Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ದನಕರು ಸಾಕಬಾರದಂತೆ, ರೈತರು ಕಿಡಿಕಿಡಿ: ಅರಣ್ಯ ಇಲಾಖೆ ಹೇಳೋದೇನು?

ಇತ್ತೀಚೆಗೆ ಪ್ರವಾಸ ಕೈಗೊಂಡಿದ್ದ ಟಿಆರ್ (ಕೇಂದ್ರ ಹುಲಿ ಯೋಜನೆ ಅಧಿಕಾರಿಗಳು) ತಂಡದವರು ಈ ಭಾಗದಲ್ಲಿ ಹೆಚ್ಚು ಜಾನುವಾರು ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಇಲ್ಲಿ ಹೆಚ್ಚು ಹಸು ಸಾಕಬಾರದು. ತಪ್ಪಿದರೆ, ಕಾನೂನು ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನು ಅರಣ್ಯ ಇಲಾಖೆ ನೀಡಿದೆ.

ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ದನಕರು ಸಾಕಬಾರದಂತೆ, ರೈತರು ಕಿಡಿಕಿಡಿ: ಅರಣ್ಯ ಇಲಾಖೆ ಹೇಳೋದೇನು?
ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ರೈತರು ದನಕರುಗಳ ಸಾಕುವುದಕ್ಕೂ ತಮಿಳುನಾಡಿನವರ ಅತಿಕ್ರಮಣ ಪ್ರವೇಶ ತಡೆಗೂ ಏನು ಸಂಬಂಧ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 24, 2022 | 1:14 PM

ಕೃಷಿ ಜೊತೆಗೆ ಹೈನುಗಾರಿಕೆ ಮಾಡಿಕೊಂಡು ಹೆಚ್ಚಿನ ಆದಾಯ ಗಳಿಸಬೇಕೆಂದು ಸರ್ಕಾರವೇ ಪ್ರೋತ್ಸಾಹ ನೀಡ್ತಿದೆ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಸಾಕಿರುವ ಹಸುಗಳು ಸೇರಿದಂತೆ ಇತರ ಜಾನುವಾರಗಳನ್ನ ಸ್ಥಳಾಂತರ ಮಾಡಿ ಎಂದು ಅರಣ್ಯ ಇಲಾಖೆಯು ಆದೇಶ ಹೊರಡಿಸಿದೆ. ಈ ರೀತಿಯ ಸೂಚನೆ ಅನ್ನದಾತರ ಆಕ್ರೋಶ ಭುಗಿಲೇಳುವಂತೆ ಮಾಡಿದೆ. ಈ ಕುರಿತ ಕಂಪ್ಲಿಟ್ ವರದಿ ಇಲ್ಲಿದೆ. ಇಂದು ಅನ್ನದಾತರ ದಿನಾಚರಣೆ… ಆದರೆ ಈ ದಿನಾಚರಣೆಯ ದಿನವೇ ರೈತರಿಗೆ ಅರಣ್ಯ ಇಲಾಖೆ ಬಿಗ್ ಶಾಕ್ ನೀಡಿದೆ (controversy). ಹೌದು, ಚಾಮರಾಜನಗರ (chamarajanagar) ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯ ರೈತರಿಗೆ (farmers) ಅರಣ್ಯ ಇಲಾಖೆಯೊಂದು (forest) ವಿಚಿತ್ರ ಫರ್ಮಾನು ಹೊರಡಿಸಿದೆ. ಅದೇನಪ್ಪಾ ಅಂದ್ರೆ ಸಾಗುವಳಿಗೆ ಬೇಕಾದಷ್ಟು ಜಾನುವಾರುಗಳನ್ನು ಮಾತ್ರ ಇಟ್ಟುಕೊಂಡು ಹೆಚ್ಚುವರಿ ರಾಸುಗಳನ್ನ (cattle) ಸ್ಥಳಾಂತರ ಮಾಡ್ಬೇಕಂತೆ.

ಚಾಮರಾಜನಗರ ಜಿಲ್ಲೆಯ ಹಿಂದುಳಿದ ಜಿಲ್ಲೆಯಾಗಿದ್ದು, ಇಲ್ಲಿ ಬಹುತೇಕ ರೈತರು ವ್ಯವಸಾಯದ ಜೊತೆಗೆ ಹೈನುಗಾರಿಕೆಯನ್ನೇ ನಂಬಿಕೊಂಡಿದ್ದಾರೆ. ಆದ್ರೆ ಮಲೈಮಹದೇಶ್ವರ ವನ್ಯಜೀವಿಧಾಮದ ಗೋಪಿನಾಥಂ ವಲಯದ ಅರಣ್ಯ ಅಧಿಕಾರಿಗಳು ಹೊರಡಿಸಿರುವ ಈ ಆದೇಶ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದ ಟಿಆರ್ (ಕೇಂದ್ರ ಹುಲಿ ಯೋಜನೆ ಅಧಿಕಾರಿಗಳು) ತಂಡದವರು ಈ ಭಾಗದಲ್ಲಿ ಹೆಚ್ಚು ಜಾನುವಾರು ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಇಲ್ಲಿ ಹೆಚ್ಚು ಹಸು ಸಾಕಬಾರದು. ತಪ್ಪಿದರೆ, ಕಾನೂನು ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಸಹ ಅರಣ್ಯ ಇಲಾಖೆ ನೀಡಿದೆ. ಇದು ಯಾವ ರೀತಿಯ ಕಾನೂನು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿರುವುದಾಗಿ ಹೊನ್ನೂರು ಪ್ರಕಾಶ್, ರೈತ ಸಂಘದ ಜಿಲ್ಲಾಧ್ಯಕ್ಷ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ರುದ್ರಭೂಮಿ ಜಾಗ ವ್ಯಕ್ತಿಯೊಬ್ಬರ ಹೆಸರಿಗೆ ಖಾತೆಯಾಯ್ತು, ಶವಸಂಸ್ಕಾರಕ್ಕೆ ಗ್ರಾಮಸ್ಥರು ಪರದಾಡುವಂತಾಯ್ತು!

ಅರಣ್ಯ ಇಲಾಖೆಯ ವಿಚಿತ್ರ ಆದೇಶ ವಾಪಸ್ ಪಡೆಯಬೇಕೆಂದು ರೈತ ಸಂಘದ ಪದಾಧಿಕಾರಿಗಳು ಚಾಮರಾಜನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಅರಣ್ಯದಲ್ಲಿನ ದನಕರುಗಳಿಂದ ಕಾಡು ಪ್ರಾಣಿಗಳಿಗೆ ಯಾವ ಕಾರಣಕ್ಕೂ ತೊಂದರೆ ಆಗುವುದಿಲ್ಲ. ದನಕರುಗಳು ಇರುವುದರಿಂದ ವನ್ಯಜೀವಿಗೆ ಏನೂ ಸಮಸ್ಯೆ ಇಲ್ಲ. ಕಾಡಿನ ಸಮತೋಲನಕ್ಕೆ ಪ್ರಾಣಿಗಳು ಅವಶ್ಯವಾಗಿ ಬೇಕು. ಆದ್ರೆ ಇಷ್ಟು ದಿವಸ ಇಲ್ಲದ ಸಮಸ್ಯೆ ಅರಣ್ಯ ಇಲಾಖೆಗೆ ಈಗ ಬಂದಿರುವುದಾದರೂ ಯಾಕೆ? ಈ ರೀತಿಯ ಮೂರ್ಖತನದ ನಿರ್ಧಾರ ಕೈಗೊಳ್ಳಬಾರದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ ಎನ್ನುತ್ತಾರೆ ಕೆ.‌ವಿ. ಮಾದೇಶ್, ಗೋಪಿನಾಥಂ ನಿವಾಸಿ.

ಈ ಬಗ್ಗೆ ರೈತರು ಇಲಾಖೆಯವರನ್ನ ಪ್ರಶ್ನೆ ಮಾಡಿದ್ರೆ ತಮಿಳುನಾಡಿನ ಜನರು ಅತಿಕ್ರಮವಾಗಿ ಪ್ರವೇಶ ಪಡೆಯುತ್ತಿದ್ದು ಅವರ ಓಡಾಟ ನಿಯಂತ್ರಣಕ್ಕೆ ಈ ನಿಯಮ ಜಾರಿಗೊಳಿಸಲಾಗಿದೆ ಎಂದು ಅರಣ್ಯ ಇಲಾಖೆ ಸಮಜಾಯಿಶಿ ನೀಡ್ತಿದೆ. ನಮ್ಮ ರೈತರು ದನಕರುಗಳ ಸಾಕುವುದಕ್ಕೂ ತಮಿಳುನಾಡಿನವರ ಅತಿಕ್ರಮಣ ಪ್ರವೇಶ ತಡೆಗೂ ಏನು ಸಂಬಂಧ ಎಂಬುದೇ ಪ್ರಶ್ನೆಯಾಗಿದೆ. ಅರಣ್ಯ ಇಲಾಖೆ ಕೂಡಲೇ ಈ ಮೂರ್ಖತನದ ಆದೇಶ ವಾಪಸ್ ಪಡೆಯಬೇಕಿದೆ.

ವರದಿ: ದಿಲೀಪ್ ಚೌಡಹಳ್ಳಿ, ಟಿವಿ 9, ಚಾಮರಾಜನಗರ

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ