CD Case: ಅಮಿತ್ ಶಾ ಭೇಟಿಯಾದ ರಮೇಶ್ ಜಾರಕಿಹೊಳಿ; ಸಿಡಿ ಪ್ರಕರಣ ಸಂಬಂಧ ಚರ್ಚೆ?

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 03, 2023 | 2:00 PM

Ramesh Jarkiholi Meets Amit Shah- ಸಿಡಿ ಪ್ರಕರಣದ ತನಿಖೆ ಆಗಬೇಕೆಂದು ರಮೇಶ್ ಜಾರಕಿಹೊಳಿ ಮಾಡಿಕೊಂಡಿರುವ ಮನವಿಗೆ ಅಮಿತ್ ಶಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಾನೂನು ಸಂಗತಿಯನ್ನು ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಜಾರಕಿಹೊಳಿಗೆ ಅಮಿತ್ ಶಾ ಆಶ್ವಾಸನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

CD Case: ಅಮಿತ್ ಶಾ ಭೇಟಿಯಾದ ರಮೇಶ್ ಜಾರಕಿಹೊಳಿ; ಸಿಡಿ ಪ್ರಕರಣ ಸಂಬಂಧ ಚರ್ಚೆ?
ರಮೇಶ್ ಜಾರಕಿಹೊಳಿ, ಶಾಸಕ
Follow us on

ನವದೆಹಲಿ: ಡಿಕೆ ಶಿವಕುಮಾರ್ ವಿರುದ್ಧ ಸಿಡಿ ಪ್ರಕರಣದ (Ramesh Jarkiholi CD case_ ಸದ್ದು ಮಾಡುತ್ತಿರುವ ಜಾರಕಿಹೊಳಿ ಇದೀಗ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರನ್ನು ಭೇಟಿ ಮಾಡಿರುವುದು ತಿಳಿದುಬಂದಿದೆ. ಗುರುವಾರ ತಡರಾತ್ರಿ ನಡೆದಿದೆ ಎನ್ನಲಾದ ಈ ಭೇಟಿ ವೇಳೆ ಸಿಡಿ ಪ್ರಕರಣದ ಬಗ್ಗೆ ಶಾ ಜೊತೆ ಜಾರಕಿಹೊಳಿ ಮಾತನಾಡಿದ್ದಾರೆ. ಸುಮಾರು 20 ನಿಮಿಷಗಳ ಕಾಲ ನಡೆದ ಈ ಭೇಟಿಯಲ್ಲಿ ಸಿಡಿ ಪ್ರಕರಣ ಸಂಬಂಧ ತಮ್ಮಲ್ಲಿರುವ ದಾಖಲೆಗಳು, ಸಾಕ್ಷ್ಯಾಧಾರಗಳ ಮಾಹಿತಿಯನ್ನು ಗೃಹ ಸಚಿವರಿಗೆ ಜಾರಕಿಹೊಳಿ ನೀಡಿದ್ದಾರೆ. ಗೋಕಾಕ್ ಸಾಹುಕಾರ್ ಜೊತೆ ಈ ಸಂದರ್ಭದಲ್ಲಿ ರಾಜ್ಯದ ಕೆಲ ನಾಯಕರೂ ಇದ್ದರೆಂದು ಮೂಲಗಳು ಹೇಳುತ್ತಿವೆ.

ಮಾಹಿತಿ ಬಂದಿರುವ ಪ್ರಕಾರ, ಸಿಡಿ ಪ್ರಕರಣದ ತನಿಖೆ ಆಗಬೇಕೆಂದು ರಮೇಶ್ ಜಾರಕಿಹೊಳಿ ಮಾಡಿಕೊಂಡಿರುವ ಮನವಿಗೆ ಅಮಿತ್ ಶಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಾನೂನು ಸಂಗತಿಯನ್ನು ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಜಾರಕಿಹೊಳಿಗೆ ಅಮಿತ್ ಶಾ ಆಶ್ವಾಸನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಏನಿದು ಸಿಡಿ ಪ್ರಕರಣ?

ರಮೇಶ್ ಜಾರಕಿಹೊಳಿ ಮಹಿಳೆಯೊಬ್ಬಳೊಂದಿಗಿನ ವಿಡಿಯೋ ಬಿಡುಗಡೆಯಾಗಿ ಜೋರು ಸದ್ದು ಮಾಡಿ, ಕೊನೆಗೆ ಗೋಕಾಕ್ ಸಾಹುಕಾರ್ ಮಂತ್ರಿಸ್ಥಾನ ಕಳೆದುಕೊಳ್ಳಬೇಕಾಯಿತು. ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲು ಡಿಕೆ ಶಿವಕುಮಾರ್, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತಿತರ ಕೆಲವರು ಷಡ್ಯಂತ್ರ ರೂಪಿಸಿದ್ದರು. ಅದಕ್ಕೆ ಸಂಬಂಧಿಸಿ ತನ್ನ ಬಳಿಕ ಆಡಿಯೋ ಮತ್ತಿತರ ಹಲವಾರು ದಾಖಲೆಗಳಿವೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಇದನ್ನೂ ಓದಿ: ಇನ್​​ಸ್ಟಾಗ್ರಾಮ್ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು ನಗ್ನ ಚಿತ್ರ ಪಡೆದು ಬ್ಲ್ಯಾಕ್​ಮೇಲ್​​ ಮಾಡುತ್ತಿದ್ದ ಆರೋಪಿ ಅರೆಸ್ಟ್​​

ಈ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದರೆ ಎಲ್ಲ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.

ಡಿಕೆಶಿ ವಿರುದ್ಧ ಗುಡುಗು

ಸಿಡಿ ಪ್ರಕರಣ ಮಾಧ್ಯಮಗಳಲ್ಲಿ ಸದ್ದು ಮಾಡುವಾಗಲೇ ರಮೇಶ್ ಜಾರಕಿಹೊಳಿ ಅವರು ರಾಜ್ಯದ ಮಹಾನ್ ನಾಯಕರೊಬ್ಬರು ಈ ಷಡ್ಯಂತ್ರದಲ್ಲಿ ಇದ್ದಾರೆ ಎಂದು ಡಿಕೆಶಿ ಹೆಸರೆತ್ತದೆಯೇ ಹೇಳಿದ್ದರು. ಸಿಡಿ ಪ್ರಕರಣದಲ್ಲಿರುವ ಯುವತಿಯನ್ನು ಬಂಧಿಸಿ ವಿಚಾರಣೆ ನಡೆಸಿದರೆ ಎಲ್ಲಾ ಸಂಗತಿ ಬಯಲಿಗೆ ಬರುತ್ತದೆ ಎಂದೂ ಅವರು ಈಗ ಒತ್ತಾಯಿಸುತ್ತಿದ್ದಾರೆ.

ಡಿಕೆ ಶಿವಕುಮಾರ್ ಮತ್ತು ತಾನು ಹಿಂದೆ ಒಳ್ಳೆಯ ಸ್ನೇಹಿತರಾಗಿದ್ದೆವು. ಆದರೆ, ಗ್ರಾಮೀಣ ಶಾಸಕಿಯಂದ ತಮ್ಮಿಬ್ಬರ ಆತ್ಮೀಯ ಸಂಬಂಧ ಹಾಳಾಯಿತು. ಈ ವಿಷಕನ್ಯೆಯಿಂದಲೇ ಕಾಂಗ್ರೆಸ್ ಸರ್ವನಾಶ ಆಗುತ್ತದೆ ಎಂದಿದ್ದಾರೆ. ಇಲ್ಲಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಜಾರಕಿಹೊಳಿ ವಿಷಕನ್ಯೆ ಎಂದು ಸಂಬೋಧಿಸಿದ್ದಾರೆ.

ಒಬ್ಬ ವ್ಯಕ್ತಿಯ ರಾಜಕೀಯ ಜೀವನ ಹಾಳು ಆಡಲು ಸಿಡಿ ಬಳಕೆ ಮಾಡಿದ ಡಿಕೆ ಶಿವಕುಮಾರ್ ರಾಜಕಾರಣದಲ್ಲಿ ಇರಲು ಲಾಯಕ್ ಅಲ್ಲ. ಈಗ ನಡೆಯುತ್ತಿರುವುದು ನನ್ನ ಮತ್ತು ಡಿಕೆ ಶಿವಕುಮಾರ್ ನಡುವಿನ ಯುದ್ಧ ಎಂದು ಗೋಕಾಕ್ ಸಾಹುಕಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.