‘ತುಂಡು ಬಟ್ಟೆ ಧರಿಸಿದರೆ ನರಕಕ್ಕೆ ಹೋಗುತ್ತಿ’: ಶಾಲಾ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿನಿಯ ಮಾತು ವೈರಲ್​

| Updated By: ವಿವೇಕ ಬಿರಾದಾರ

Updated on: Mar 24, 2025 | 12:58 PM

ಚಾಮರಾಜನಗರದ ಖಾಸಗಿ ಶಾಲೆಯ ವಿದ್ಯಾರ್ಥಿನಿಯ ವಿಜ್ಞಾನ ಪ್ರದರ್ಶನದ ಮಾದರಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲಿ ಬುರ್ಖಾ ಮತ್ತು ತುಂಡು ಬಟ್ಟೆಗಳನ್ನು ಧರಿಸಿದ ಎರಡು ಗೊಂಬೆಗಳನ್ನು ಬಳಸಿ, ಈ ರೀತಿಯಾದ ಉಡುಪುಗಳನ್ನು ಧರಿಸಿದರೇ ಸಾವಿನ ನಂತರ ಏನೆಲ್ಲ ಆಗುತ್ತದೆ ಎಂದು ವಿದ್ಯಾರ್ಥಿನಿ ವಿವರಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಆ ಶಾಲೆಯ ಶಿಕ್ಷಣ ಪದ್ಧತಿಯನ್ನು ಪ್ರಶ್ನಿಸಿದ್ದಾರೆ.

‘ತುಂಡು ಬಟ್ಟೆ ಧರಿಸಿದರೆ ನರಕಕ್ಕೆ ಹೋಗುತ್ತಿ’: ಶಾಲಾ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿನಿಯ ಮಾತು ವೈರಲ್​
ವಿದ್ಯಾರ್ಥಿನಿ
Follow us on

ಬೆಂಗಳೂರು, ಮಾರ್ಚ್​ 24: ಚಾಮರಾಜನಗರದ (Chamrajnagar) ಖಾಸಗಿ ಶಾಲೆಯಲ್ಲಿ (School) ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿರುವ ಓರ್ವ ವಿದ್ಯಾರ್ಥಿನಿ (Student) ತಯಾರಿಸಿರುವ ವಿಷಯ ಮಾದರಿ ಮತ್ತು ಅದಕ್ಕೆ ಆಕೆ ನೀಡುವ ವಿವರಣೆಯ ವಿಡಿಯೋ ವೈರಲ್​ ಆಗಿದೆ. ವಿದ್ಯಾರ್ಥಿನಿ ಎರಡು ಗೊಂಬೆಗಳನ್ನು ಶವದ ರೀತಿ ಮಲಗಿಸಿದ್ದು, ಒಂದು ಗೊಂಬೆಯನ್ನು ಕಪ್ಪು ಬಟ್ಟೆಯಿಂದ ಮುಚ್ಚಿದ್ದು, ಮತ್ತೊದ್ದು ಗೊಂಬೆಯನ್ನು ಚೇಳಿನ ಚಿತ್ರವಿರುವ ಬಟ್ಟೆಯಿಂದ ಮುಚ್ಚಿದ್ದಾಳೆ. ಇದಕ್ಕೆ ವಿದ್ಯಾರ್ಥಿನಿ ವಿವರಣೆಯನ್ನೂ ಸಹ ನೀಡಿದ್ದಾಳೆ.

“ಬುರ್ಖಾ ಧರಿಸಿದ್ರೆ ಸತ್ತ ಮೇಲೆ ಶವಕ್ಕೆ ಏನು ಆಗಲ್ಲ. ತುಂಡು ಉಡುಗೆ ತೊಟ್ಟರೆ ನರಕಕ್ಕೆ ಹೋಗುವುದರ ಜೊತೆಗೆ ನಿಮ್ಮ ದೇಹವನ್ನ ಹಾವು, ಚೇಳು ತಿನ್ನುತ್ತವೆ” ಎಂದು ವಿದ್ಯಾರ್ಥಿನಿ ವಿವರಣೆ ನೀಡಿದ್ದಾಳೆ. ಈ ದೃಶ್ಯಗಳನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಣಾದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ
ಕುಡಿದ ಮತ್ತಿನಲ್ಲಿ ಹೈಟೆನ್ಷನ್ ವಿದ್ಯುತ್​ ಕಂಬ ಏರಿದ ಯುವಕ!
ತಲೆಯಲ್ಲಿ ಕೂದಲಿಲ್ಲವೆಂದು ಪತ್ನಿ ಅಪಹಾಸ್ಯ: ಪತಿ ಪರಶಿವಮೂರ್ತಿ ಆತ್ಮಹತ್ಯೆ
64 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನ
ಬಂಡೀಪುರ ಸಫಾರಿ: ಪ್ರವಾಸಿಗರ ಕಣ್ಣಿಗೆ ಬಿತ್ತು ಹುಲಿ ಮರಿ ತುಂಟಾಟದ ದೃಶ್ಯ

ಈ ವಿಡಿಯೋವನ್ನು ಸರವಣಪ್ರಸಾದ್ ಬಾಲಸುಬ್ರಮಣಿಯನ್ ಎಂಬುವರು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿ, “ಕರ್ನಾಟಕದ ಚಾಮರಾಜನಗರದಲ್ಲಿನ ಶಾಲೆಗಳಲ್ಲಿ ವಿಜ್ಞಾನ ಪ್ರದರ್ಶನವನ್ನು ನಡೆಸಲಾಯಿತು. ಇದರಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯೊಬ್ಬಳ ವಿಜ್ಞಾನ ಸೃಷ್ಟಿ ಈ ರೀತಿಯಾಗಿದೆ. ಬುರ್ಖಾ ಧರಿಸಿದರೆ ಸಮಾಧಿ ಹೂವುಗಳಿಂದ ತುಂಬಿರುತ್ತದೆ. ನೀವು ತುಂಡು ಉಡುಗೆ ತೊಟ್ಟರೆ, ಸಾವಿನ ನಂತರ ಸಮಾಧಿಯಲ್ಲಿ ಚೇಳುಗಳು ಮತ್ತು ಹಾವುಗಳು ಇರುತ್ತವೆ ಮತ್ತು ನರಕ್ಕೆ ಹೋಗುತ್ತೀರಿ ಎಂದು ವಿದ್ಯಾರ್ಥಿನಿ ಹೇಳುತ್ತಿದ್ದಾಳೆ.” ಎಂದು ಅವರು ಬರೆದಿದ್ದಾರೆ.

ಟ್ವಿಟರ್​  ಪೋಸ್ಟ್​

” ಇದು ಕರ್ನಾಟಕದಲ್ಲಿನ ಅದ್ಭುತ ಶಾಲಾ ಶಿಕ್ಷಣ. ನೀವು ಆ ಶಾಲೆಯ ಯೂಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿದರೆ ಇದೇ ರೀತಿಯ ಬಹಳಷ್ಟು ವೀಡಿಯೊಗಳನ್ನು ನೋಡಬಹುದು” ಎಂದೂ ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.
ಈ ಪೋಸ್ಟ್​ಗೆ ಹಲವರು ಕಾಮೆಂಟ್​ ಮಾಡಿದ್ದು, “ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಇದೆಂತಾ ಅಜ್ಞಾನ ನಡೆ. ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಶಾಲೆಗಳು ಇತರ ಸಮುದಾಯದ ಮಹಿಳೆಯರ ಬಗ್ಗೆ ದ್ವೇಷ ಭಾವನೆ ಹುಟ್ಟು ಹಾಕುತ್ತಿವಿಯೇ?” ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತಲೆಗೆ ತೆಂಗಿನಕಾಯಿ ಒಡೆಸಿಕೊಳ್ಳುವ ವಿಶಿಷ್ಟ ರೀತಿ ಹಬ್ಬ ನೋಡಿದ್ದೀರಾ?

ಸರವಣಪ್ರಸಾದ್ ಬಾಲಸುಬ್ರಮಣಿಯನ್ ಅವರು ತಮ್ಮ ವಿಡಿಯೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ , ಡಿಕೆ ಶಿವಕುಮಾರ್ ಹಾಗೂ ಡಿಜಿಪಿಗೆ ಸರವಣಪ್ರಸಾದ್ ಬಾಲಸುಬ್ರಮಣಿಯನ್ ಟ್ಯಾಗ್​ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:58 pm, Mon, 24 March 25