ಸದಾ ಕಾಡು ಪ್ರಾಣಿ-ಮಾನವ ಸಂಘರ್ಷದಿಂದ ಸುದ್ದಿಯಲ್ಲಿ ಇರುವ ಗಡಿನಾಡು ಚಾಮರಾಜನಗರ ಜಿಲ್ಲೆ ಈಗ ಮದ್ಯದ ವಿಚಾರದಲ್ಲಿ ಸುದ್ದಿಯಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ಅಗ್ಗದ ಬಿಯರ್ (Beer, Liquor) ಸೇವಿಸುವ 2ನೇ ಜಿಲ್ಲೆ ಎಂಬ ಹಣೆ ಪಟ್ಟಿ ದೊರೆತಿದೆ. ಹಾಗಿದ್ರೆ ಮೊದಲ ಸ್ಥಾನ ಯಾವ ಜಿಲ್ಲೆಗೆ ದೊರೆತಿದೆ ಚಾಮರಾಜನಗರದಲ್ಲೇ (Chamarajanagar) ಯಾಕೆ ಅತಿ ಹೆಚ್ಚು ಅಗ್ಗದ ಮದ್ಯ ಸೇಲ್ (Sale) ಆಗ್ತಾಯಿದೆ ಅಂತೀರಾ ಹಾಗಿದ್ರೆ ಈ ರಿಪೋರ್ಟ್ ನೋಡಿ.
ಅತಿ ಹೆಚ್ಚು ಹುಲಿಗಳನ್ನ ಹೊಂದಿರುವ ಜಿಲ್ಲೆ ಎಂಬ ಖ್ಯಾತಿ ಪಡೆದಿರುವ ಗಡಿ ನಾಡು ಚಾಮರಾಜನಗರ ಜಿಲ್ಲೆ ಈಗ ಅತಿ ಹೆಚ್ಚು ಬಿಯರ್ ಸೇವಿಸುವ ಜಿಲ್ಲೆಗಳ ಪೈಕಿ ರಾಜ್ಯದಲ್ಲೆ ಎರಡನೇ ಸ್ಥಾನ ಪಡೆದು ಕೊಂಡಿದೆ. ಅಷ್ಟೇ ಅಲ್ಲ ಅಗ್ಗದ ಮದ್ಯ ಹೆಚ್ಚು ವ್ಯಾಪಾರ ಆಗುವ ಜಿಲ್ಲೆ ಎಂಬ ಹಣೆ ಪಟ್ಟಿಯನ್ನ ಪಡೆದಿದ್ದು ಅಬಕಾರಿ ಇಲಾಖೆಯ ಸರ್ವೆಯಲ್ಲಿ ಈ ವಿಷಯ ಈಗ ಬೆಳಕಿಗೆ ಬಂದಿದೆ. 2022 ಹಾಗೂ 2023 ನೇ ಸಾವಿನ ಅಂಕಿ ಅಂಶ ನೋಡಿದ್ರೆ ಈ ಬಾರಿ 78,658 ಬಾಕ್ಸ್ ಬಿಯರ್ ಹೆಚ್ಚಾಗಿ ಸೇಲ್ ಆಗಿದೆ. ಶೇ. 30 ಪರ್ಸೆಂಟ್ ಅಷ್ಟು ಏರಿಕೆ ಕಂಡಿದೆ. ರಾಜ್ಯದಲ್ಲೇ ಅತಿ ಹೆಚ್ಚು ಬಿಯರ್ ಸೇವಿಸುವ ಜಿಲ್ಲೆ ತುಮಕೂರು (Tumkur) ಮೊದಲ ಸ್ಥಾನ ಪಡೆದ್ರೆ, ಚಾಮರಾಜನಗರಕ್ಕೆ ರಾಜ್ಯದಲ್ಲೇ ಎರಡನೇ ಸ್ಥಾನ ಲಭಿಸಿದೆ.
ಇನ್ನು ಅತಿ ಹೆಚ್ಚಾಗಿ ಬಿಯರ್ ಸೇಲ್ ಆಗ್ತಾಯಿದೆ ನಿಜ, ಹಾಗಂತ ಯಾವ ಬ್ರಾಂಡ್ ಮಾರುಕಟ್ಟೆ ಬಿಕರಿಯಾಗ್ತಾಯಿದೆ ಅಂತ ನೋಡಿದ್ರೆ ಅಗ್ಗದ ಅಂದ್ರೆ ಕಡಿಮೆ ಬೆಲೆಯ ಬಿಯರ್ ಹಾಗೂ ಚೀಪರ್ ವಿಸ್ಕಿಗಳೇ ಅತಿ ಹೆಚ್ಚಾಗಿ ಮಾರಾಟ ಆಗ್ತಾಯಿದೆ. ಇದಕ್ಕೆ ಕಾರಣವೇನು ಎಂದು ನೋಡುವುದಾದ್ರೆ ಅತಿ ಹೆಚ್ಚು ಶ್ರಮಿಕ ವರ್ಗವಿರುವ ಕಾರಣ ಕಡಿಮೆ ಹಣಕ್ಕೆ ಸಿಗುವ ಮದ್ಯವನ್ನೇ ಚಾಮರಾಜನಗರ ಜಿಲ್ಲೆಯ ಜನತೆ ಆಯ್ಕೆ ಮಾಡಿ ಕೊಳ್ಳುತ್ತಿದ್ದಾರೆ. ಅಬಕಾರಿ ಸುಂಕ ಬಿಯರ್ ಮೇಲೆ 185 ಯಿಂದ 195 ಪರ್ಸೆಂಟ್ ಹೆಚ್ಚು ಮಾಡುತ್ತಿರುವ ಕಾರಣ ಮುಂಬರುವ ದಿನಗಳಲ್ಲಿ ಬಿಯರ್ ಮಾರಾಟ ಸಂಖ್ಯೆಯಲ್ಲಿಯೂ ಹೊಡೆತ ಕೊಡುವ ಸಾಧ್ಯತೆಯಿದೆ ಎಂದು ಅಬಕಾರಿ ಇಲಾಖಾ ಅಧಿಕಾರಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:34 am, Wed, 14 February 24