Gold Rate Today: ಚಿನ್ನಾಭರಣಕ್ಕೆ ಬೇಡಿಕೆಯ ಮಹಾಪೂರ.. ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ ಏರಿದ ಆಮದು!

Gold Silver Price in Bangalore: ಭಾರತದಲ್ಲಿ ಈ ವರ್ಷ ಚಿನ್ನ ಭಾರೀ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗಿದೆ. ಚಿನ್ನದ ದರ ಕುಸಿತ ಕಾಣುತ್ತಿರುವುದರಿಂದ ಜನರು ಚಿನ್ನ ಖರೀದಿಗೆ ಮುಂದಾಗುತ್ತಿದ್ದಾರೆ.

Gold Rate Today: ಚಿನ್ನಾಭರಣಕ್ಕೆ ಬೇಡಿಕೆಯ ಮಹಾಪೂರ.. ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ ಏರಿದ ಆಮದು!
ಸಾಂದರ್ಭಿಕ ಚಿತ್ರ
Follow us
shruti hegde
|

Updated on:Apr 04, 2021 | 9:25 AM

ಚಿನ್ನ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿನ್ನಕ್ಕೆ ಮುಗಿಬೀಳುವವರೇ ಹೆಚ್ಚು. ಒಂದು ವರ್ಷದ ಹಿಂದೆ ಚಿನ್ನ ಬೆಲೆಯನ್ನು ಗಮನಿಸಿದಾಗ ಭಾರತದಲ್ಲಿ ಚಿನ್ನ ಆಮದು ಈ ವರ್ಷ ಹೆಚ್ಚಾಗಿದೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಚಿನ್ನದ ಆಮದು ಶೇಕಡಾ 471 ರಷ್ಟು ಏರಿಕೆಯಾಗಿದೆ. ಆಮದು ತೆರಿಗೆಗಳಲ್ಲಿನ ಕಡಿತದಿಂದಾಗಿ ಖರೀದಿದಾರರಲ್ಲಿ ಬಯಕೆ ಮೂಡಿದ್ದು ಚಿನ್ನದ ಬೇಡಿಕೆ ಹೆಚ್ಚಾಗಲು ಕಾರಣವೆಂದು ಹೇಳಬಹುದು.

ಈ ವರ್ಷದ ಮಾರ್ಚ್​ ತಿಂಗಳಿನಲ್ಲಿ ಭಾರತ 321 ಟನ್​ಗಳಷ್ಟು ಚಿನ್ನ ಆಮದು ಮಾಡಿಕೊಂಡಿದೆ. ಒಂದು ವರ್ಷದ ಹಿಂದೆ 124 ಟನ್‌ಗಳಷ್ಟಿತ್ತು ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಮಾರ್ಚ್ ತಿಂಗಳ ಆಮದು ಒಂದು ವರ್ಷದ ಹಿಂದೆ 1.23 ಬಿಲಿಯನ್ನಿಂ​ದ  8.4 ಬಿಲಿಯನ್​ಗೆ ಏರಿದೆ. ಬೇಡಿಕೆಯನ್ನು ಕಳೆದ ಫೆಬ್ರವರಿಯಲ್ಲಿ ಭಾರತವು ಚಿನ್ನದ ಮೇಲಿನ ಆಮದು ಸುಂಕವನ್ನು ಶೇಕಡಾ 12.5 ರಿಂದ ಶೇ 10.75 ಕ್ಕೆ ಇಳಿಸಿದೆ.

2021 ರ ಏಪ್ರಿಲ್ 1 ರಂದು ಐಬಿಜೆಎ ದರಗಳ ಪ್ರಕಾರ, ಎಂಸಿಎಕ್ಸ್ ನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 44,917 ರೂ. ಮತ್ತು 22 ಕ್ಯಾರೆಟ್ ಬೆಲೆ 10 ಗ್ರಾಂಗೆ 44,737 ರೂಪಾಯಿ ಇತ್ತು. ಇಂದು ಏಪ್ರಿಲ್ 4 ನೇ ತಾರೀಕಿನಂದು 22 ಕ್ಯಾರೆಟ್ 10 ಗ್ರಾಂ ಚಿನ್ನ 42,250 ರೂಪಾಯಿ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನ 46,090 ರೂಪಾಯಿ ಇದೆ.

22 ಕ್ಯಾರೆಟ್ ಚಿನ್ನ ದರ ಮಾಹಿತಿ ಚಿನ್ನಾಭರಣದ ದೈನಂದಿನ ದರ ಬದಲಾವಣೆಯನ್ನು ಗಮನಿಸಿದಾಗ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ನಿನ್ನೆಯ ದರವನ್ನೇ ಚಿನ್ನ ಕಾಯ್ದುಕೊಂಡಿದೆ. ದರ ಸ್ಥಿರವಾಗಿದ್ದು, 22 ಕ್ಯಾರೆಟ್ ಚಿನ್ನ ದರ ಮಾಹಿತಿ ಹೀಗೆದೆ. 1 ಗ್ರಾಂ ಚಿನ್ನ ದರ 4,225 ರೂಪಾಯಿ ಇದೆ. 8 ಗ್ರಾಂ ಚಿನ್ನ ದರ 33,800 ರೂಪಾಯಿ ಇದೆ. 10 ಗ್ರಾಂ ಚಿನ್ನ ದರ 42,250 ರೂಪಾಯಿ ಹಾಗೂ 100 ಗ್ರಾಂ ಚಿನ್ನ ದರ 4,22,500 ರೂಪಾಯಿ ಇದೆ.

24 ಕ್ಯಾರೆಟ್ 10 ಗ್ರಾಂ ಚಿನ್ನ ದರ ಮಾಹಿತಿ 1 ಗ್ರಾಂ ಚಿನ್ನಕ್ಕೆ ಇಂದು 4,609 ರೂಪಾಯಿ ನಿಗದಿಯಾಗಿದೆ. 8 ಗ್ರಾಂ ಚಿನ್ನದ ದರ 36,872 ರೂಪಾಯಿ ಇದೆ. 10 ಗ್ರಾಂ ಚಿನ್ನದ ದರ 46,090 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,60,900 ರೂಪಾಯಿ ಆಗಿದೆ.

ಬೆಳ್ಳಿ ದರ ಮಾಹಿತಿ ಬೆಳ್ಳಿ ದರದಲ್ಲಿ ಇಂದು ಕೊಂಚ ಏರಿಕೆ ಕಂಡು ಬಂದಿದ್ದು 1 ಗ್ರಾಂ ಬೆಳ್ಳಿ ದರ 65.90 ರೂಪಾಯಿ ಆಗಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ 518.40 ರೂಪಾಯಿ ಇದ್ದು ಇಂದು 527.20 ರೂಪಾಯಿ ಆಗಿದೆ. 10 ಗ್ರಾಂ ಬೆಳ್ಳಿ ನಿನ್ನೆ 648 ರೂಪಾಯಿಗೆ ಮಾರಾಟವಾಗಿದ್ದು ಇಂದು 659 ರೂಪಾಯಿಗೆ ಜಿಗಿದಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 6,480 ರೂಪಾಯಿ ಆಗಿದ್ದು, ಇಂದು 6,480 ರೂಪಾಯಿ ಆಗಿದೆ. 1 ಕೆಜಿ ಬೆಳ್ಳಿ ದರ ನಿನ್ನೆ 64,800 ರೂಪಾಯಿ ಇದ್ದು, ಇಂದು 65,900 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,100 ರೂಪಾಯಿ ಏರಿಕೆ ಕಂಡಿದೆ.

ಇದನ್ನೂ ಓದಿ: Gold Price Today: ಚಿನ್ನ, ಬೆಳ್ಳಿ ಕೊಳ್ಳುವ ಆಸೆ ಇದ್ದರೆ.. ದರ ಹೀಗಿದೆ ಗಮನಿಸಿ!

Gold Price Today: ಕೂಡಿಟ್ಟ ಹಣಕ್ಕೆ ಚಿನ್ನ ಕೊಳ್ಳಬಹುದೇ ಎಂದು ಯೋಚಿಸಿ.. ಚಿನ್ನಾಭರಣದ ದರ ಹೀಗಿದೆ!

Published On - 9:15 am, Sun, 4 April 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ