ಖಾತೆಗೆ ಬಾರದ ಅನ್ನಭಾಗ್ಯ ಗೃಹಲಕ್ಷ್ಮೀ ಯೋಜನೆ ಹಣ: ಚಾಮರಾಜನಗರದಲ್ಲಿ ರೊಚ್ಚಿಗೆದ್ದ ಮಹಿಳಾ ಮಣಿಯರು

| Updated By: ಸಾಧು ಶ್ರೀನಾಥ್​

Updated on: Jan 09, 2024 | 2:42 PM

ಲೋಪದೋಷ ಸರಿಪಡಿಸಿಕೊಳ್ಳಲು ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಎಡತಾಕಿದ್ದಾರೆ. ಅದೂ ಬೆಳಗ್ಗೆ 8 ಗಂಟೆಯಿಂದಲೇ, ಒಂದೇ ಸಮನೆ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಸಾಲುಗಟ್ಟಿ ನಿಂತುಬಿಟ್ಟಿದ್ದಾರೆ ಫಲಾನುಭವಿಗಳು.

ಖಾತೆಗೆ ಬಾರದ ಅನ್ನಭಾಗ್ಯ ಗೃಹಲಕ್ಷ್ಮೀ ಯೋಜನೆ ಹಣ: ಚಾಮರಾಜನಗರದಲ್ಲಿ ರೊಚ್ಚಿಗೆದ್ದ ಮಹಿಳಾ ಮಣಿಯರು
ಖಾತೆಗೆ ಬಾರದ ಯೋಜನೆ ಹಣ: ಚಾಮರಾಜನಗರದಲ್ಲಿ ರೊಚ್ಚಿಗೆದ್ದ ಮಹಿಳಾ ಮಣಿಯರು
Follow us on

ಚಾಮರಾಜನಗರ, ಜನವರಿ 8: ಸಿದ್ದರಾಮಯ್ಯ ನೇತೃತ್ವದ (Siddaramaiah) ಕಾಂಗ್ರೆಸ್​​ ಸರ್ಕಾರವೇನೋ ಅತ್ಯುತ್ಸಾಹದಲ್ಲಿ ತನ್ನ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಹೊಸದರಲ್ಲಿ ಜಾರಿಗೆ ತಂದಿದೆ. ಆದರೆ ಅದು ಅನುಷ್ಠಾನವಾಗುವುದು ತೊಡಕಾಗಿ ಪರಿಣಮಿಸಿದೆ. ಮುಖ್ಯವಾಗಿ ಹಣಕಾಸಿನ ತೊಂದರೆಗೆ ಸಿಲುಕಿದೆ ಈ ಸಕಲ ಭಾಗ್ಯ ಯೋಜನೆಗಳು. ಹಾಗೆಂದೇ… ಅನ್ನಭಾಗ್ಯ ಮತ್ತು ಗೃಹಲಕ್ಷ್ಮೀ ಎಂಬೆರಡು ಯೋಜನೆಗಳ ಬಾಬತ್ತಿನಲ್ಲಿ ಖಾತೆಗೆ ಹಣ ಬಾರದ ಹಿನ್ನೆಲೆ ಚಾಮರಾಜನಗರದಲ್ಲಿ (Chamarajanagar) ಮಹಿಳಾ ಮಣಿಯರು ರೊಚ್ಚಿಗೆದ್ದಿದ್ದಾರೆ.

ಈ ಹಿನ್ನೆಲೆಯಲ್ಲಿ ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಇಂದು ಹೈ ಡ್ರಾಮ ನಡೆದಿದೆ. ಯೋಜನೆ ಜಾರಿಗೆ ಬಂದು ಐದಾರು ತಿಂಗಳು ಕಳೆದರೂ ಖಾತೆಗೆ ಹಣ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿಯ ಆವರಣದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಶಿಬಿರ ಆಯೋಜನೆ ಮಾಡಲಾಗಿತ್ತು. ಗೊಂದಲ ನಿವಾರಿಸಲು ಚಾಮರಾಜನಗರ ಆಹಾರ, ನಾಗರಿಕ ಸರಬರಾಜು ಇಲಾಖೆ ಹಾಗೂ ಮಹಿಳಾ ಮತ್ತು ಕಲ್ಯಾಣ ಇಲಾಖೆಯಿಂದ ವಿಶೇಷ ಶಿಬಿರ ಏರ್ಪಡಿಸಲಾಗಿತ್ತು.

ಜಿಲ್ಲಾದ್ಯಂತ 10 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಸಂದಾಯವಾಗದ ಗೃಹಲಕ್ಷ್ಮೀ ಹಣ, ಲೋಪದೋಷಗಳೇನು?

ಆ ವೇಳೆ ಲೋಪದೋಷ ಸರಿಪಡಿಸಿಕೊಳ್ಳಲು ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಎಡತಾಕಿದ್ದಾರೆ. ಅರ್ಧ ಕಿಲೋ ಮೀಟರ್ ವರೆಗೂ ಮಹಿಳೆಯರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅದೂ ಬೆಳಗ್ಗೆ 8 ಗಂಟೆಯಿಂದಲೇ, ಒಂದೇ ಸಮನೆ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಸಾಲುಗಟ್ಟಿ ನಿಂತುಬಿಟ್ಟಿದ್ದಾರೆ ಫಲಾನುಭವಿಗಳು.

ಇದನ್ನೂ ಓದಿ: ಅನ್ನಭಾಗ್ಯ ಯೋಜನೆ – ಆಹಾರ ಇಲಾಖೆಗೆ 200 ಕೋಟಿ ಉಳಿತಾಯ ಮಾಡಿದ ‘5 ಕೆಜಿ ಅಕ್ಕಿ ಹಣ’

ಪಡಿತರ ಚೀಟಿ, ಇ ಕೆವೈಸಿ, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್, ಆಧಾರ್ ತಿದ್ದುಪಡಿ, ಹೊಸದಾಗಿ ಬ್ಯಾಂಕ್ ಖಾತೆ ತೆರೆಯಲು ಶಿಬಿರದಲ್ಲಿ ಅವಕಾಶವಿತ್ತು. ಚಾಮರಾಜನಗರ ಜಿಲ್ಲೆಯ 10,500 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಇನ್ನೂ ಅನ್ನಭಾಗ್ಯದ ಹಣ ಸಿಕ್ಕಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ