ಚಾಮರಾಜನಗರ, ಮಾ.30: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿರುವ ಪಾಲಾರ್(Palar) ಗ್ರಾಮಕ್ಕೆ ಇನ್ನೂ ವಿದ್ಯುತ್ ಸಂಪರ್ಕ(Electrical connection) ದೊರೆತಿಲ್ಲ. ಈ ಹಿನ್ನೆಲೆ ರೊಚ್ಚಿಗೆದ್ದ ಗ್ರಾಮದ ಬುಡಕಟ್ಟು ಸೋಲಿಗರು ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. 80ಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳಿರುವ ಈ ಗ್ರಾಮದ 50 ಮೀಟರ್ ಅಂತರದಲ್ಲೇ ಲೈನ್ ಇದ್ದರೂ ಸಂಪರ್ಕ ನೀಡಿಲ್ಲ. ಈ ಮಧ್ಯೆ ವಿದ್ಯುತ್ ಸಂಪರ್ಕ ನೀಡಲು ಅರಣ್ಯ ಇಲಾಖೆ ಅಡ್ಡಿ ಆರೋಪ ಕೂಡ ಕೇಳಿಬಂದಿದೆ. ಏಪ್ರಿಲ್ 1 ರಿಂದ ಉಪವಾಸ ಸತ್ಯಾಗ್ರಹ ನಡೆಸಲಿದ್ದು, ಅದಕ್ಕೂ ಸ್ಪಂದಿಸದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕಾರ ಹಾಕುವುದಾಗಿ ಪಾಲಾರ್ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ವಿಜಯಪುರ: ನೀರೆತ್ತುವ ಪಂಪ್ ಸೆಟ್ ಮೋಟಾರ್ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಗ್ರಾಮಸ್ಥರೇ ಹಿಡಿದು ಥಳಿಸಿದ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಎಸ್ಎಚ್ ಗೋನಾಳ ಗ್ರಾಮದಲ್ಲಿ ನಡೆದಿದೆ. ಜಮೀನುಗಳಲ್ಲಿನ ಬಾವಿ, ಕೊಳವೆ ಬಾವಿ, ಕಾಲುವೆಗಳ ಬಳಿಯ ಪಂಪ್ ಸೆಟ್ ಕದಿಯುತ್ತಿದ್ದ ಗ್ಯಾಂಗ್ ಇದಾಗಿದ್ದು, ನಿನ್ನೆ(ಮಾ.29) ಮೂವರು ಖದೀಮರು ಪಂಪ್ ಸೆಟ್ ಕಳ್ಳತನ ಮಾಡಲು ಬಂದಿದ್ದ ವೇಳೆ ಓರ್ವ ಕಳ್ಳನನ್ನು ಹಿಡಿದಿದ್ದರು.
ಇಬ್ಬರು ಖದೀಮರು ಪರಾರಿಯಾದರೆ, ಮುದ್ದೇಬಿಹಾಳ ಪಟ್ಟಣದ ಕಿಲ್ಲಾಗಲ್ಲಿ ನಿವಾಸಿ ಶಿವು ಪಾಟೀಲ್ ಎಂಬಾತ ಜನರ ಕೈಗೆ ಸಿಕ್ಕಿದ್ದಾನೆ. ಬಳಿಕ ತಾಳಿಕೋಟೆ ಪೋಲಿಸರಿಗೆ ಖದೀಮನನ್ನು ಎಸ್ಎಚ್ ಗೋನಾಳ ಗ್ರಾಮಸ್ಥರು ಒಪ್ಪಿಸಿದ್ದು, ಪೊಲೀಸರು ಶಿವು ಪಾಟೀಲ್ ವಿಚಾರಣೆ ನಡೆಸಿದ್ದಾರೆ. ಈ ಘಟನೆ ತಾಳಿಕೋಟಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:37 pm, Sat, 30 March 24