ತಡರಾತ್ರಿ ಅರಣ್ಯದೊಳಗೆ ಘನಘೋರ ಗುಂಡಿನ ಕಾಳಗ!ಅರಣ್ಯಾಧಿಕಾರಿಯ ಎನ್ ಕೌಂಟರ್ಗೆ ಬೇಟೆಗಾರ ಬಲಿ
ಅದು ಕಡವೆ ಬೇಟೆಯಾಡುವ ಗ್ಯಾಂಗ್, ರಾತ್ರೋರಾತ್ರಿ ಅರಣ್ಯ ಪ್ರವೇಶಿಸಿ ನಾಲ್ಕಕ್ಕೂ ಹೆಚ್ಚು ಕಡವೆ ಬೇಟೆಯಾಡಿದ್ದರು.ಗುಂಡಿನ ಶಬ್ದ ಕೇಳುತ್ತಿದ್ದಂತೆ ಅಲರ್ಟ್ ಆದ ಅರಣ್ಯ ಸಿಬ್ಬಂದಿ, ಬೇಟೆಗಾರರ ಹುಡುಕಾಟ ನಡೆಸಿದ್ದರು. ಈ ವೇಳೆ ಕಡವೆ ಬೇಟೆ ಗ್ಯಾಂಗ್ ಅರಣ್ಯ ಸಿಬ್ಬಂದಿ ಕಣ್ಣಿಗೆ ಬಿದ್ದಿದ್ದು, ಬೇಟೆಗಾರರು ತಪ್ಪಿಸಿಕೊಳ್ಳಲು ಅರಣ್ಯ ಸಿಬ್ಬಂದಿ ಮೇಲೆ ಫೈರಿಂಗ್ ನಡೆಸಿದ್ದಾರೆ. ಗುಂಡಿನ ಚಕಮಕಿ ವೇಳೆ ಅರಣ್ಯ ಸಿಬ್ಬಂದಿ ಗುಂಡು ಒಬ್ಬ ಬೇಟೆಗಾರನ ಎದೆ ಸೀಳಿದೆ.
ಚಾಮರಾಜನಗರ, ನ.05: ಬಂಡೀಪುರ ಹುಲಿಸಂರಕ್ಷಿತಾರಣ್ಯದಲ್ಲಿ. ತಡರಾತ್ರಿ ಕಡವೆ ಬೇಟೆಯಾಡಲೂ 10 ಮಂದಿ ಬೇಟೆಗಾರರ ತಂಡ ಚಾಮರಾಜನಗರ(Chamarajanagar) ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯ(Bandipur Tiger Reserve Forest) ದ ಮದ್ದೂರು ವಲಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ರಾತ್ರೋರಾತ್ರಿ ಈ ಗ್ಯಾಂಗ್ ನಾಲ್ಕಕ್ಕೂ ಹೆಚ್ಚು ಕಡವೆ ಬೇಟೆಯಾಡಿದ್ದಾರೆ. ಕಡವೆ ಮಾಂಸವನ್ನು ಹೊತ್ತೊಯ್ಯುವ ವೇಳೆ ಅರಣ್ಯದ ಗಸ್ತಿನಲ್ಲಿದ್ದ ಕಳ್ಳಬೇಟೆ ಶಿಬಿರದ ಅರಣ್ಯ ಸಿಬ್ಬಂದಿ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ಅರಣ್ಯ ಸಿಬ್ಬಂದಿ ಮೇಲೆ ಬೇಟೆಗಾರರು ಫೈರಿಂಗ್ ನಡೆಸಿದ್ದು, ಪ್ರಾಣ ಉಳಿಸಿಕೊಳ್ಳಲೂ ಅರಣ್ಯ ಸಿಬ್ಬಂದಿ ಕೂಡ ಫೈರಿಂಗ್ ಮಾಡಿದ್ದಾರೆ. ಈ ವೇಳೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ಮನು ಎಂಬಾತನಿಗೆ ಗುಂಡು ಬಿದ್ದಿದ್ದು, ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಇನ್ನು ಒಬ್ಬ ಬೇಟೆಗಾರನಿಗೆ ಗುಂಡು ಬಿದ್ದ ತಕ್ಷಣವೇ ಇನ್ನುಳಿದ ಒಂಬತ್ತು ಮಂದಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಇದೀಗ ಅವರನ್ನು ಬಂಧಿಸಲು ಕೂಡ ತಲಾಶ್ ನಡೆಸಲಾಗುತ್ತಿದೆ. ಗುಂಡಿನ ಕಾಳಗ ನಡೆದ ಸ್ಥಳಕ್ಕೆ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೋ ಹಾಗೂ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಈ ವೇಳೆ ಕುಟುಂಬಸ್ಥರು ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಮನು ಸಾವಿನಿಂದ ನಮಗೆ ನೋವಾಗಿದೆ. ಅರಣ್ಯ ಸಿಬ್ಬಂದಿ ಕಾಲಿಗೆ ಗುಂಡು ಹೊಡೆದಿದ್ದರು ಕೂಡ ಹೇಗೊ ಬದುಕುತ್ತಿದ್ದ. ಈಗ ಜೀವ ಹೋಗಿದೆ. ಇದಕ್ಕೆ ಅರಣ್ಯ ಇಲಾಖೆ ಪರಿಹಾರ ಒದಗಿಸಕೊಡಬೇಕು ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಮೈಸೂರು: ಹುಲಿ ದಾಳಿಗೆ ಬಾಲಕ ಸಾವು, ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ ಅರಣ್ಯ ಇಲಾಖೆ
ಒಟ್ಟಿನಲ್ಲಿ ಕಡವೆ ಬೇಟೆಯಾಡಲು ಹೋಗಿದ್ದ ಗ್ಯಾಂಗ್ನ್ನೇ ಅರಣ್ಯ ಸಿಬ್ಬಂದಿಗಳು ಬೇಟೆಯಾಡಿದ್ದಾರೆ. ಇದೀಗ ಬೇಟೆಯಾಡಲೂ ಬಂದಿದ್ದ ಓರ್ವ ಮೃತಪಟ್ಟಿದ್ದು, ಇನ್ನುಳಿದ ಒಂಬತ್ತು ಮಂದಿಯ ಬಂಧನಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಸ್ಪೆಷಲ್ ಟೀಂ ಮೂಲಕ ಬಂಧನಕ್ಕೆ ಜಾಲ ಹೆಣೆಯುತ್ತಿದ್ದಾರೆ. ಇತ್ತಿಚ್ಚಿನ ದಿನಗಳಲ್ಲಿ ಅರಣ್ಯಕ್ಕೆ ನುಗ್ಗಿ ಬೇಟೆಯಾಡುವ ಕೃತ್ಯ ಕೂಡ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಕುರಿತು ಅರಣ್ಯ ಇಲಾಖೆ ಮತ್ತಷ್ಟು ಎಚ್ಚರಿಕೆ ವಹಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ