Nanjangud Police: ಲಾಕ್​​ಡೌನ್​ ವೇಳೆ ಮದ್ಯ, ಗಾಂಜಾ ತುಂಬಿದ್ದ ಕಾರು ಯುವಕನಿಗೆ ಡಿಕ್ಕಿ ಹೊಡೆದು ಸಾಯಿಸಿತ್ತು: 2 ವರ್ಷವಾದರೂ ಆರೋಪಿ ಬಂಧನವಾಗಿಲ್ಲ

ಅಪಘಾತ ಮಾಡಿದ ಕಾರಿನಲ್ಲಿ ಮದ್ಯದ ಬಾಟಲಿಗಳು, ಗಾಂಜಾ ಪತ್ತೆಯಾಗಿತ್ತು. ಹೀಗಾಗಿ ಕಾರಿನಲ್ಲಿದ್ದವರ ಶೋಕಿಗೆ ಪ್ರವೀಣ್ ಬಲಿಯಾಗಿದ್ದ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಪೊಲೀಸರು ತನಿಖೆಯನ್ನೇನೋ ನಡೆಸಿದ್ರು. ಆದ್ರೆ ಅಪಘಾತ ನಡೆದು ಎರಡೂವರೆ ವರ್ಷವಾದರೂ ಇದುವರೆಗೂ ಆರೋಪಿಗಳು ಮಾತ್ರ ಸಿಕ್ಕಿಲ್ಲ.

Nanjangud Police: ಲಾಕ್​​ಡೌನ್​ ವೇಳೆ ಮದ್ಯ, ಗಾಂಜಾ ತುಂಬಿದ್ದ ಕಾರು ಯುವಕನಿಗೆ ಡಿಕ್ಕಿ ಹೊಡೆದು ಸಾಯಿಸಿತ್ತು: 2 ವರ್ಷವಾದರೂ ಆರೋಪಿ ಬಂಧನವಾಗಿಲ್ಲ
ಲಾಕ್​​ಡೌನ್​ ವೇಳೆ ಮದ್ಯ, ಗಾಂಜಾ ತುಂಬಿದ್ದ ಕಾರು ಯುವಕನಿಗೆ ಡಿಕ್ಕಿ ಹೊಡೆದು ಸಾಯಿಸಿತ್ತು: 2 ವರ್ಷವಾದರೂ ಆರೋಪಿಗಳ ಬಂಧನವಾಗಿಲ್ಲ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 03, 2023 | 1:08 PM

ಅದು ಎರಡು ವರ್ಷದ ಹಿಂದೆ ನಡೆದ ಅಪಘಾತ. ಆ ಅಪಘಾತದಲ್ಲಿ ತಾನು ಮಾಡದ ತಪ್ಪಿಗೆ ಅಮಾಯಕ ಯುವಕ‌ (Youth) ಬಲಿಯಾಗಿದ್ದ. ಆದ್ರೆ ಅಪಘಾತ ನಡೆದು ಇಷ್ಟು ದಿನ ಆದರೂ ಅಪಘಾತ ಮಾಡಿದವರು ಮಾತ್ರ ಪತ್ತೆಯಾಗಿಲ್ಲ. ಇದರಿಂದ ಯುವಕನ ತಂದೆ ತಾಯಿ ಅಮರಣಾಂತ ಉಪವಾಸಕ್ಕೆ (Hunger Strike) ಮುಂದಾಗಿದ್ದಾರೆ. ಆ ಯುವಕನ ಪೋಟೋ ಹಿಡಿದು ಕಣ್ಣೀರಾಕ್ತಾ ಇರೋ ದಂಪತಿಯ ಅಳುವಿಗೆ ಕಾರಣ ಅಪಘಾತದಲ್ಲಿ ಮಗನ ಸಾವು. ಅಂದ್ಹಾಗೆ ಈ ದಂಪತಿ ಮೈಸೂರು (Mysore) ಜಿಲ್ಲೆ‌ ನಂಜನಗೂಡಿನ (Nanjangud) ಮಹೇಶ್ ಹಾಗೂ ಸುಧಾ ಮಹೇಶ್. ಈ ದಂಪತಿಯ ಪುತ್ರ ಪ್ರವೀಣ್ 2 ವರ್ಷದ ಹಿಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್ ಕೆಲಸ ಮುಗಿಸಿ ವಾಪಸ್ಸು ಬರುವ ವೇಳೆ ಮೈಸೂರು ನಂಜನಗೂಡು ರಸ್ತೆಯ ಮಲ್ಲನಮೂಲೆ ಮಠದ ಬಳಿ ಹಿಂದೆಯಿಂದ ಬಂದ ಕಾರು ಡಿಕ್ಕಿ ಹೊಡೆದಿತ್ತು (Car Accident). ಅಪಘಾತ ಮಾಡಿ ಕಾರಿನಲ್ಲಿದ್ದವರು ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ಅಪಘಾತದಲ್ಲಿ ಪ್ರವೀಣ್ ಸಾವನ್ನಪ್ಪಿದ್ದ.

ಇನ್ನು ಅಪಘಾತ ಮಾಡಿದ ಕಾರಿನಲ್ಲಿ ಮದ್ಯದ ಬಾಟಲಿಗಳು, ಗಾಂಜಾ ಪತ್ತೆಯಾಗಿತ್ತು. ಹೀಗಾಗಿ ಕಾರಿನಲ್ಲಿದ್ದವರ ಶೋಕಿಗೆ ಪ್ರವೀಣ್ ಬಲಿಯಾಗಿದ್ದ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಪೊಲೀಸರು (Nanjangud Police) ತನಿಖೆಯನ್ನೇನೋ ನಡೆಸಿದ್ರು. ಆದ್ರೆ ಅಪಘಾತ ನಡೆದು ಎರಡೂವರೆ ವರ್ಷವಾದರೂ ಇದುವರೆಗೂ ಆರೋಪಿಗಳು ಮಾತ್ರ ಸಿಕ್ಕಿಲ್ಲ.

ಅಪಘಾತದಲ್ಲಿ ಮೃತಪಟ್ಟ ಪ್ರವೀಣ್, ಮಹೇಶ್-ಸುಧಾ ದಂಪತಿಯ ಒಬ್ಬನೇ ಮಗನಾಗಿದ್ದ. ಮನೆಯವರು ಆತನ ಮದುವೆಗೆ ವಧು ನೋಡಲು ಎಲ್ಲಾ ಸಿದ್ದತೆ ನಡೆದಿತ್ತು. ಆದರೆ ವಿಧಿ ಅದಕ್ಕೆ ಅವಕಾಶ ಕೊಡಲಿಲ್ಲ. ಏನೂ ತಪ್ಪು ಮಾಡದ ಮಗನ ಸಾವಿಗೆ ಕಾರಣರಾದವರನ್ನು ಬಂಧಿಸಿ ಎಂದು ಅಂದಿನಿಂದಲೂ ಹೆತ್ತವರು ಒತ್ತಾಯ ಮಾಡುತ್ತಲೇ ಇದ್ದಾರೆ.

ಇಷ್ಟು ದಿನ ಪೊಲೀಸ್ ಠಾಣೆಗೆ ಅಲೆದು ಅಲೆದು ಸುಸ್ತಾದ ದಂಪತಿ ಈಗ ಆಮರಣಾಂತ ಉಪವಾಸ ಮಾಡಲು ಮುಂದಾಗಿದ್ದಾರೆ. ಆರೋಪಿ ಪತ್ತೆ ಮಾಡುವವರೆಗೂ ಪೊಲೀಸ್ ಠಾಣೆಯ ಮುಂದೆ ಕುಳಿತುಕೊಳ್ಳಲು ನಿರ್ಧರಿಸಿದ್ದಾರೆ. ಇನ್ನಾದರೂ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಹೆತ್ತವರ ಕಣ್ಣೀರು ಒರೆಸುವ ಕೆಲಸ ಮಾಡಬೇಕಿದೆ.

ವರದಿ: ರಾಮ್, ಟಿವಿ 9, ಮೈಸೂರು