Golden jubilee: ಹುಲಿಗಳ ನಾಡು ಬಂಡೀಪುರ ಅರಣ್ಯ -ದೇಶದ ಮೊದಲ ಹುಲಿ ರಕ್ಷಿತಾರಣ್ಯವಾಗಿ 50ನೇ ವಸಂತಕ್ಕೆ, ಹುಲಿ ಸಂಖ್ಯೆ 140ಕ್ಕೆ ಏರಿಕೆ!

| Updated By: ಸಾಧು ಶ್ರೀನಾಥ್​

Updated on: Nov 10, 2022 | 6:06 AM

Bandipur National Park: ಚಾಮರಾಜನಗರ ಹುಲಿಗಳ ನಾಡು! ಉತ್ತಮವಾದ ಸಂರಕ್ಷಣೆ ನೀತಿಯಿಂದ ಕಾಡಿನಲ್ಲಿ ಪ್ರಾಣಿಗಳ ಬೇಟೆ ಪ್ರಕರಣ ಇಳಿಕೆಯಾಗಿದೆ. ಜೊತೆಗೆ, ಹುಲಿಗಳಂತಹ ಮಾಂಸಹಾರಿ ಪ್ರಾಣಿಗಳಿಗೆ ಬೇಕಾದ ಬೇಟೆಯ ಪ್ರಾಣಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಕಾರಣದಿಂದಲೂ ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ.

Golden jubilee: ಹುಲಿಗಳ ನಾಡು ಬಂಡೀಪುರ ಅರಣ್ಯ -ದೇಶದ ಮೊದಲ ಹುಲಿ ರಕ್ಷಿತಾರಣ್ಯವಾಗಿ 50ನೇ ವಸಂತಕ್ಕೆ, ಹುಲಿ ಸಂಖ್ಯೆ 140ಕ್ಕೆ ಏರಿಕೆ!
ಹುಲಿಗಳ ನಾಡು ಬಂಡೀಪುರ ಅರಣ್ಯ -ದೇಶದ ಮೊದಲ ಹುಲಿ ರಕ್ಷಿತಾರಣ್ಯವಾಗಿ 50 ನೇ ವಸಂತಕ್ಕೆ
Follow us on

ಅದು ದೇಶದ ಮೊದಲ ಹುಲಿ ರಕ್ಷಿತಾರಣ್ಯ.‌ ಆ ಅರಣ್ಯಕ್ಕೆ ಈಗ 50 ವರ್ಷದ ಸಂಭ್ರಮ.‌ ಕೇವಲ 13 ಹುಲಿಗಳಿದ್ದ ಆ ಅರಣ್ಯದಲ್ಲೀಗ 140 ಕ್ಕು ಹೆಚ್ಚು ಹುಲಿಗಳ ಆವಾಸಸ್ಥಾನವಾಗಿದೆ. ಅಷ್ಟಕ್ಕು ಅದ್ಯಾವ ಹುಲಿ ರಕ್ಷಿತಾರಣ್ಯ ಅಂತೀರಾ ಈ ಸ್ಟೋರಿ ನೋಡಿ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಅರಣ್ಯ (Bandipur National Park), ಹುಲಿರಕ್ಷಿತಾರಣ್ಯವಾಗಿ (Bandipur Tiger Reserve) 50 ನೇ ವಸಂತಕ್ಕೆ ಕಾಲಿಟ್ಟಿದೆ (Golden jubilee). ಹೌದು, 1973 ರಲ್ಲಿ ಭಾರತದ ಮೊಟ್ಟ ಮೊದಲ ಹುಲಿ ರಕ್ಷಿತಾರಣ್ಯ (Tigers) ಎಂದು ಬಂಡೀಪುರವನ್ನ ಘೋಷಣೆ ಮಾಡಲಾಯಿತು. ಅಂದು ಹುಲಿ ರಕ್ಷಿತಾರಣ್ಯವಾಗುವ ಸಂದರ್ಭದಲ್ಲಿ ಇಡೀ 1,200 ಚದರ ಕಿ.ಮೀ. ವ್ಯಾಪ್ತಿಯ ಅರಣ್ಯದಲ್ಲಿದಿದ್ದು ಕೇವಲ 10 ರಿಂದ 13 ಹುಲಿಗಳಷ್ಟೆ ಎಂದು ಅಂದಾಜು ಮಾಡಲಾಗಿತ್ತು.

ಇದಾದ ಬಳಿಕ ಉತ್ತಮವಾದ ಸಂರಕ್ಷಣೆಯಿಂದ, ಇದೀಗ ಬಂಡೀಪುರದಲ್ಲಿ 140 ಕ್ಕು ಹೆಚ್ಚು ಹುಲಿಗಳಿವೆ ಅಂತಾ ಕಳೆದ ಹುಲಿಗಣತಿ ವೇಳೆ ಅಂದಾಜು ಮಾಡಲಾಗಿದೆ. ಅದಷ್ಟೆ ಅಲ್ಲದೆ ಉತ್ತಮವಾದ ಸಂರಕ್ಷಣೆ ನೀತಿಯಿಂದ ಕಾಡಿನಲ್ಲಿ ಪ್ರಾಣಿಗಳ ಬೇಟೆಯಾಗುತ್ತಿದ್ದ ಪ್ರಕರಣಗಳ ಸಂಖ್ಯೆಯಲ್ಲಿಯೂ ಇಳಿಕೆ ಕಂಡಿದೆ. ಇದೀಗ ಹುಲಿಗಳಂತಹ ಮಾಂಸಹಾರಿ ಪ್ರಾಣಿಗಳಿಗೆ ಬೇಕಾದ ಬೇಟೆ ಪ್ರಾಣಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಕಾರಣದಿಂದಲೂ ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿಯೆ ಚಾಮರಾಜನಗರ ಜಿಲ್ಲೆಯನ್ನ ಹುಲಿಗಳ ನಾಡು ಎಂದು ಕರೆಯಲು ಕಾರಣವಾಗಿದೆ ಎನ್ನುತ್ತಾರೆ ಬಂಡೀಪುರ ಸಿಎಫ್ಒ ರಮೇಶ್ ಕುಮಾರ್.

ಇದನ್ನೂ ಓದಿ: ಕುಬೇರ ನವನಿಧಿ ಸಂಪತ್ತಿನ ಒಡೆಯನಾದುದು ಹೇಗೆ? ಆತನ ಪೂರ್ವಾಪರದ ‘ಅರ್ಥ’ ಏನು? ಇಲ್ಲಿದೆ ಇಂಟರೆಸ್ಟಿಂಗ್​ ಸ್ಟೋರಿ

ಈ ರೀತಿ ಹುಲಿಗಳ ಸಂಖ್ಯೆ ಹೆಚ್ಚಾದ ಕಾರಣದಿಂದಲೆ ಬಂಡೀಪುರಕ್ಕೆ ಬರುವಂತ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದೆ. ದೇಶ ವಿದೇಶದಿಂದ ಬರುವಂತಹ ಪ್ರವಾಸಿಗರು ಬಂಡೀಪುರದಲ್ಲಿ ಸಫಾರಿ ಮಾಡಿ ಎಂಜಾಯ್ ಮಾಡಿ ಹೋಗುತ್ತಿದ್ದಾರೆ‌. ಆದ್ರೆ ಪರಿಸರವಾದಿಗಳು ಮಾತ್ರ ಅರಣ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ.

ಬಂಡೀಪುರ ಹುಲಿ ರಕ್ಷಿತಾರಣ್ಯವಾಗಿ 50 ವರ್ಷ ಪೂರೈಕೆಯಾಗಿದೆ. ಇದು ಖುಷಿಯ ವಿಚಾರ. ಆದ್ರೆ ಜನರಿಗೆ ಕಾಡಿನ ಮಾಹತ್ವ ಅಥವಾ ಸಂರಕ್ಷಣೆಯ ಮಹತ್ವ ಬಗ್ಗೆ ತಿಳಿಸಲು ವಿಫಲವಾಗಿದ್ದಾರೆ. ಕೇವಲ ಅಂಕಿಗಳಿಗಷ್ಟೆ ಮಹತ್ವ ಕೊಡಲಾಗುತ್ತಿದೆ. ಇದನ್ನು ಹೊರತು ಪಡಿಸಿ ಜನರಿಗೆ ಕಾಡಿನ ಪರಿಚಯ ಮಾಡುವತ್ತ ಕೆಲಸ ಮಾಡಲಿ ಎನ್ನುವ ಸಲಹೆ ನೀಡಿದ್ದಾರೆ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ. ಮಧು.

ಒಟ್ಟಾರೆ, ದೇಶದ ಮೊದಲ ಹುಲಿರಕ್ಷಿತಾರಣ್ಯಕ್ಕೆ 50 ವರ್ಷ ಪೂರೈಕೆಯಾಗಿರೋದು ನಿಜಕ್ಕೂ ರಾಜ್ಯಕ್ಕೆ ಹೆಮ್ಮೆಯ ವಿಚಾರವೇ ಸರಿ. ಹೀಗೆಯೇ ಪರಿಸರ ಸಂರಕ್ಷಣೆ ಕಾರ್ಯ ಮುಂದುವರೆದು ನಮ್ಮ ಸಂಪತ್ತನ್ನ ಮುಂದಿನ‌ ಪೀಳಿಗೆಗೂ ಉಳಿಸುವ ಕೆಲಸವಾಗಲಿ ಎಂಬುದು ಎಲ್ಲರ ಆಶಯ. (ವರದಿ: ದಿಲೀಪ್ ಚೌಡಹಳ್ಳಿ, ಟಿವಿ 9, ಚಾಮರಾಜನಗರ)