ನವದೆಹಲಿ, ಸೆಪ್ಟೆಂಬರ್ 15: ಬಿಜೆಪಿಯಲ್ಲಿ ಟಿಕೆಟ್ ಮಾರಾಟಕ್ಕಿಲ್ಲ, ಇಲ್ಲಿ ಸಂದರ್ಭ ದುರ್ಬಳಕೆ ಆಗಿದೆ. ಮೋಸ ಹೋಗುವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ. ಬಿಜೆಪಿಯಲ್ಲಿ ಟಿಕೆಟ್ ಮಾರಾಟಕ್ಕಿಲ್ಲ ಅನ್ನೊದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ (CT Ravi) ಹೇಳಿದ್ದಾರೆ. ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಹಣ ಕೊಟ್ಟು ಟಿಕೆಟ್ ಖರೀದಿಸಲು ಸಾಧ್ಯವಿಲ್ಲ. ಹಣ ಮೂಲಕ ಟಿಕೆಟ್ ಪಡೆಯುವ ಪ್ರಯತ್ನ ಯಾರೂ ಮಾಡಬಾರದು. ಒಂದು ವೇಳೆ ಯತ್ನಿಸಿದರೆ ಮತ್ತೊಬ್ಬ ಗೋವಿಂದಬಾಬು ಪೂಜಾರಿ ಆಗುತ್ತೀರಿ ಎಂದು ಹೇಳಿದ್ದಾರೆ.
ಮೋಸ ಮಾಡಲೆಂದು ದೊಡ್ಡವರ ಹೆಸರು ಬಳಕೆ ಮಾಡಲಾಗುತ್ತಿದೆ. ಚುನಾವಣಾ ಸಮಿತಿಯಲ್ಲಿದ್ದವರಿಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ. ಬಿಜೆಪಿ ದೊಡ್ಡ ಪಕ್ಷವಾಗಿದೆ, ಎಲ್ಲಾ ರೀತಿಯ ಜನರು ಸಹ ಇದ್ದಾರೆ. ಕೆಲವರು ಸಮಯದ ದುರ್ಬಳಕೆ ಮಾಡಿಕೊಳ್ಳಲು ಪಕ್ಷಕ್ಕೆ ಬರುತ್ತಾರೆ ಎಂದರು.
ಬಿಜೆಪಿ ಹಿರಿಯ ನಾಯಕರು ಮೈತ್ರಿ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ನಾನು ದೇವೇಗೌಡರು, ಯಡಿಯೂರಪ್ಪ ಹೇಳಿಕೆ ಗಮನಿಸಿದ್ದೇನೆ. ನನ್ನಂತಹ ಕಾರ್ಯಕರ್ತ ಪಕ್ಷದ ನಿರ್ಧಾರವನ್ನು ಜಾರಿ ಮಾಡುತ್ತೇನೆ. ಸಾಧಕ ಬಾಧಕ ಕೇಳಿದರೆ ವರಿಷ್ಠರಿಗೆ ನಮ್ಮ ಅನುಭವ ತಿಳಿಸುತ್ತೇವೆ. ಈ ಹಿಂದೆ JDS, ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿಲ್ಲ. ಏನಾಗುತ್ತದೆ ಎಂದು ಭವಿಷ್ಯ ಹೇಳುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.
BBMP ಮಾಜಿ ಕಾರ್ಪೊರೇಟರ್ಗಳು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಅಧಿಕಾರ ಕಳೆದುಕೊಂಡಾಗ ಕೆಲವರು ಪಕ್ಷದಿಂದ ಹೋಗಬಹುದು. ರಾಜಕಾರಣದಲ್ಲಿ ಮೇಲೆ, ಕೆಳಗೆ ಆಗುವುದು ಸಾಮಾನ್ಯ. ಇದಕ್ಕಿಂತ ಕಷ್ಟ ಕಾಲದಲ್ಲೂ ಪಕ್ಷ ಕಟ್ಟಿದ್ದೇವೆ. ಎತ್ತಿನಗಾಡಿ ಮೇಲೆ ಹೆಚ್ಚು ಜನರು ಕೂತರೆ ಮುಂದೆ ಹೋಗಲ್ಲ. ಕಾಂಗ್ರೆಸ್ ತೊರೆದಿದ್ದನ್ನು ಡಿ.ಕೆ.ಶಿವಕುಮಾರ್ ಸಹ ನೋಡಿದ್ದಾರೆ.
ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಮೈತ್ರಿಗೆ ಸ್ಫೋಟಕ ತಿರುವು, ಇನ್ನೇನು ದೋಸ್ತಿ ಫೈನಲ್ ಎನ್ನುಷ್ಟರಲ್ಲೇ ಕತ್ರಿ ಬಿತ್ತೇ?
ಕಾಂಗ್ರೆಸ್ನ ಹಾಲಿ ಶಾಸಕರು, ಸಚಿವರೇ ಬಿಜೆಪಿ ಸೇರಿದ್ದಾರೆ. ಈಗ ಮಾಜಿಗಳು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಹಾಲಿಗಳನ್ನು ಸೇರಿಸಿಕೊಂಡರೂ ನಾವು ಅಧಿಕಾರಕ್ಕೆ ಬರಲಿಲ್ಲ. ನೀವು ಮಾಜಿಗಳನ್ನು ಸೇರಿಸಿಕೊಂಡು ಅಧಿಕಾರಕ್ಕೆ ಬರ್ತೀರಾ ಎಂದು ಪ್ರಶ್ನಿಸಿದ್ದಾರೆ. ಈ ಸತ್ಯದ ಅರಿವು ಡಿ.ಕೆ.ಶಿವಕುಮಾರ್ಗೆ ಇರಬೇಕು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.