೇ ಎಸ್ಕೇಪ್ ಆಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಶಿವಪ್ರಕಾಶ್ ಅಲಿಯಾಸ್ ಚಪ್ಪಿ ಜತೆಗೂಡಿ ಡ್ರಗ್ಸ್ ವ್ಯವಹಾರದಲ್ಲಿ ಭಾಗಿಯಾಗಿದ್ದ ಅರೋಪಿ ಎಸ್ಕೇಪ್ ಆಗಿರಬಹುದು. ಎ1 ಅಭಿಸ್ವಾಮಿ ಅಲಿಯಾಸ್ ಅಭಿಜಿತ್ ರಂಗಸ್ವಾಮಿ ಎಸ್ಕೇಪ್ ಆಗಿದ್ದಾನೆ. ಭಾರತ ಬಿಟ್ಟು ಬೇರೆ ದೇಶಕ್ಕೆ ಹೋಗಿ ತಲೆ ಮರಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿವೆ. ಸದ್ಯ ಅರೋಪಿಯು ಯಾವ ದೇಶಕ್ಕೆ ಹೋಗಿದ್ದಾನೆ ಎಂಬುದರ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕುತ್ತಿದೆ.

Follow us on

Related Stories

Most Read Stories

Click on your DTH Provider to Add TV9 Kannada