
ಚಾಮರಾಜನಗರ, ಅಕ್ಟೋಬರ್ 05: ಯುವತಿ (girl) ನಾಪತ್ತೆಗೆ ಯುವಕನೋರ್ವ ಕಾರಣವೆಂದು ಆತನ ಸಂಬಂಧಿಗೆ ಯುವತಿ ಕಡೆಯವರು ಪೊಲೀಸರು ಠಾಣೆ ಬಳಿಯೇ ಚಾಕು ಇರಿದಿರುವಂತಹ (knife stab)
ಭೀಕರ ಘಟನೆಯೊಂದು ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ. ಜಾಕೀರ್ ಹಾಗೂ ಆತನ ಸ್ನೇಹಿತನಿಂದ ಆರ್ಮುಗಮ್ಗೆ ಚಾಕು ಇರಿಯಲಾಗಿದೆ. ಸದ್ಯ ಗುಂಡ್ಲುಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಅಕ್ಟೋಬರ್ 1 ರಿಂದ ಬೇಬಿ ಆಯೇಷಾ ಕಾಣೆಯಾಗಿದ್ದಾಳೆ. ಇದಕ್ಕೆ ಮಹೇಂದ್ರನೇ ಕಾರಣವೆಂದು ಯುವತಿಯ ಸಂಬಂಧಿಕರು ಶಂಕಿಸಿದ್ದಾರೆ. ಇತ್ತ ಗುಂಡ್ಲುಪೇಟೆ ಪಟ್ಟಣದ ಪೌರಕಾರ್ಮಿಕರ ಕಾಲೋನಿಯ ನಿವಾಸಿ, ಮಹೇಂದ್ರ ಸಂಬಂಧಿ ಆರ್ಮುಗಮ್, ಮಹೇಂದ್ರ ಕಾಣೆಯಾಗಿದ್ದಾನೆಂದು ದೂರು ಕೊಡಲು ಠಾಣೆಗೆ ಬಂದಿದ್ದರು. ಈ ವೇಳೆ ಠಾಣೆ ಬಳಿಯೇ ಜಾಕೀರ್ ಹಾಗೂ ಆತನ ಸ್ನೇಹಿತನಿಂದ ಚಾಕುವಿನಿಂದ ಆರ್ಮುಗಮ್ ಕುತ್ತಿಗೆಗೆ ಇರಿದಿದ್ದಾರೆ. ಸದ್ಯ ನಾಪತ್ತೆ ಹಾಗೂ ಚಾಕು ಇರಿತ ಸಂಬಂಧ ಪ್ರಕರಣ ದಾಖಲಾಗಿದೆ.
ಮಾರಕಾಸ್ತ್ರ ದಾಳಿಯಿಂದ ಗಾಯಗೊಂಡಿದ್ದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವಂತಹ ಘಟನೆ ಅ.2ರಂದು ಶಿವಮೊಗ್ಗದ ಎನ್.ಟಿ.ರಸ್ತೆಯಲ್ಲಿ ನಡೆದಿದೆ. ಗಾಯಾಳು ಅಮ್ಜದ್(38) ಮೃತ ವ್ಯಕ್ತಿ. ಈಗಾಗಲೇ ಐವರನ್ನು ದೊಡ್ಡಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: 5 ಕೋಟಿ ವಿಮೆ ಹಣಕ್ಕಾಗಿ ಓರ್ವನ ಮರ್ಡರ್: ಖತರ್ನಾಕ್ ಜಾಲ ಭೇದಿಸಿದ ಖಾಕಿ
ಅಮ್ಜದ್ ಮೇಲೆ ಇಬ್ಬರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಗಾಯಗೊಂಡಿದ್ದ ಅಮ್ಜದ್ನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆಸ್ಪತ್ರೆ ಮುಂದೆ ಪೋಷಕರು ಮತ್ತು ಸಂಬಂಧಿಕರು ಜಮಾಯಿಸಿದ್ದಾರೆ.
ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕುಡಿದಮತ್ತಿನಲ್ಲಿ ಜೊತೆಗಿದ್ದವನಿಂದಲೇ ಹರಿತವಾದ ಆಯುಧದಿಂದ ಇರಿದು ವ್ಯಕ್ತಿಯ ಕೊಲೆ ಮಾಡಿರುವಂತಹ ಘಟನೆ ಬೆಂಗಳೂರಿನ ಮಾರತ್ಹಳ್ಳಿ ಸರ್ವಿಸ್ ರಸ್ತೆಯಲ್ಲಿ ನಿನ್ನೆ ರಾತ್ರಿ 9 ಗಂಟೆಗೆ ನಡೆದಿದೆ. ರಾಯಚೂರು ಮೂಲದ ಮಹದೇವ(65) ಎಂಬಾತನ ಕೊಲೆಯಾದ ವ್ಯಕ್ತಿ.
ಇದನ್ನೂ ಓದಿ: ಕೋಲಾರದಲ್ಲಿ ನಕಲಿ ವೈದ್ಯರ ಹಾವಳಿಗೆ ಹೋಯ್ತು 8 ವರ್ಷದ ಬಾಲಕಿಯ ಜೀವ!
ತಮಿಳುನಾಡಿನ ತಾಂಜಾವೂರು ಮೂಲದ ರಾಜು ಎಂಬಾತನಿಂದ ಕೃತ್ಯವೆಸಗಲಾಗಿದೆ. ಸ್ಥಳಕ್ಕೆ ವೈಟ್ಫೀಲ್ಡ್ ಡಿಸಿಪಿ ಪರಶುರಾಮ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಆರೋಪಿ ರಾಜುನನ್ನು ವಶಕ್ಕೆ ಪಡೆದಿದ್ದು, ಮಾರತ್ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.