
ಬೆಂಗಳೂರು: ಈ ಬಾರಿ CET ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಇರಲಿದೆ ಎಂದು ಡಿಸಿಎಂ ಡಾ.ಅಶ್ವಥ್ ನಾರಾಯಣ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಶ್ವಥ್ ನಾರಾಯಣ್ ದಾಖಲಾತಿ ಪರಿಶೀಲನೆ ಇಂದ ಹಿಡಿದು ವಿದ್ಯಾರ್ಥಿಗಳು ಕಾಲೇಜಿಗೆ ದಾಖಲಾಗೋವರೆಗೂ ಎಲ್ಲಾ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ನಲ್ಲಿ ನಡೆಯಲಿದೆ ಎಂದಿದ್ದಾರೆ.
CET ಪರೀಕ್ಷೆ ಮುಗಿದ 20-25 ದಿನಗಳಲ್ಲಿ ರಿಸಲ್ಟ್ ಸಹ ನೀಡುತ್ತೇವೆ. ಪರೀಕ್ಷೆ ಪ್ರವೇಶ ಪತ್ರ ಆನ್ಲೈನ್ನಲ್ಲಿ ಲಭ್ಯವಿರಲಿದೆ ಎಂಬ ಮಾಹಿತಿ ನೀಡಿದ್ದಾರೆ. KEA ವೆಬ್ಸೈಟ್ಗೆ ಹೋಗಿ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದಿದ್ದಾರೆ.
ಇನ್ನು, ನಿಗದಿಯಂತೆ ಜುಲೈ 30 ಹಾಗೂ 31 ರಂದು ಪರೀಕ್ಷೆ ನಡೆಯಲಿದೆ ಹಾಗೂ ಆಗಸ್ಟ್ 1ರಂದು ಗಡಿನಾಡು ಕನ್ನಡಿಗರಿಗೆ ಪರೀಕ್ಷೆ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದರು. ಎಂದಿನಂತೆ ದಿನಕ್ಕೆ ಎರಡು ವಿಷಯಗಳ ಪರೀಕ್ಷೆ ಇರಲಿದ್ದು SSLC ಪರೀಕ್ಷೆ ಮಾದರಿಯಲ್ಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಡಾ.ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.
ಕೊರೊನಾ ಪಾಸಿಟಿವ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ
ಹೊರ ರಾಜ್ಯದಿಂದ ಪರೀಕ್ಷೆ ಬರೆಯಲು ಆಗಮಿಸುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಕ್ವಾರಂಟೈನ್ ನಿಯಮಗಳಿಂದ ವಿನಾಯ್ತಿ ಸಹ ನೀಡಲಾಗಿದೆ. ಜೊತೆಗೆ, ಕೊರೊನಾ ಪಾಸಿಟಿವ್ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
Published On - 5:35 pm, Tue, 21 July 20