CET-KSET Free Coaching: ವಿದ್ಯಾರ್ಥಿಗಳೇ ಗಮನಿಸಿ: ಸಿಇಟಿ, ಕೆಸಿಇಟಿ ಪರೀಕ್ಷೆಗಳಿಗೆ ಉಚಿತ ತರಬೇತಿ; ಎಲ್ಲಿ ಎಂಬ ವಿವರ ಇಲ್ಲಿದೆ
ಇಂದಿನಿಂದ ‘ಜ್ಞಾನ-ವಿಜ್ಞಾನ ತರಂಗ’ ಕಾರ್ಯಕ್ರಮ ವೀಕ್ಷಣೆಗೆ ಲಭ್ಯವಿದ್ದು, ಪ್ರತಿ ದಿನ ಸಂಜೆ 5ರಿಂದ ರಾತ್ರಿ 8 ಗಂಟೆವರೆಗೆ ನೇರ ಪ್ರಸಾರ ಮಾಡಲಾಗುವುದು. 100ಕ್ಕೂ ಹೆಚ್ಚು ವಿಷಯ ತಜ್ಞರು ತರಬೇತಿ ನೀಡಲಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು: ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಖಾಸಗಿ ಸಂಸ್ಥೆಯೊಂದರ ಸಹಯೋಗದಲ್ಲಿ ‘ಜ್ಞಾನ-ವಿಜ್ಞಾನ ತರಂಗ’ ಎಂಬ ಆನ್ಲೈನ್ ಕ್ಲಾಸ್ ಯೋಜನೆ ರೂಪಿಸಿದೆ. ವಿಜ್ಞಾನ ವಿದ್ಯಾರ್ಥಿಗಳು ಸಿಇಟಿಗೆ ತಯಾರಾಗಲು ಈ ಯೋಜನೆ ನೆರವಾಗಲಿದ್ದು ಈಗಾಗಲೇ 60 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು https://forms.gle/ydfjc1vAbGpg1F7i8 ಲಿಂಕ್ ಬಳಸಿ ನೋಂದಣಿಯಾಗಲು ಅವಕಾಶವಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದೆ.
ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ ವಿಷಯಗಳಲ್ಲಿ ತಲಾ 25 ಅಧಿವೇಶನ, ತಲಾ ಒಂದು ಪ್ರಶ್ನೆಪತ್ರಿಕೆ ಬಿಡಿಸುವಿಕೆ ಕಾರ್ಯಕ್ರಮ ನಡೆಸಲಾಗುವುದು. ಇಂದಿನಿಂದ ‘ಜ್ಞಾನ-ವಿಜ್ಞಾನ ತರಂಗ’ ಕಾರ್ಯಕ್ರಮ ವೀಕ್ಷಣೆಗೆ ಲಭ್ಯವಿದ್ದು, ಪ್ರತಿ ದಿನ ಸಂಜೆ 5ರಿಂದ ರಾತ್ರಿ 8 ಗಂಟೆವರೆಗೆ ನೇರ ಪ್ರಸಾರ ಮಾಡಲಾಗುವುದು. 100ಕ್ಕೂ ಹೆಚ್ಚು ವಿಷಯ ತಜ್ಞರು ತರಬೇತಿ ನೀಡಲಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಸಿಇಟಿ ಪರೀಕ್ಷೆಗೂ ಇದೆ ತರಬೇತಿ ಸಂಪೂರ್ಣ ಉಚಿತವಾಗಿ ತಮಗೆ ಆನ್ಲೈನ್ ಮೂಲಕ ಕರ್ನಾಟಕ ಸಿಇಟಿ ತರಬೇತಿಯನ್ನು ಶೈಕ್ಷಣಿಕ ಸೇವಾ ಸ್ವಯಂಸೇವಕರ ತಂಡ ಹಮ್ಮಿಕೊಂಡಿದೆ. ಇದು 30 ದಿನಗಳ ತರಬೇತಿ ಸಾಮಾನ್ಯವಾಗಿ ಸಂಜೆ 5 ರಿಂದ 8 ಗಂಟೆಯವರೆಗೆ ನಡೆಯಲಿದ್ದು, ಇದರಲ್ಲಿ ರಾಜ್ಯದ ನುರಿತ ತಜ್ಞ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ. ಆಸಕ್ತ ಪರೀಕ್ಷಾರ್ಥಿಗಳು https://forms.gle/ydFjC1vAbGpq1F7i8 ಲಿಂಕ್ ಅನ್ನು ಬಳಸಿ ನೋಂದಾಯಿಸಿಕೊಳ್ಳಬಹುದಾಗಿದೆ.
Karnataka SSLC Exam 2021: ಶಿಕ್ಷಣ ಸಚಿವರಿಗೊಂದು ಪತ್ರ; ವಿದ್ಯಾರ್ಥಿನಿಯ ಮನ ಮುಟ್ಟುವ ಮಾತು! ( CET and KSET exam 2021 free coaching in Karnataka here is the details)