Bandipur safari: ಬಂಡೀಪುರ ಸಫಾರಿ ಸಹವಾಸವೇ ಬೇಡಾ ಅಂತಿದ್ದಾರೆ ಪ್ರಾಣಿಪ್ರಿಯರು! ಹದಗೆಟ್ಟ ರಸ್ತೆಗಳಿಂದಾಗಿ ನರಕಯಾತನೆ

| Updated By: ಸಾಧು ಶ್ರೀನಾಥ್​

Updated on: Dec 16, 2022 | 1:18 PM

ಬಂಡೀಪುರದಲ್ಲಿ ಸಫಾರಿ ಮಾಡಬೇಕು ಅಂತ ಪ್ರತಿದಿನ ಸಾವಿರಾರು ಪ್ರವಾಸಿಗರು ಖುಷಿಯಿಂದೇನೋ ಬಂಡೀಪುರಕ್ಕೆ ಹೋಗುತ್ತಿದ್ದಾರೆ. ಆದ್ರೆ ಆ ದುರಸ್ಥಿ ಕಾಣದ ರಸ್ತೆಗಳಿಂದ ಯಾಕಾದರೂ ಸಫಾರಿಗೆ ಬಂದ್ವಿ ಅಂತ ಬೇಸರದಿಂದ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

Bandipur safari: ಬಂಡೀಪುರ ಸಫಾರಿ ಸಹವಾಸವೇ ಬೇಡಾ ಅಂತಿದ್ದಾರೆ ಪ್ರಾಣಿಪ್ರಿಯರು! ಹದಗೆಟ್ಟ ರಸ್ತೆಗಳಿಂದಾಗಿ ನರಕಯಾತನೆ
ಬಂಡೀಪುರ ಸಫಾರಿ ಸಹವಾಸವೇ ಬೇಡಾ ಅಂತಿದ್ದಾರೆ ಪ್ರಾಣಿಪ್ರಿಯರು!
Follow us on

ಬಂಡೀಪುರ ಅಂದ್ರೆ ಸಾಕು ಎಂತಹವರಿಗಾದರೂ ಆ ಕಾಡಲ್ಲಿ ಸಫಾರಿ ಮಾಡ್ಬೇಕು ಅಂತ ಅನಿಸದೆ ಇರದು. ಆದ್ರೆ ಸಾಮಾನ್ಯ ಜನರು ದುಬಾರಿ ಹಣ ತೆತ್ತು ಸಫಾರಿ ಮಾಡೋದು ದೂರದ ಮಾತು. ಆದರೂ ಅಷ್ಟೊಂದು ದುಬಾರಿ ಹಣ ಕೊಟ್ಟು ಸಫಾರಿಗೆ ಹೋದರೆ ನರಕಯಾತನೆ ಅನುಭವಿಸಬೇಕು. ಸಫಾರಿಗೆ ಹೋದರೆ ನರಕಯಾತನೆ ಯಾಕೆ ಅಂತೀರಾ? ಈ ಸ್ಟೋರಿ ನೋಡಿ. ಹಚ್ಚ ಹಸಿರ ಕಾನನ…. ಸ್ವಚ್ಛಂದವಾಗಿ ವಿಹರಿಸುತ್ತಿರುವ ವನ್ಯಜೀವಿಗಳು… ಕಿವಿಗಿಂಪು ನೀಡೋ ಪಕ್ಷಿಗಳ ನಿನಾದ… ಅಬ್ಬಾ ಬಂಡೀಪುರದಲ್ಲಿ ಸಫಾರಿ ಮಾಡಿದ್ರೆ ಸ್ವರ್ಗ ಅಂತ ಅನಿಸದೆ ಇರದು. ಆದರೆ ಈಗ ಆ ಸಫಾರಿ (Bandipur safari) ರಸ್ತೆಯಲ್ಲಿ ಸ್ವಲ್ಪ ದೂರ ಸಾಗಿದರೆ ಸಾಕು ಹದಗೆಟ್ಟ ರಸ್ತೆಯಿಂದ (road) ನರಕದ ಅನುಭವ ಆಗುತ್ತೆ. ಹೌದು, ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯ ದೇಶ ವಿದೇಶದಿಂದ ಸಾಕಷ್ಟು ಪ್ರವಾಸಿಗರು (tourist) ಬರುತ್ತಾರೆ (Chamarajanagar News).

ಇಲ್ಲಿ ಸಫಾರಿ ಮಾಡಿ ಕಾಡಿನ ಸೌಂದರ್ಯದ ಜೊತೆ ಕಾಡು ಪ್ರಾಣಿಗಳ ಕಣ್ತುಂಬಿಕೊಂಡು ಖುಷಿ ಪಡುತ್ತಾರೆ‌.‌ ಆದ್ರೆ ಇತ್ತೀಚಿಗೆ ಇಲ್ಲಿ ಸಫಾರಿ ಮಾಡಿದ್ರೆ ಒಂದು ದಿನ ರೆಸ್ಟ್ ಮಾಡ್ಲೇಬೇಕಾದ ಪರಿಸ್ಥಿತಿ ಇದೆ.‌ ಇಡೀ ಬಂಡೀಪುರದ ಸಫಾರಿ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟುಹೋಗಿದೆ. ಇಡೀ ಬಂಡೀಪುರ ಸಫಾರಿ ವಲಯದ ರಸ್ತೆ ಸಂಪೂರ್ಣವಾಗಿ ಹಳ್ಳ ಗುಂಡಿಗಳಿಂದ ಕೂಡಿದೆ.

Also Read: ಬಂಡೀಪುರದಲ್ಲಿ ಸಫಾರಿ ದರ ಏರಿಕೆ; ಕೊರೊನಾ ನಡುವೆ ದರ ಹೆಚ್ಚಳಕ್ಕೆ ಪ್ರವಾಸಿಗರ ಅಸಮಾಧಾನ

ಮೂರು ಗಂಟೆಗಳ ಸಫಾರಿ ಮಾಡುವ ಜನರು ಈ ರಸ್ತೆಯಲ್ಲಿ ಸಂಚಾರ ಮಾಡಿದ್ರೆ ಕಾಡಿನ ಸಹವಾಸವೆ ಸಾಕು ಅಂತ ಅನಿಸಿಬಿಡುತ್ತೆ. ಇದೀಗ ಈ ರಸ್ತೆಯಲ್ಲಿ ಸಫಾರಿ ಮಾಡಿದ್ರೆ ಮತ್ತೆ ಕಾಡಿಗೆ ಬರಬೇಕು ಅನ್ನೋ ಆಸೆ ಕೂಡ ದೂರವಾಗಿ ಹೋಗಿ ಬಿಡುತ್ತೆ. ಸಫಾರಿ ರಸ್ತೆ ಅಷ್ಟೊಂದು ಹದಗೆಟ್ಟಿಹೋಗಿದ್ದರೂ ದುಬಾರಿ ಹಣ ಕೊಟ್ಟು ಸಫಾರಿ ಮಾಡಿದರೆ ನಿಜಕ್ಕು ನರಕಯಾತನೆ ಅನುಭವವಾಗಿ ಬಿಡುತ್ತದೆ ಎನ್ನುತ್ತಾರೆ ಮಧು, ವನ್ಯಜೀವಿ ಛಾಯಾಗ್ರಾಹಕ.

Also Read: 
ಬಂಡೀಪುರ ಅರಣ್ಯದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ವಾಸ್ತವ್ಯ, ಯಾಕೆ ಗೊತ್ತಾ!?

ಸಾಮಾನ್ಯ ಜನರು ಕೊಡಲಾಗದಷ್ಟು ದುಬಾರಿ ಹಣವನ್ನ ಸಫಾರಿಗೆ ಇಟ್ಟು ಇಲಾಖೆಯೇನೋ ಆದಾಯ ಗಳಿಸುತ್ತಿದೆ. ಅಷ್ಟೆ ಅಲ್ಲದೆ ಸಾಕಷ್ಟು ಅನುದಾನ ಸರ್ಕಾರದಿಂದ ಕೂಡ ಬರುತ್ತಿದೆ. ಅದನ್ನೆಲ್ಲ ಏನು ಮಾಡ್ತಿದ್ದಾರೆ ಅನ್ನೋ ಪ್ರಶ್ನೆ ಸಾರ್ವಜನಿಕರು ಕಾಡ್ತಿದೆ. ಈ ಬಗ್ಗೆ ಅಧಿಕಾರಿಗಳನ್ನ ಕೇಳಿದ್ರೆ, ಕಳೆದ ಆರು ತಿಂಗಳಿಂದ ಮಳೆಯಾಗುತ್ತಿರುವುದರಿಂದ ರಸ್ತೆ ಹದಗೆಟ್ಟಿದೆ. ಆದನ್ನು ಸರಿಪಡಿಸುತ್ತೇವೆ ಅನ್ನೋ ರೆಡಿಮೇಡ್ ಉತ್ತರ ನೀಡ್ತಿದ್ದಾರೆ.

ಒಟ್ಟು, ಬಂಡೀಪುರದಲ್ಲಿ ಸಫಾರಿ ಮಾಡಬೇಕು ಅಂತ ಪ್ರತಿದಿನ ಸಾವಿರಾರು ಪ್ರವಾಸಿಗರು ಖುಷಿಯಿಂದೇನೋ ಬಂಡೀಪುರಕ್ಕೆ ಹೋಗುತ್ತಿದ್ದಾರೆ. ಆದ್ರೆ ಆ ದುರಸ್ಥಿ ಕಾಣದ ರಸ್ತೆಗಳಿಂದ ಯಾಕಾದರೂ ಸಫಾರಿಗೆ ಬಂದ್ವಿ ಅಂತ ಬೇಸರದಿಂದ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ವರದಿ: ದಿಲೀಪ್ ಚೌಡಹಳ್ಳಿ, ಟಿವಿ 9, ಚಾಮರಾಜನಗರ

ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ