ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ರೇಶನ್, ಪೆನ್ಶನ್ ಇಲ್ಲ ಎಂಬ ಆದೇಶ ಹೊರಡಿಸಿಲ್ಲ: ಚಾಮರಾಜನಗರ ಜಿಲ್ಲಾಧಿಕಾರಿ ಸ್ಪಷ್ಟನೆ
‘ನೋ ವ್ಯಾಕ್ಸಿನ್, ನೋ ರೇಷನ್, ನೋ ಪೆನ್ಷನ್’- ಇಂತಹ ಯಾವುದೇ ಆದೇಶ ಸರ್ಕಾರದ ವತಿಯಿಂದ ಘೋಷಣೆಯಾಗಿಲ್ಲ.
ಚಾಮರಾನಗರ: ‘ನೋ ವ್ಯಾಕ್ಸಿನ್, ನೋ ರೇಷನ್, ನೋ ಪೆನ್ಷನ್’ ಎಂಬ ಯಾವುದೇ ಆದೇಶವನ್ನು ಜಿಲ್ಲಾಡಳಿತ ಹೊರಡಿಸಿಲ್ಲ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಪೆನ್ಷನ್, ರೇಷನ್ ಕಡಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಚಾಮರಾಜನರ ಜಿಲ್ಲಾಧಿಕಾರಿ ಲಸಿಕೆ ಇಲ್ಲದಿದ್ದರೆ ಪಡಿತರ ಮತ್ತು ಪೆನ್ಶನ್ ಇಲ್ಲ ಎಂಬ ಆದೇಶ ಹೊರಡಿಸಿದ ಹೊತ್ತಲ್ಲೇ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ,‘ನೋ ವ್ಯಾಕ್ಸಿನ್, ನೋ ರೇಷನ್, ನೋ ಪೆನ್ಷನ್’- ಇಂತಹ ಯಾವುದೇ ಆದೇಶ ಸರ್ಕಾರದ ವತಿಯಿಂದ ಘೋಷಣೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಧಾನಿ ನರೇಂದ್ರ ಮೋದಿಯವರೇ ಉಚಿತವಾಗಿ ಲಸಿಕೆ ಕೊಡುತ್ತೇವೆ ಎಂದಿದ್ದಾರೆ. ಹೀಗಾಗಿ ಇಂತಹ ಸುದ್ದಿಯನ್ನು ಸಾರ್ವಜನಿಕರು ಯಾವುದೇ ಕಾರಣಕ್ಕೂ ನಂಬಬಾರದು ಎಂದು ತಿಳಿಸಿದರು.
ಇದನ್ನೂ ಓದಿ:
(Chamarajanagar DC Clarrifies there is no order says No Vaccine No ration no pension )