ಚಾಮರಾಜನಗರ, ಜೂನ್ 15: ಚಾಮರಾಜನಗರ (Chamarajanagar) ಜಿಲ್ಲೆ ಗುಂಡ್ಲುಪೇಟೆ (Gundlupete)ತಾಲೂಕಿನ ಬೇಗೂರು ರಾಷ್ಟ್ರೀಯ ಹೆದ್ದಾರಿ 766 (National Highway 766) ರಲ್ಲಿ ಕಳೆದ ಕೆಲವು ದಿನಗಳಿಂದ ಅಪಘಾತಗಳು (Accidents) ಹೆಚ್ಚಾಗಿವೆ. ದಿನ ನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುವ ಈ ಹೆದ್ದಾರಿಯಲ್ಲಿ ಕಳೆದ 15 ದಿನಗಳಲ್ಲಿ ಐದು ಪ್ರತ್ಯೇಕ ಅಪಘಾತ ಪ್ರಕರಣಗಳು ಸಂಭವಿಸಿದ್ದು, ಈಗ ಡೆಡ್ಲಿ ಹೈವೆ ಎಂಬ ಹಣೆ ಪಟ್ಟಿ ಪಡೆದಿದೆ. ಕೇರಳ ಹಾಗೂ ಕರ್ನಾಟಕ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಇದಾಗಿದೆ.
ಈ ಹೆದ್ದಾರಿಗೆ ಡೆಡ್ಲಿ ಹೈವೆ ಎಂಬ ಅಪಖ್ಯಾತಿ ಬರಲು ಒಂದು ಕಾರಣವಿದೆ. ಈ ರಸ್ತೆ ಗುಂಡ್ಲುಪೇಟೆ, ಬಂಡೀಪುರ, ಕೇರಳದ ಮೂಲೆಹೊಳೆ, ಮುಥಾಂಗ ಹಾಗೂ ತಮಿಳುನಾಡಿನ ಊಟಿಗೆ ಸಂಪರ್ಕ ಕಲ್ಪಿಸುವ ಸಂಪರ್ಕ ಕೇಂದ್ರವಾಗಿದೆ. ರಾತ್ರಿ 9 ಗಂಟೆಗೆ ಚೆಕ್ ಪೋಸ್ಟ್ ಬಂದ್ ಆದರೆ ಬೆಳೆಗ್ಗೆ 5 ಗಂಟೆಗೆ ಚೆಕ್ ಪೋಸ್ಟ್ ತೆರೆಯುತ್ತದೆ. ಹಾಗಾಗಿ ಚೆಕ್ ಪೋಸ್ಟ್ ದಾಟುವ ದಾವಂತದಲ್ಲಿ ವಾಹನ ಚಾಲಕರು ಅತಿ ವೇಗವಾಗಿ ವಾಹನ ಚಾಲನೆ ಮಾಡುತ್ತಾರೆ. ಇದರ ಜತೆಗೆ ಕೇರಳದಿಂದ ಆಗಮಿಸುವ ಯುವಕರ ತಂಡ ಕಂಠಪೂರ್ತಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಅಪಘಾತಕ್ಕೆ ಮುಖ್ಯ ಕಾರಣವಾಗಿದೆ. ರಾತ್ರಿ ವೇಳೆ ಅತಿ ಹೆಚ್ಚು ಅವಘಾತವಾಗುವುದಕ್ಕೆ ಇದೇ ಮುಖ್ಯ ಕಾರಣವಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ; ಮಾರಾಟ ತೆರಿಗೆ ಹೆಚ್ಚಿಸಿದ ಸರ್ಕಾರ
ಬೇಗೂರು ನಗರದಲ್ಲಿ ಸೂಕ್ತ ಸ್ಕೈವಾಕ್ ಹಾಗೂ ರಸ್ತೆ ಅಗಲೀಕರಣ ಮಾಡುವುದರ ಜೊತೆಗೆ ಡ್ರಿಂಕ್ ಎಂಡ್ ಡ್ರೈವ್ ತಪಾಸಣೆ ನಡೆಸಿದರೆ ಅಪಘಾತ ತಡೆಯುವುದರ ಜೊತೆ ಅಮಾಯಕ ಪಾದಚಾರಿಗಳ ಪ್ರಾಣ ಉಳಿಸಬಹುದಾಗಿದೆ ಎಂಬುದು ಸ್ಥಳೀಯರ ವಾದವಾಗಿದೆ. ಆದಷ್ಟು ಬೇಗ ಆಡಳಿತ ರಸ್ತೆ ಅಗಲೀಕರಣ ಮಾಡಿಸಿ ಹಾಗೂ ಸ್ಕೈವಾಕ್ ಸೇರಿದಂತೆ ಇತರ ಕ್ರಮಗಳನ್ನು ಕೈಗೊಂಡು ಅಮಾಯಕ ಜೀವ ಬಲಿಯಾಗುವುದನ್ನ ತಡೆಯ ಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:20 pm, Sat, 15 June 24