ಮಾಜಿ ಸಚಿವರು ನನಗೆ ₹18 ಲಕ್ಷ ಮೌಲ್ಯದ ಆಭರಣ, ಮೊಬೈಲ್​ ಹಾಗೂ ಎರಡು ಬ್ಯಾಗ್​ ಬಟ್ಟೆ ಕೊಡಿಸಿದ್ದರು: ಸಂತ್ರಸ್ತ ಯುವತಿ

ಮಾಜಿ ಸಚಿವರಿಂದ ಪಡೆದ ₹18 ಲಕ್ಷ ಮೌಲ್ಯದ ಜ್ಯುವೆಲ್ಲರಿ ಗಿಫ್ಟ್​ನ ಬಿಲ್​ ನೀಡಿರುವ ಸಂತ್ರಸ್ತ ಯುವತಿ ಅದನ್ನು ಆರ್​.ಟಿ.ನಗರದ ಶಾಪ್​ ಒಂದರಲ್ಲಿ ಮಾಜಿ ಸಚಿವರೇ ಕೊಡಿಸಿದ್ದು ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಎರಡು ಬ್ಯಾಗ್ ಬಟ್ಟೆಯನ್ನೂ ಶಾಪಿಂಗ್ ಮಾಡಿಸಿದ್ದಾರೆ, ಮೊಬೈಲ್​ ಕೊಡಿಸಿದ್ದಾರೆ ಎಂದು ತನಿಖಾಧಿಕಾರಿಗಳ ಬಳಿ ಹೇಳಿದ್ದಾರೆ.

ಮಾಜಿ ಸಚಿವರು ನನಗೆ ₹18 ಲಕ್ಷ ಮೌಲ್ಯದ ಆಭರಣ, ಮೊಬೈಲ್​ ಹಾಗೂ ಎರಡು ಬ್ಯಾಗ್​ ಬಟ್ಟೆ ಕೊಡಿಸಿದ್ದರು: ಸಂತ್ರಸ್ತ ಯುವತಿ
ಸಿಡಿಯಲ್ಲಿರುವ ಸಂತ್ರಸ್ತ ಯುವತಿ
Follow us
Skanda
| Updated By: preethi shettigar

Updated on: Apr 04, 2021 | 9:19 AM

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಬಹಿರಂಗ ಪ್ರಕರಣದಲ್ಲಿ ಎಸ್​ಐಟಿ ತನಿಖೆ ಎದುರಿಸುತ್ತಿರುವ ಸಂತ್ರಸ್ತ ಯುವತಿ ಮಾಜಿ ಸಚಿವರು ಕೊಡಿಸಿದ ಉಡುಗೊರೆಗಳ ಬಗ್ಗೆ ಬಾಯಿಬಿಟ್ಟಿದ್ದಾರೆ. ಈ ಬಗ್ಗೆ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿರುವ ಸಂತ್ರಸ್ತೆ, ತನಗೆ ನೀಡಲಾದ ಮೊಬೈಲ್​, ಆಭರಣ, ಬಟ್ಟೆಗಳಿಗೆ ಸಂಬಂಧಿಸಿದ ಬಿಲ್​ ಹಾಗೂ ಅವುಗಳನ್ನು ಎಲ್ಲಿ ಖರೀದಿಸಲಾಯಿತು ಎಂಬ ವಿವರವನ್ನು ತಿಳಿಸಿದ್ದಾರೆ ಎನ್ನಲಾಗಿದೆ.

ಮಾಜಿ ಸಚಿವರಿಂದ ಪಡೆದ ₹18 ಲಕ್ಷ ಮೌಲ್ಯದ ಜ್ಯುವೆಲ್ಲರಿ ಗಿಫ್ಟ್​ನ ಬಿಲ್​ ನೀಡಿರುವ ಸಂತ್ರಸ್ತ ಯುವತಿ ಅದನ್ನು ಆರ್​.ಟಿ.ನಗರದ ಶಾಪ್​ ಒಂದರಲ್ಲಿ ಮಾಜಿ ಸಚಿವರೇ ಕೊಡಿಸಿದ್ದು ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ಎರಡು ಬ್ಯಾಗ್ ಬಟ್ಟೆಯನ್ನೂ ಶಾಪಿಂಗ್ ಮಾಡಿಸಿದ್ದಾರೆ, ಮೊಬೈಲ್​ ಕೊಡಿಸಿದ್ದಾರೆ ಎಂದು ತನಿಖಾಧಿಕಾರಿಗಳ ಬಳಿ ಹೇಳಿದ್ದಾರೆ. ಶಾಪಿಂಗ್​ಗೆ ಸಂಬಂಧಿಸಿದಂತೆ ಬಿಲ್​ ಹಾಗೂ ಶಾಪ್​ ವಿವರವನ್ನು ಯುವತಿ ಹೇಳಿದ್ದಾರೆ ಎನ್ನಲಾಗುತ್ತಿದೆ.

ಇನ್ನು ನಿನ್ನೆ ನಡೆದ ತನಿಖೆಯಲ್ಲಿ ಸಂತ್ರಸ್ತ ಯುವತಿಯ ಹಣದ ಮೂಲದ ಬಗ್ಗೆ ಕೆದಕಿದ್ದ ಎಸ್​ಐಟಿ ಅಧಿಕಾರಿಗಳು, ನಿಮಗೆ ಯಾರು ಹಣ ನೀಡುತ್ತಿದ್ದಾರೆ ಎಂದು ನೇರವಾಗಿ ಪ್ರಶ್ನೆ ಇಟ್ಟಿದ್ದರು. ಬೆಂಗಳೂರಿನಿಂದ ಹೊರಟ ಬಳಿಕ ಬೇರೆ ಬೇರೆ ಕಡೆಗಳಲ್ಲಿ ಉಳಿದುಕೊಳ್ಳಲು ಯಾರು ಸಹಾಯ ಮಾಡಿದರು? ಅಷ್ಟು ದಿನ ಅಜ್ಙಾತ ಸ್ಥಳದಲ್ಲಿ ಉಳಿದುಕೊಂಡಿದ್ದೇಕೆ? ಇಷ್ಟು ದಿನ ಯಾಕೆ ನೀವು ಎಲ್ಲಿಯೂ‌ ಕಾಣಿಸಿಕೊಂಡಿಲ್ಲ? ಕೋರ್ಟ್ ಹಾಲ್ ಬಳಿ 164 ಹೇಳಿಕೆ ದಾಖಲು ಮಾಡಿದ್ದ ದಿನ‌ ಕರೆತಂದವರು ಯಾರು? ಎನ್ನುವುದನ್ನೂ ಕೇಳಿದ್ದಾರೆ. ನಿಮ್ಮ ಪೋಷಕರೇ ನಮ್ಮ ಮಗಳನ್ನು ಕಿಡ್ನಾಪ್ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ಅಸಲಿ ಸಂಗತಿ ಏನು? ಒತ್ತಡಕ್ಕೆ ಒಳಗಾಗದೇ ಏನಾಗಿದೆ ಅನ್ನೋ ನಿಜ ಸಂಗತಿ ಹೇಳಿ. ನೀವು ಕೇವಲ ವಿಡಿಯೋ ಮಾತ್ರ ರೆಕಾರ್ಡ್ ಮಾಡ್ತಾ ಇದ್ರಿ. ಹಾಗಾದರೆ, ರೆಕಾರ್ಡ್ ಮಾಡ್ತಾ ಇದ್ದಿದ್ದು ಯಾರು? ನೀವೀಗ ದೆಹಲಿಯಿಂದ ಬಂದಿರೋದಾಗಿ ಮಾಹಿತಿ ಇದೆ. ದೆಹಲಿಗೆ ಹೋಗಿದ್ದೇಕೆ? ಸಿಡಿ ಬಿಡುಗಡೆ ಬಳಿಕ ಎಲ್ಲೆಲ್ಲಿ ಸುತ್ತಾಡಿದ್ರಿ? ನಿಮ್ಮ ಜೊತೆಯಲ್ಲಿ ಇದ್ದವರು ಯಾರು? ಎಂಬ ಸರಣಿ ಪ್ರಶ್ನೆಗಳನ್ನೂ ಯುವತಿಯ ಎದುರು ಇಟ್ಟಿದ್ದರು.

ಇದನ್ನೂ ಓದಿ: ಪೂರ್ವಯೋಜಿತ ರಾಜಕೀಯ ಷಡ್ಯಂತ್ರ ಎಂದು ನಿರೂಪಿಸಲು ಬಲವಾದ ಸಾಕ್ಷ್ಯದ ಬೇಟೆಯಲ್ಲಿ ರಮೇಶ್​ ಜಾರಕಿಹೊಳಿ? 

ಸುದ್ದಿ ವಿಶ್ಲೇಷಣೆ | ರಮೇಶ್​ ಜಾರಕಿಹೊಳಿ ಸಿಡಿ ಕೇಸ್​, ಕಾಂಗ್ರೆಸ್​ ಶಾಸಕರನ್ನು ವಿಚಲಿತಗೊಳಿಸಿದ ಡಿ.ಕೆ. ಶಿವಕುಮಾರ್​

(Ramesh Jarkiholi Obscene CD Case Victim says Ex minister has gifted Rs 18 lakh valued jewellery cloths and mobile)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ