ಬಂಡೀಪುರದಲ್ಲಿ ಸಫಾರಿ ದರ ಏರಿಕೆ; ಕೊರೊನಾ ನಡುವೆ ದರ ಹೆಚ್ಚಳಕ್ಕೆ ಪ್ರವಾಸಿಗರ ಅಸಮಾಧಾನ
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ದರ ಏರಿಸಲಾಗಿದ್ದು, ಕೊರೊನಾ ನಡುವೆ ದರ ಏರಿಕೆ ಮಾಡಿರುವುದಕ್ಕೆ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚಾಮರಾಜನಗರ: ಕೊರೊನಾ ದೆಸೆಯಿಂದಾಗಿ ಕಳೆದೊಂದು ವರ್ಷದಿಂದ ಪ್ರವಾಸೋದ್ಯಮ ಇಲಾಖೆ ಹಲವು ಏರುಪೇರುಗಳನ್ನು ಎದುರಿಸುತ್ತಿದೆ. ಈಗ ಕೊರೊನಾ ಎರಡನೇ ಅಲೆ ಭೀತಿ ಎದುರಾಗಿರುವುದರಿಂದ ಮತ್ತೆ ಕೆಲ ಜಿಲ್ಲೆಗಳಲ್ಲಿ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗುತ್ತಿದೆ. ಏತನ್ಮಧ್ಯೆ, ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ದರ ಏರಿಸಲಾಗಿದ್ದು, ಕೊರೊನಾ ನಡುವೆ ದರ ಏರಿಕೆ ಮಾಡಿರುವುದಕ್ಕೆ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಂಡೀಪುರದಲ್ಲಿ ಸಫಾರಿಗೆಂದು ಬರುವ ಪ್ರಾಣಿಪ್ರಿಯರಿಗೆ ದರ ಏರಿಕೆ ಕೊಂಚ ಬಿಸಿ ಮುಟ್ಟಿಸಿದೆ. ಸಫಾರಿ ದರ ₹350 ರಿಂದ ₹600ಕ್ಕೆ ಏರಿಕೆಯಾಗಿದ್ದು, ವಿದೇಶಿಗರ ಟಿಕೆಟ್ ಬೆಲೆ ₹500ರಿಂದ ₹1000ಕ್ಕೆ ಏರಿದೆ. ಕ್ಯಾಮೆರಾ ಶುಲ್ಕ ₹750ರಿಂದ ₹1,500ಕ್ಕೆ, ಸಫಾರಿ ಜಿಪ್ಸಿ ದರ ₹3,000 ದಿಂದ ₹3,500ಕ್ಕೆ, 9 ಸೀಟ್‌ನ ಕ್ಯಾಂಪರ್ ದರ ₹5000ದಿಂದ ₹7,000ಕ್ಕೆ, ಕಾಟೇಜ್ ಬಾಡಿಗೆ ₹1,500 ರಿಂದ ₹2,000ಕ್ಕೆ ಹಾಗೂ ಗಣ್ಯರ ಗಜೇಂದ್ರ ಕೊಠಡಿ ದರ ₹2,500ರಿಂದ ₹3,000ಕ್ಕೆ ಏರಿಕೆಯಾಗಿದೆ. ನಾಲ್ಕು ವರ್ಷಗಳ ಬಳಿಕ ದರ ಪಟ್ಟಿಯನ್ನು ಅರಣ್ಯ ಇಲಾಖೆ ಪರಿಷ್ಕರಿಸಿದ್ದು, ಕೊರೊನಾ ನಡುವೆಯೇ ದರ ಏರಿಕೆ ಮಾಡಿದೆ.
ಶ್ರೀಗಂಧದ ಮರಗಳು ಕಳ್ಳರ ಪಾಲು ಕೋಲಾರ: ಉದ್ಯಾನವನದಲ್ಲಿದ್ದ ಸುಮಾರು ಹದಿನೈದು ವರ್ಷಗಳಷ್ಟು ಹಳೆಯ ಎರಡು ಶ್ರೀಗಂಧ ಮರಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ನಗರದ ಸರ್ವಜ್ಞ ಪಾರ್ಕ್ನಲ್ಲಿ ನಡೆದಿದೆ. ಲಕ್ಷಾಂತರ ಮೌಲ್ಯದ ಎರಡು ಶ್ರೀಗಂಧದ ಮರಗಳಿಗೆ ಕಳ್ಳರು ಕನ್ನ ಹಾಕಿದ್ದು, ಬೆಳ್ಳಂಬೆಳಗ್ಗೆ ವಾಯುವಿಹಾರಕ್ಕೆ ಬಂದ ಜನರು ಕಂಗಾಲಾಗಿದ್ದಾರೆ. ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸಿನಿಮಾ ಹೀರೋಗಾಗಿ ಬಂಡೀಪುರದಲ್ಲಿ ರಾತ್ರಿ ಸಫಾರಿ! ಕಾನೂನುಬಾಹಿರ ವಿಡಿಯೋ ವೈರಲ್
ರೈಲ್ವೆ ಕಂಬಿಗಳ ಬೇಲಿ ನಿರ್ಮಾಣ; ಆನೆಗಳ ಉಪಟಳವನ್ನು ನಿಲ್ಲಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ನೂತನ ಪ್ರಯೋಗ