ಎಸ್​​ಐ ಹುದ್ದೆ ಕೊಡಿಸುವುದಾಗಿ 1 ಕೋಟಿ ರೂಪಾಯಿ ವಂಚಿಸಿದ್ದ ವ್ಯಕ್ತಿ ಪೊಲೀಸರ ವಶಕ್ಕೆ; ಕೆಪಿಎಸ್​ಸಿ ಹೆಸರಿನಲ್ಲಿ ಮೋಸ

| Updated By: Skanda

Updated on: Jul 08, 2021 | 2:32 PM

ಈ ಬಗ್ಗೆ ದೂರು ದಾಖಲಿಸಿದ್ದ ದಾವಣಗೆರೆಯ ಬಿ.ಜಯದೇವ ಎನ್ನುವವರು ಅರುಣ್ ಕುಮಾರ್ ವಿರುದ್ಧ ವಂಚನೆ ಆರೋಪ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ವಿಧಾನಸೌದ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಎಸ್​​ಐ ಹುದ್ದೆ ಕೊಡಿಸುವುದಾಗಿ 1 ಕೋಟಿ ರೂಪಾಯಿ ವಂಚಿಸಿದ್ದ ವ್ಯಕ್ತಿ ಪೊಲೀಸರ ವಶಕ್ಕೆ; ಕೆಪಿಎಸ್​ಸಿ ಹೆಸರಿನಲ್ಲಿ ಮೋಸ
ಬಂಧಿತ ಆರೋಪಿ
Follow us on

ಬೆಂಗಳೂರು: ಸಬ್​ಇನ್ಸ್​ಪೆಕ್ಟರ್​ ಹುದ್ದೆ ಕೊಡಿಸುವುದಾಗಿ ಆರು ಜನರಿಂದ ಒಂದು ಕೋಟಿ ರೂಪಾಯಿ ಲಂಚ ಪಡೆದು ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ಕೆಲದಿನಗಳ ಹಿಂದೆ ಬಂಧಿಸಿದ್ದ ಸಿಸಿಬಿ ಪೊಲೀಸರು ಇಂದು ಆತನನ್ನು ವಿಧಾನಸೌಧ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಕರ್ನಾಟಕ ಲೋಕಸೇವಾ ಸದಸ್ಯ ಎಂದು ಕೆಪಿಎಸ್​ಸಿ ಹೆಸರು ಹೇಳಿಕೊಂಡು ಎಲ್ಲರನ್ನೂ ನಂಬಿಸಿದ್ದ ಅರುಣ್​ ಕುಮಾರ್​ ಎಂಬಾತ ತಾನು ಭಾರೀ ಪ್ರಭಾವಿ ವ್ಯಕ್ತಿಯೆಂದೂ, ಎಸ್​ಐ ಹುದ್ದೆ ಕೊಡಿಸುವೆನೆಂದೂ ಹೇಳಿ ಲಂಚ ಪಡೆದಿದ್ದ. ಆತನನ್ನು ನಂಬಿದ್ದ ಆರು ಜನ ಒಟ್ಟು ಒಂದು ಕೋಟಿ ರೂಪಾಯಿ ನೀಡಿದ್ದರು.

ಈ ವಿಷಯದಲ್ಲಿ ಮೋಸ ಹೋಗಿರುವುದಾಗಿ ದಾವಣಗೆರೆಯ ಬಿ.ಜಯದೇವ ಎಂಬುವವರು ದೂರು ನೀಡಿದ್ದರು. ಕೆ.ಹೆಚ್.ಅರುಣ್ ಕುಮಾರ್ ಮಾತನ್ನು ನಂಬಿ ಜಯದೇವ ಅವರ ಸ್ನೇಹಿತರಾದ ಲಕ್ಷ್ಮಪ್ಪ ಮತ್ತು ಚಂದ್ರಪ್ಪ ಎಂಬ ಇಬ್ಬರು ಎಸ್​ಐ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ತನಗೆ ಎಲ್ಲರ ಲಿಂಕ್​ ಇದೆ ಎಂದು ಹೇಳಿಕೊಂಡಿದ್ದ ಅರುಣ್ ಕುಮಾರ್​, ಸ್ನೇಹಿತರಿಗೆ ಎಸ್​ಐ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿ 70 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ.

2020ನೇ ಇಸವಿಯ ಜನವರಿ 30ರಂದು 15ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದ ಅರುಣ್ ಕುಮಾರ್, ಕೆಲ ದಿನಗಳ ನಂತರ ಮತ್ತೆ 20 ಲಕ್ಷ ರೂಪಾಯಿ ಹಣವನ್ನು ತರಿಸಿಕೊಂಡಿದ್ದ. ಇಷ್ಟು ಕೊಟ್ಟ ನಂತರವೂ ಮತ್ತೆ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಇದೇ ರೀತಿ ಒಟ್ಟು 6 ಜನರಿಗೆ ಮೋಸ ಮಾಡಿದ್ದ ಆತ ಒಟ್ಟು 1 ಕೋಟಿ ರೂಪಾಯಿಗೂ ಹೆಚ್ಚು ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು.

ಈ ಬಗ್ಗೆ ದೂರು ದಾಖಲಿಸಿದ್ದ ದಾವಣಗೆರೆಯ ಬಿ.ಜಯದೇವ ಎನ್ನುವವರು ಅರುಣ್ ಕುಮಾರ್ ವಿರುದ್ಧ ವಂಚನೆ ಆರೋಪ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ವಿಧಾನಸೌದ ಠಾಣೆಯಲ್ಲಿ ದೂರು ದಾಖಲಾಗಿತ್ತು. ಒಟ್ಟು 1 ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಂಚನೆ ಮಾಡಿದ್ದ ಆರೋಪಿ ಅರುಣ್​ ಕುಮಾರ್​ನನ್ನು ಕೆಲ ದಿನಗಳ ಹಿಂದೆ ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದೀಗ ಆತನನ್ನು ವಿಧಾನಸೌಧ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ವಿಧಾನಸೌದ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:
ಐಎಂಎ ಬಹುಕೋಟಿ ವಂಚನೆ ಪ್ರಕರಣ: ಕರ್ನಾಟಕ ಸರ್ಕಾರದಿಂದ ರೋಷನ್ ಬೇಗ್ ಆಸ್ತಿ ಜಪ್ತಿ; ವಿಳಂಬಕ್ಕೆ ಹೈಕೋರ್ಟ್ ಆಕ್ಷೇಪ 

Big News: ಕೋಟ್ಯಾಂತರ ರೂ. ಮೋಸ, ವಂಚನೆ ಆರೋಪದಡಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಪಿಎ ರಾಜಣ್ಣ ಬಂಧನ