ಚಿಕಿತ್ಸೆಗೆ ತಕ್ಕಂತೆ ಲಂಚ ಫಿಕ್ಸ್! ಟಿವಿ9 ಕ್ಯಾಮೆರಾದಲ್ಲಿ ಬಯಲಾಯ್ತು ಸಂತೇಮರಹಳ್ಳಿ ಆಸ್ಪತ್ರೆಯ ಕರ್ಮಕಾಂಡ 

| Updated By: ಸಾಧು ಶ್ರೀನಾಥ್​

Updated on: Mar 25, 2024 | 11:57 AM

ಇಂತಿಂತಹ ಚಿಕಿತ್ಸೆಗೆ ಇಂತಿಷ್ಟು ಹಣ ಅಂತ ಫಿಕ್ಸ್ ಮಾಡಿ ಲಂಚ ಪಡೆಯುತ್ತಿರೊ ಸಂತೇಮರಹಳ್ಳಿ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ ಈಗ ಬಟಾ ಬಯಲಾಗಿದೆ. ರಾಣಿ ಎಂಬ ಆಶಾ ಕಾರ್ಯಕರ್ತೆಗೆ 10 ಸಾವಿರ ಹಣವನ್ನ ಡೆಲವರಿ ಪೇಷಂಟ್ ಬಳಿ ವಸೂಲಿ ಮಾಡೋಕೆ ಹೇಳಿದ್ರಂತೆ ಇದಕ್ಕೊಪ್ಪದೆ ಇದ್ದಿದ್ದಕ್ಕೆ ವೈದ್ಯಾಧಿಕಾರಿ ರೇಣುಕಾದೇವಿ ಇಲ್ಲಸಲ್ಲದ ಆರೋಪ ಮಾಡಿ ಭ್ರಷ್ಟಾಚಾರ ವಿರುದ್ದ ಧ್ವನಿ ಎತ್ತಿದ್ದ ಆಶಾ ಕಾರ್ಯಕರ್ತೆ ರಾಣಿ ವಿರುದ್ದ ಮೆಮೋ ನೀಡಿದ್ದಾರೆ. ಅಸಲಿಗೆ ಆಶಾ ಕಾರ್ಯಕರ್ತೆಯರು ಸರ್ಕಾರಿ ನೌಕರರಲ್ಲ, ಅವ್ರಿಗೆ ನೋಟಿಸ್ ನೀಡಲು ಕಾನೂನಲ್ಲಿ ಅವಕಾಶವಿಲ್ಲ. ಆದ್ರೂ ಸಹ

ಚಿಕಿತ್ಸೆಗೆ ತಕ್ಕಂತೆ ಲಂಚ ಫಿಕ್ಸ್! ಟಿವಿ9 ಕ್ಯಾಮೆರಾದಲ್ಲಿ ಬಯಲಾಯ್ತು ಸಂತೇಮರಹಳ್ಳಿ ಆಸ್ಪತ್ರೆಯ ಕರ್ಮಕಾಂಡ 
ಟಿವಿ9 ಕ್ಯಾಮೆರಾದಲ್ಲಿ ಬಯಲಾಯ್ತು ಸಂತೇಮರಹಳ್ಳಿ ಆಸ್ಪತ್ರೆಯ ಕರ್ಮಕಾಂಡ 
Follow us on

ಬಡವರು, ಕೂಲಿ ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾದ್ರೆ ಸೀದಾ ಹೋಗೊದು ಸರ್ಕಾರಿ ಆಸ್ಪತ್ರೆಗೆ. ಆದ್ರೆ ಅಂತಹ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳೆ ವಸೂಲಿಗೆ ನಿಂತ್ರೆ ಬಡಬಗ್ಗರ ಗತಿಯೇನು? ಇಂತಿಂತಹ ಚಿಕಿತ್ಸೆಗೆ (treatment) ಇಂತಿಷ್ಟು ಹಣ ಅಂತ ಫಿಕ್ಸ್ ಮಾಡಿ ಲಂಚ (Bribe) ಪಡೆಯುತ್ತಿರೊ ಸಂತೇಮರಳ್ಳಿ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ ಈಗ ಬಟಾ ಬಯಲಾಗಿದೆ ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ. ಆಶಾ ಕಾರ್ಯಕರ್ತೆಯಿಂದ ಪಡೆದ ಹಣವನ್ನು ಲೆಕ್ಕ ಹಾಕ್ತಾಯಿರೋ ನರ್ಸಮ್ಮ.. ಮುಂದುವರಿದು ಅದೇ ನರ್ಸು ತನ್ನ ಸಹೋದ್ಯೋಗಿ ನರ್ಸ್​​ ಪವಿತ್ರ ಸಿಸ್ಟರ್ ಲೆಕ್ಕವನ್ನೂ ಚುಕ್ತಾ ಮಾಡಲು ಹೇಳುತ್ತಾ ಅದರದ್ದೂ (ಪವಿತ್ರ) ಮೂರು ಕೇಸು ಇವೆ. ಅದನ್ನೂ ಸೇರಿಸಿ ಕೊಟ್ಬಿಡಿ ಅಂತ ನಾಚಿಕೆ ಬಿಟ್ಟು ಹಣ ಕೇಳಿದ್ದಾರೆ. ಈ ಎಲ್ಲಾ ವಿದ್ಯಮಾನಗಳು ಕಣ್ಣಿಗೆ ರಾಚಿದ್ದು ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕಿನ ಸಂತೇಮರಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ (Santhemarahalli government Hospital in Chamarajanagar).

ಹೌದು ಬಡವ್ರು ಬಗ್ರು, ಕೂಲಿ ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾದ್ರೆ ನಂಬಿ ಕೊಂಡಿರುವುದು ಸರ್ಕಾರಿ ಆಸ್ಪತ್ರೆಗಳನ್ನೇ. ಆದ್ರೆ ಇಂತಹ ಸರ್ಕಾರಿ ಆಸ್ಪತ್ರೆಗೆ ಬರೋ ರೋಗಿಗಳನ್ನ ಸಿಬ್ಬಂದಿಗಳು ಸುಲಿಯಲು ನಿಂತ್ರೆ ಕಥೆ ಏನು..? ಹೌದು ಸಂತೇಮರಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ನಾರ್ಮಲ್ ಡೆಲವರಿಗೆ 3 ಸಾವಿರ ರೂಪಾಯಿ, ಸಿಜೇರಿಯನ್ ಗೆ 20 ಸಾವಿರ, ಗರ್ಭಕೋಶ ಶಸ್ತ್ರಚಿಕಿತ್ಸೆಗೆ 30 ಸಾವಿರ ಅಂತ ಒಂದೊಂದು ಆಪರೇಷನ್ ಗೆ ಒಂದೊಂದು ಅಮೌಂಟ್ ನ ಫಿಕ್ಸ್ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರು ಆ ಹಣವನ್ನ ಸಂಗ್ರಹಿಸಿ ನರ್ಸ್ ಗಳಿಗೆ ಕೊಡ್ಬೇಕಂತೆ ಬಳಿಕ ವೈದ್ಯಾಧಿಕಾರಿ ರೇಣುಕಾದೇವಿ ಈ ಹಣವನ್ನ ಸಂಗ್ರಹಿಸುತ್ತಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ.

ಇದೇ ರೀತಿ ರಾಣಿ ಎಂಬ ಆಶಾ ಕಾರ್ಯಕರ್ತೆಗೆ 10 ಸಾವಿರ ಹಣವನ್ನ ಡೆಲವರಿ ಪೇಷಂಟ್ ಬಳಿ ವಸೂಲಿ ಮಾಡೋಕೆ ಹೇಳಿದ್ರಂತೆ ಇದಕ್ಕೊಪ್ಪದೆ ಇದ್ದಿದ್ದಕ್ಕೆ ವೈದ್ಯಾಧಿಕಾರಿ ರೇಣುಕಾದೇವಿ ಇಲ್ಲಸಲ್ಲದ ಆರೋಪ ಮಾಡಿ ಭ್ರಷ್ಟಾಚಾರ ವಿರುದ್ದ ಧ್ವನಿ ಎತ್ತಿದ್ದ ಆಶಾ ಕಾರ್ಯಕರ್ತೆ ರಾಣಿ ವಿರುದ್ದ ಮೆಮೋ ನೀಡಿದ್ದಾರೆ. ಅಸಲಿಗೆ ಆಶಾ ಕಾರ್ಯಕರ್ತೆಯರು ಸರ್ಕಾರಿ ನೌಕರರಲ್ಲ, ಅವ್ರಿಗೆ ನೋಟಿಸ್ ನೀಡಲು ಕಾನೂನಲ್ಲಿ ಅವಕಾಶವಿಲ್ಲ. ಆದ್ರೂ ಸಹ ಮೆಮೋ ನೀಡಿ ಈಗ ವೈದ್ಯಾಧಿಕಾರಿ ರೇಣುಕಾದೇವಿ ಅಡಕತ್ತರಿಗೆ ಸಿಲುಕಿದ್ದಾರೆ. ಅಷ್ಟೇ ಅಲ್ಲ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಡಾಕ್ಟರ್ ಮೇಡಂ ಜಾತಿ ಅಸ್ತ್ರ ಪ್ರಯೋಗಿಸಿ ಅಟ್ರಾಸಿಟಿ ಕೇಸ್ ಹಾಕಿಸಿ ನಿನ್ನನ್ನ ಒಳಗೆ ಕಳಿಸುತ್ತೇನೆಂದು ಧಮ್ಕಿ ಹಾಕಿದ್ದಾರಂತೆ.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಲು ಹಣವಿಲ್ಲ ಅಂತ ಸರ್ಕಾರಿ ಆಸ್ಪತ್ರೆಗೆ ಬರುವ ಬಡ ಬಗ್ಗರ ಬಳಿಯೇ ಹಣ ಕೀಳುವ ಧನ ಪಿಶಾಚಿಗಳ ವಿರುದ್ದ ಡಿಸ್ಟಿಕ್ಟ್ ಹೆಲ್ತ್ ಆಫೀಸರ್ ಸೂಕ್ತ ಕ್ರಮ ತೆಗೆದುಕೊಂಡು ತಕ್ಕ ಶಾಸ್ತಿ ಮಾಡ್ಬೇಕಿದೆ. ಇಲ್ದೇ ಹೋದ್ರೆ ಬಡ ಬಗ್ಗರು ಚಿಕಿತ್ಸೆಯಿಂದ ವಂಚಿತರಾಗೊದಂತು ಪಕ್ಕ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ