ಪೊಲೀಸ್ ಅಧಿಕಾರಿಗಳಿಗೆ ತಲೆ ನೋವಾದ ಕಾಡುಗಳ್ಳನ ಎನ್​ಕೌಂಟರ್​ ಕೇಸ್​: ನಾಪತ್ತೆಯಾಗಿರುವ 9 ಬೇಟೆಗಾರರಿಗಾಗಿ ಖಾಕಿ ತಲಾಶ್​​

Chamarajanagar: ಭಾನುವಾರ ನಡೆದ ಕಾಡುಗಳ್ಳನ ಎನ್ ಕೌಂಟರ್ ಪ್ರಕರಣವನ್ನ ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಚಾಮರಾಜನಗರ ಡಿವೈಎಸ್​ಪಿ ನೇತೃತ್ವದಲ್ಲಿ ತಂಡ ರಚಿಸಿರುವ ಎಸ್ ಪಿ ಪದ್ಮಿನಿ ಸಾಹು ನಾಪತ್ತೆಯಾಗಿರುವ 9 ಮಂದಿ ಕಾಡುಗಳ್ಳರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಪೊಲೀಸ್ ಅಧಿಕಾರಿಗಳಿಗೆ ತಲೆ ನೋವಾದ ಕಾಡುಗಳ್ಳನ ಎನ್​ಕೌಂಟರ್​ ಕೇಸ್​: ನಾಪತ್ತೆಯಾಗಿರುವ 9 ಬೇಟೆಗಾರರಿಗಾಗಿ ಖಾಕಿ ತಲಾಶ್​​
ನಾಪತ್ತೆಯಾಗಿರುವವರಿಗಾಗಿ ಪೊಲೀಸ್​ ಹುಡುಕಾಟ
Edited By:

Updated on: Nov 09, 2023 | 3:12 PM

ಚಾಮರಾಜನಗರ, ನವೆಂಬರ್​​​ 9: ಭಾನುವಾರ ನಸುಕಿನ ವೇಳೆ ಬಂಡೀಪುರ ಟೈಗರ್ ರಿಸರ್ವ್ ವ್ಯಾಪ್ತಿಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಕಾಡುಗಳ್ಳ ಫಾರೆಸ್ಟ್ ಅಧಿಕಾರಿ ಹಾರಿಸಿದ ಗುಂಡಿಗೆ (encounter) ಬಲಿಯಾಗಿದ್ದ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ 9 ಮಂದಿ ಬೇಟೆಗಾರರಿಗಾಗಿ ಪೊಲೀಸರು 2 ವಿಶೇಷ ತಂಡವನ್ನ ರಚಿಸಿದ್ದಾರೆ. ಚಾಮರಾಜನಗರ ಡಿವೈಎಸ್​ಪಿ ನೇತೃತ್ವದಲ್ಲಿ ತಂಡ ರಚಿಸಿರುವ ಎಸ್ ಪಿ ಪದ್ಮಿನಿ ಸಾಹು ನಾಪತ್ತೆಯಾಗಿರುವ 9 ಮಂದಿ ಕಾಡುಗಳ್ಳರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಈಗಾಲೇ 9 ಮಂದಿ ಆರೋಪಿತರ ಟವರ್ ಲೊಕೇಷನ್ ಕಲೆ ಹಾಕಿದ್ದು 9 ಮಂದಿಯೂ ಮೊಬೈಲ್ ನ ಸ್ವಿಚ್ ಆಫ್ ಮಾಡ್ಕೊಂಡು ತಲೆ ಮರೆಸಿಕೊಂಡಿದ್ದು ಯಾರ ಸಂಪರ್ಕಕ್ಕೂ ಸಿಗದೆ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ತಡರಾತ್ರಿ ಅರಣ್ಯದೊಳಗೆ ಘನಘೋರ ಗುಂಡಿನ ಕಾಳಗ!ಅರಣ್ಯಾಧಿಕಾರಿಯ ಎನ್ ಕೌಂಟರ್​ಗೆ ಬೇಟೆಗಾರ ಬಲಿ

ಭಾನುವಾರ ನಸುಕಿನ ವೇಳೆ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್​ನ ಮದ್ದೂರು ವಲಯದಲ್ಲಿ 10 ಮಂದಿ ಬೇಟೆಗಾರರು ಮೂರ್ನಾಲ್ಕು ಕಡವೆಯನ್ನ ಬೇಟೆಯಾಡಿದ್ದರು. ಗುಂಡಿನ ಮೊರೆತ ಕೇಳಿದ ಗಸ್ತು ಸಿಬ್ಬಂದಿ ಎಪಿಸಿಗೆ ವಿಷಯ ಮುಟ್ಟಿಸಿದ್ದರು. ಈ ವೇಳೆ ಬೇಟೆಗಾರರಿಗಾಗಿ ಶೋಧ ನಡೆಸಿ ಎಪಿಸಿ ಕ್ಯಾಂಪ್ ಸಿಬ್ಬಂದಿಗೆ ಬೇಟೆಗಾರರು ಎದುರಾಗಿದ್ದರು.

ಶರಣಾಗುವಂತೆ ಎಪಿಸಿ ಸಿಬ್ಬಂದಿ ಸೂಚನೆ ನೀಡಿದ್ದರು ಭೀಮನಬೀಡು ಗ್ರಾಮದ ಮನು ಅರಣ್ಯಾಧಿಕಾರಿಗಳ ಮೇಲೆಯೆ ಗುಂಡು ಹಾರಿಸಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಅರಣ್ಯಾಧಿಕಾರಿ ಮನು ಮೇಲೆ ಗುಂಡು ಹಾರಿಸಿ ಎನ್ ಕೌಂಟರ್ ಮಾಡಿದ್ದರು. ಮನುವಿಗೆ ಗುಂಡು ಬೀಳುತ್ತಿದ್ದಂತೆ 140 ಕೆಜಿ ತೂಕದ ಕಡವೆ ಮಾಂಸ ಹಾಗೂ ಒಂದು ಸಿಂಗಲ್ ಬ್ಯಾರಲ್ ಬಂದೂಕನ್ನ ಸ್ಥಳದಲ್ಲೇ ಬಿಟ್ಟು 9 ಮಂದಿ ಬೇಟೆಗಾರರು ಎಸ್ಕೇಪ್ ಆಗಿದ್ದರು. ಈಗ ಪರಾರಿಯಾಗಿರುವ 9 ಮಂದಿ ಬೇಟೆಗಾರರಿಗಾಗಿ ಪೊಲೀಸರು ತೀವ್ರ ಶೋಧಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಜಿಂಕೆ ಬೇಟೆಯಾಡಲು ಬಂದಿದ್ದವನ ಎದೆ ಸೀಳಿದ ಅರಣ್ಯಾಧಿಕಾರಿಯ ಗುಂಡು; ಸ್ಥಳದಲ್ಲೇ ಮೃತ

ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬಂತೆ ಈಗ ಇನ್ನುಳಿದ 9 ಮಂದಿ ಬೇಟೆಗಾರರಿಗಾಗಿ ಪೊಲೀಸರು ತೀವ್ರ ಶೋಧಕಾರ್ಯ ನಡೆಸುತ್ತಿದ್ದು 2 ಪ್ರತ್ಯೇಕ ತಂಡದೊಂದಿಗೆ ಶೋಧಕಾರ್ಯ ನಡೆಸುತ್ತಿದ್ದಾರೆ.

ಆರೋಪಿಗಳ ಕಾಲಿಗೆ ಗುಂಡೇಟು ಕೊಟ್ಟು ಬಂಧಿಸಿದ ಪೊಲೀಸರು!

ಕೋಲಾರ: ಅಪ್ರಾಪ್ತ ಬಾಲಕ ಕಾರ್ತಿಕ್‌ ಸಿಂಗ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಮೇಲೆ‌ ಪೊಲೀಸರು ಫೈರಿಂಗ್‌ ಮಾಡಿರುವಂತಹ ಘಟನೆ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದ ಬಳಿ ನಡೆದಿದೆ. ಆರೋಪಿಗಳನ್ನು ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಮುಳಬಾಗಿಲು ಸಬ್ಇನ್ಪೆಕ್ಟರ್ ವಿಠಲ್ ತಳವಾರ್ ಅವರಿಂದ ಆರೋಪಿಗಳ ಎರಡೂ ಕಾಲುಗಳಿಗೆ ಫೈರಿಂಗ್‌ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸೂರಜ್ ಪ್ರಸಾದ್ ಎಸ್.ಎನ್

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Loading...
Unable to load recommendations.
Follow Us