AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಹೆದ್ದಾರಿ ಯೋಜನೆಗೆ ಕೇಂದ್ರದಿಂದ 2,675 ಕೋಟಿ ರೂ. ಮಂಜೂರು

ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-748ಎ ಬೆಳಗಾವಿ-ಹುನಗುಂದ-ರಾಯಚೂರು ವಿಭಾಗದ 92.40 ಕಿಮೀ ಉದ್ದದ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಉನ್ನತೀಕರಿಸಲು ರಾಷ್ಟ್ರೀಯ ಹೆದ್ದಾರಿ ಸಚಿವಾಲಯ 2,675 ಕೋಟಿ ರೂ. ಮಂಜೂರು ಮಾಡಿದೆ.

ಕರ್ನಾಟಕದಲ್ಲಿ ಹೆದ್ದಾರಿ ಯೋಜನೆಗೆ ಕೇಂದ್ರದಿಂದ 2,675 ಕೋಟಿ ರೂ. ಮಂಜೂರು
ಸಚಿವ ನಿತಿನ್​ ಗಡ್ಕರಿ
ವಿವೇಕ ಬಿರಾದಾರ
|

Updated on:Mar 07, 2024 | 7:58 AM

Share

ನವದೆಹಲಿ ಮಾರ್ಚ್​ 07: ಪಣಜಿ-ಹೈದರಾಬಾದ್ (Panaji-Hydarabad)​ EC10 ಕಾರಿಡಾರ್​​ ಅಡಿಯಲ್ಲಿ ಬಾಗಲಕೋಟೆ (Bagalkote) ಮತ್ತು ಬೆಳಗಾವಿ (Belagavi) ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-748ಎ ಬೆಳಗಾವಿ-ಹುನಗುಂದ-ರಾಯಚೂರು ವಿಭಾಗದ 92.40 ಕಿಮೀ ಉದ್ದದ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ಉನ್ನತೀಕರಿಸಲು ರಾಷ್ಟ್ರೀಯ ಹೆದ್ದಾರಿ ಸಚಿವಾಲಯ 2,675 ಕೋಟಿ ರೂ. ಮಂಜೂರು ಮಾಡಿದೆ. ಸಾರ್ವಜನಿಕ ಮತ್ತು ಖಾಸಗಿ ಪಾಲುದಾರಿಯಲ್ಲಿ ಹೆದ್ದಾರಿ ಉನ್ನತೀಕರಿಸಲಾಗುತ್ತದೆ.

ಈ ಯೋಜನೆಯು ಪಣಜಿ-ಹೈದರಾಬಾದ್​ ಆರ್ಥಿಕ ಕಾರಿಡಾರ್​ನ ಅವಿಭಾಜ್ಯ ಅಂಗವಾಗಿದೆ. EC10 ಯೋಜನೆಯು ಪಣಜಿ ಸೇರಿದಂತೆ ಪ್ರಮುಖ ಕೈಗಾರಿಕಾ ಕೇಂದ್ರಗಳನ್ನು ಸಂಪರ್ಕಿಸುತ್ತದೆ. ಈ EC10 ಮೀನುಗಾರಿಗೆ ಮತ್ತು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಪಣಜಿ, ಆಹಾರ ಧ್ಯಾನಗಳು ಮತ್ತು ಹಾಲಿನ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ಬೆಳಗಾವಿ, ಅಕ್ಕಿ, ಹತ್ತಿ, ಶೇಂಗಾ ಮತ್ತು ಬೇಳೆಕಾಳುಗಳಿಗೆ ಹೆಸರುವಾಸಿಯಾಗಿರುವ ರಾಯಚೂರು ಮತ್ತು ಐಟಿ, ಫಾರ್ಮ್​ ಮತ್ತು ಹೆಲ್ತಕೇರ್​ಗೆ ವಿಶಿಷ್ಟ ಸ್ಥಾನ ಪಡೆದಿರುವ ಹೈದರಾಬಾದ್​ ಸೇರಿದಂತೆ ಪ್ರಮುಖ ಕೈಗಾರಿಕಾ ಕೇಂದ್ರಳನ್ನು ಸಂಪರ್ಕಿಸುತ್ತದೆ.

ಇದನ್ನೂ ಓದಿ: ಉತ್ತರ ಕರ್ನಾಟಕ ಭಾಗದ 8 ಜಿಲ್ಲೆಗಳಿಗೆ ಕೇಂದ್ರದಿಂದ ಭರ್ಜರಿ ಗಿಫ್ಟ್; 376 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ನಿತಿನ್ ಗಡ್ಕರಿ ಶಂಕು ಸ್ಥಾಪನೆ

ದೇಶದಲ್ಲಿ ರಸ್ತೆಗಳ ನಿರ್ಮಾಣವನ್ನು ವೇಗಗೊಳಿಸಲು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಖಾಸಗಿ-ಸಾರ್ವಜನಿಕ ಸಹಭಾಗಿತ್ವದ (PPP) ಅಡಿಯಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡುತ್ತದೆ. ಯೋಜನಾ ವೆಚ್ಚದ 40 ಪ್ರತಿಶತ ಹಣವನ್ನು ಸರ್ಕಾರವು ರಸ್ತೆ ನಿರ್ಮಾಣದ ಅವಧಿಯಲ್ಲಿ ನೀಡುತ್ತದೆ. ಉಳಿದ 60 ಪ್ರತಿಶತದಷ್ಟು ಹಣವನ್ನು ಬಡ್ಡಿಯೊಂದಿಗೆ ರಸ್ತೆ ಕಾರ್ಯಾರಂಭವಾದ ಮೇಲೆ ನೀಡುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:58 am, Thu, 7 March 24