ಬಿಎಸ್​ವೈ ರಾಜೀನಾಮೆಯಿಂದ ಮನನೊಂದು ರವಿ ಅಲಿಯಾಸ್​ ರಾಜಾಹುಲಿ ಆತ್ಮಹತ್ಯೆ; ನೇಣಿಗೆ ಶರಣಾದ ಯಡಿಯೂರಪ್ಪ ಅಭಿಮಾನಿ

ಬೊಮ್ಮಲಾಪುರದ ರಾಜಪ್ಪ (ರವಿ) ಆತ್ಮಹತ್ಯೆಗೆ ಶರಣಾದ ಸುದ್ದಿ ಅತೀವ ನೋವು ಹಾಗೂ ಬೇಸರ ತರಿಸಿದೆ.ರಾಜಕಾರಣದಲ್ಲಿ ಏರಿಳಿತಗಳು ಸಹಜ ,ಇದಕ್ಕಾಗಿ ಪ್ರಾಣಾರ್ಪಣೆ ಮಾಡಿಕೊಳ್ಳಲು ಮುಂದಾಗುವುದು ಸರ್ವಥಾ ಒಪ್ಪಲಾಗದು, ಇದರಿಂದ ಕುಟುಂಬಕ್ಕಾಗುವ ನಷ್ಟ ಯಾರಿಂದಲೂ ಭರಿಸಲಾಗದು: ಯಡಿಯೂರಪ್ಪ

ಬಿಎಸ್​ವೈ ರಾಜೀನಾಮೆಯಿಂದ ಮನನೊಂದು ರವಿ ಅಲಿಯಾಸ್​ ರಾಜಾಹುಲಿ ಆತ್ಮಹತ್ಯೆ; ನೇಣಿಗೆ ಶರಣಾದ ಯಡಿಯೂರಪ್ಪ ಅಭಿಮಾನಿ
ಆತ್ಮಹತ್ಯೆ ಮಾಡಿಕೊಂಡ ಯಡಿಯೂರಪ್ಪ ಅಭಿಮಾನಿ
Edited By:

Updated on: Jul 27, 2021 | 10:56 AM

ಚಾಮರಾಜನಗರ: ಬಿ.ಎಸ್​.ಯಡಿಯೂರಪ್ಪ ರಾಜೀನಾಮೆಯಿಂದ (BS Yediyurappa Resign) ಮನನೊಂದು ಅಭಿಮಾನಿಯೊಬ್ಬ ನೇಣಿಗೆ (BSY Fan Committed Suicide) ಶರಣಾದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಚಾಮರಾಜನಗರ (Chamarajanagar) ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ರವಿ (40 ವರ್ಷ) ಆಲಿಯಾಸ್ ರಾಜಾಹುಲಿ ಎಂಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಯಡಿಯೂರಪ್ಪ ರಾಜೀನಾಮೆಯಿಂದ ಬೇಸರಗೊಂಡ ರವಿ ರಾತ್ರಿ ವೇಳೆ ನೇಣಿಗೆ (Hang) ಕೊರಳೊಡ್ಡಿರುವುದು ತಿಳಿದುಬಂದಿದೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಘಟನೆ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಹಂಗಾಮಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದು, ನನ್ನ ರಾಜೀನಾಮೆಯಿಂದ ಮನನೊಂದ ಗುಂಡ್ಲುಪೇಟೆ ತಾಲ್ಲೂಕು ಬೊಮ್ಮಲಾಪುರದ ರಾಜಪ್ಪ (ರವಿ) ಆತ್ಮಹತ್ಯೆಗೆ ಶರಣಾದ ಸುದ್ದಿ ಅತೀವ ನೋವು ಹಾಗೂ ಬೇಸರ ತರಿಸಿದೆ.ರಾಜಕಾರಣದಲ್ಲಿ ಏರಿಳಿತಗಳು ಸಹಜ ,ಇದಕ್ಕಾಗಿ ಪ್ರಾಣಾರ್ಪಣೆ ಮಾಡಿಕೊಳ್ಳಲು ಮುಂದಾಗುವುದು ಸರ್ವಥಾ ಒಪ್ಪಲಾಗದು, ಇದರಿಂದ ಕುಟುಂಬಕ್ಕಾಗುವ ನಷ್ಟ ಯಾರಿಂದಲೂ ಭರಿಸಲಾಗದು ಎಂದಿದ್ದಾರೆ.

ಅಲ್ಲದೇ, ಅಭಿಮಾನ ಅತಿರೇಕಕ್ಕೆ ಹೋಗಬಾರದೆಂದು ಕೈಮುಗಿದು ವಿನಂತಿಸುವೆ. ರವಿ ಕುಟುಂಬದ ನೋವಿನೊಂದಿಗೆ ನಾನಿರುವೆ ಎಂದು ಟ್ವೀಟ್ ಮಾಡಿರುವ ಬಿ.ಎಸ್.ಯಡಿಯೂರಪ್ಪ, ಅಭಿಮಾನಿಯ ಸಾವಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ರವಿ ಸಾವಿನಿಂದ ಕುಟುಂಬಸ್ಥರು ಕಂಗಾಲಾಗಿ ಹೋಗಿದ್ದು, ಮೃತದೇಹದ ಮುಂದೆ ಕಣ್ಣೀರಿಡುತ್ತಿದ್ಧಾರೆ.

ಯಡಿಯೂರಪ್ಪ ರಾಜೀನಾಮೆಯಿಂದ ರಾಜ್ಯಾದ್ಯಂತ ಅವರ ಅಭಿಮಾನಿಗಳು ಅತೀವವಾಗಿ ಬೇಸರಗೊಂಡಿದ್ದು, ನಿನ್ನೆಯೇ ತಮ್ಮ ದುಃಖವನ್ನು ಹೊರಹಾಕಿದ್ದರು. ಶಿಕಾರಿಪುರದಲ್ಲಿ ಸ್ವಯಂಪ್ರೇರಿತರಾಗಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿದ ಪರಿಣಾಮ ಅಘೋಷಿತ ಬಂದ್ ಪರಿಸ್ಥಿತಿ ನಿರ್ಮಾಣವಾಗಿತ್ತು. ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ನೀರವ ಮೌನ ಆವರಿಸಿತ್ತು. ಆದರೆ, ಅತಿರೇಕದ ಅಭಿಮಾನದಿಂದ ಜೀವ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದು ಮಾತ್ರ ದುರಂತ.

(BS Yediyurappa Fan Committed Suicide in Chamarajanagar after BSY Resignation)

Published On - 10:52 am, Tue, 27 July 21