Hubli News: ಕಳೆನಾಶಕ ಸಿಂಪಡಿಸಿದ ಬಳಿಕ ಅಸ್ವಸ್ಥಗೊಂಡಿದ್ದ ಅರಣ್ಯಾಧಿಕಾರಿ ಸಾವು
ಕಳೆನಾಶಕ ಸಿಂಪಡಿಸುದ ಬಳಿಕ ಅಸ್ವಸ್ಥಗೊಂಡಿದ್ದ ಅರಣ್ಯಾಧಿಕಾರಿ ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಹುಬ್ಬಳ್ಳಿ: ಕಳೆನಾಶಕ ಸಿಂಪಡಿಸುದ ಬಳಿಕ ಅಸ್ವಸ್ಥಗೊಂಡಿದ್ದ ಅರಣ್ಯಾಧಿಕಾರಿ (Forest officer) ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕುಮಟಾ (Kumata) ತಾಲೂಕಿನ ಬಾಡ ಗ್ರಾಮದ ನಿವಾಸಿ ಯೋಗೇಶ ನಾಯಕ್ (Yogesh Nayak) ಮೃತ ದುರ್ದೈವಿ. ಯೋಗೇಶ ನಾಯಕ್ ಹಳಿಯಾಳ ವಿಭಾಗದ ಕುಳಗಿ ಶಾಖೆಯ ವಿರ್ನೋಲಿ ವಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ದಾಂಡೇಲಿಯ ಹಲವೆಡೆ ಕಳೆದ 13 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಜೂನ್ 27 ರಂದು ಸಾಗವಾನಿ ಸಸಿಗಳ ಕಳೆಯನ್ನು ನಾಶಪಡಿಸಲು ಹಾಗೂ ಭೂಮಿ ಒಳಗಡೆ ಇರುವ ಹುಳಹುಪ್ಪಡಿಗಳನ್ನು ಸಾಯಿಸಲು ಯೋಗೇಶ ನಾಯಕ್ ಪ್ಯಾರಾಗ್ಯೂಟ್ ಎಂಬ ವಿಷಪೂರಿತ ಕೀಟ ನಾಶಕವನ್ನು ಸಿಂಪಡಿಸಿದ್ದರು. ಬಳಿಕ ಕೈ ತೊಳೆಯದೆ ಊಟ, ನೀರು ಸೇವಿಸಿದ್ದಾರೆ.
ಇದನ್ನೂ ಓದಿ: ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ಸಾಲು ಸಾಲು ದರೋಡೆ, ವಂಚನೆಗಳು; ಜನರಲ್ಲಿ ಆತಂಕ
ನಂತರ ಮನೆಗೆ ಬಂದು ಒಂದು ದಿನದ ನಂತರ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಂಡಿದೆ. ತಕ್ಷಣವೇ ಸ್ಥಳೀಯ ಖಾಸಗಿ ವೈದ್ಯರನ್ನು ಸಂಪರ್ಕಿಸಿದಾಗ ಆಂಟಿಬಯಾಟಿಕ್ ಕೊಟ್ಟಿದ್ದಾರೆ. ಇದರಿಂದ ಉರಿ ಕಡಿಮೆಯಾಗದ ಕಾರಣ ಮರುದಿನ ಯೋಗೇಶ್ ನಾಯ್ಕ ತನ್ನ ಕಾರಲ್ಲೇ ಹುಬ್ಬಳ್ಳಿಯ ಎಸ್ಡಿಎಂಗೆ ದಾಖಲಾಗಿದ್ದರು.
ಅಲ್ಲಿಯೂ ಚಿಕಿತ್ಸೆ ಸಿಗಲು ಒಂದು ದಿನ ವಿಳಂಬ ಆಗಿದೆ ಎನ್ನಲಾಗಿದೆ. ಚಿಕಿತ್ಸೆ ನಡೆಸಿದಾಗ ಆಗಲೇ ಕಿಡ್ನಿ, ಲಿವರ್, ಲಂಗ್ಸ್ಗಳು ಡ್ಯಾಮೇಜ್ ಆಗಿದ್ದವು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆಗೆ ಯೋಗೇಶ್ ನಾಯ್ಕ್ ಕೋಮಾ ಸ್ಥಿತಿಗೆ ತಲುಪಿದ್ದರು. ಅಲ್ಲೂ ಕೂಡ ಚಿಕಿತ್ಸೆಗೆ ಸ್ಪಂಧಿಸದ ಕಾರಣ ಹುಬ್ಬಳ್ಳಿಯ ಕಿಮ್ಸ್ಗೆ ಶಿಪ್ಟ್ ಆಗಿದ್ದರು. ದುರಾದೃಷ್ಟ ನಿನ್ನೆ (ಜು.07) ಸಂಜೆ ಯೋಗೇಶ್ ನಾಯ್ಕ್ ಸಾವನ್ನಪ್ಪಿದ್ದಾರೆ. ಇದೀಗ ಹೆಂಡತಿ ಮಗುವನ್ನು ಹೊಂದಿದ್ದ ಅಧಿಕಾರಿಯ ಕುಟುಂಬ ಅತಂತ್ರವಾಗಿದೆ.
ರಾಜ್ಯದ ಮತ್ತಷ್ದಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:22 am, Sat, 8 July 23