ಮೈಸೂರು: ಐಎಎಸ್ ಅಧಿಕಾರಿ ರವಿ ಅವರು ಜಿಲ್ಲಾಧಿಕಾರಿಯಾಗಿರುವ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಸಕಾಲಕ್ಕೆ ಆಕ್ಸಿಜನ್ ಸಿಗದೆ 36 ಕೊರೊನಾ ಸೋಂಕಿತರು ಅಸುನೀಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಆಯೋಗ ಹೈಕೋರ್ಟ್ಗೆ ವರದಿ ಸಲ್ಲಿಸಿ, ಅದರಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಲೋಪವೇನೂ ಇಲ್ಲ; ಚಾಮರಾಜನಗರ ಡಿಸಿ ಅವರೇ ಸಕಾಲಿಕ ಕ್ರಮ ಕೈಗೊಳ್ಳಬೇಕಿತ್ತು ಎಂದು ಸಾರಿತ್ತು. ಪ್ರಕರಣ ತಾರ್ಕಿಕ ಅಂತ್ಯ ಕಂಡು ತಮ್ಮ ಮೇಲಿನ ಆರೋಪದಿಂದ ಮುಕ್ತರಾದ ಖಡಕ್ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಇದೀಗ ಪ್ರತಿಕ್ರಿಯೆ ನೀಡಿದ್ದು, ನಮ್ಮ ಮೇಲೆ ಆರೋಪಿಸಲು ಹೋಗಿ ಇಡೀ ಮೈಸೂರಿಗೆ ಕಳಂಕ ತರಲು ಯತ್ನಿಸಿದರು. ಅದಕ್ಕೆ ಪ್ರಯತ್ನಿಸಿದ್ದವರು ಮೈಸೂರು ಜನರ ಕ್ಷಮೆ ಕೇಳಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಮೇಲೆ ಆರೋಪಿಸಲು ಹೋಗಿ ಮೈಸೂರಿಗೆ ಕಳಂಕ ಹಚ್ಚಲು ಯತ್ನಿಸಿದರು. ಆ ಕಳಂಕದಿಂದ ನಾವು ಮುಕ್ತರಾಗಿದ್ದೇವೆ. ಅದಕ್ಕೆ ಪ್ರಯತ್ನಿಸಿದ್ದವರು ಈಗ ಜನರ ಕ್ಷಮೆ ಕೇಳಬೇಕು. ನಾವು ಬಂದ ದಿನದಿಂದ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸುತ್ತಿದ್ದಾರೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಿಲ್ಲ, ಅದು ನನ್ನ ಕೆಲಸ ಅಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ಕೊಟ್ಟಿದೆ ಎಂದ ಮೈಸೂರು ಡಿಸಿ ಸಮಾಧಾನದ ನಿಟ್ಟುಸಿರುಬಿಟ್ಟರು.
ಇದನ್ನು ಓದಿ: ಘಟನೆಗೆ ಮೈಸೂರು ಡಿಸಿಯೇ ನೇರ ಕಾರಣ; ಚಾಮರಾಜನಗರ ಡಿಸಿಯಿಂದ ಆರೋಪ
ನಮ್ಮ ಮೇಲೆ ಮಾಡಿದ ಆರೋಪ ಸುಳ್ಳು ಮತ್ತು ಆಧಾರ ರಹಿತ. ಸರ್ಕಾರ ಕೇಳಿದ ಎಲ್ಲ ಮಾಹಿತಿ ನೀಡಿದ್ದೇವೆ. ಚಾಮರಾಜನಗರ ಘಟನೆಯಲ್ಲೂ ಅದನ್ನೆ ಮಾಡಿದ್ದಾರೆ. ಕಳೆದ 7 ತಿಂಗಳಿನಿಂದ ನನ್ನ ಮೇಲೆ ವೈಯುಕ್ತಿಕವಾಗಿಯೂ ಆರೋಪಗಳನ್ನ ಮಾಡ್ತಿದ್ದಾರೆ. ನಾವು ಸರ್ವಿಸ್ ಗೆ ಸೇರಿದ್ದೆ ದೇಶ ಸೇವೆ ಮಾಡಲು. ಈ ಸಣ್ಣ ಪುಟ್ಟ ಆರೋಪಗಳಿಗೆ ನಾನು ಉತ್ತರ ಕೊಡುವುದಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತಿದೆ ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ: ಹೈಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖ
(Chamarajanagar oxygen shortage incident people who alleged mysuru dc should apologize demands dc rohini sindhuri)