ಬಂಡೀಪುರ ಸಫಾರಿ: ಪ್ರವಾಸಿಗರ ಕಣ್ಣಿಗೆ ಬಿತ್ತು ಹುಲಿ ಮರಿ ತುಂಟಾಟದ ದೃಶ್ಯ
ಚಾಮರಾಜನಗರ ಜಿಲ್ಲೆಯ ಬಂಡೀಪುರ ಸಫಾರಿಯಲ್ಲಿ ಪ್ರವಾಸಿಗರಿಗೆ ಹುಲಿ ಹಾಗೂ ಹುಲಿ ಮರಿಯ ದರ್ಶನವಾಗಿದೆ. ಹುಲಿ ಹಾಗೂ ಮರಿಯ ತುಂಟಾಟವನ್ನು ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ನಲ್ಲಿ ಕಂಡುಬಂದ ಈ ದೃಶ್ಯವನ್ನು ವನ್ಯಜೀವಿ ಛಯಾಗ್ರಹಾಕ ಕಿರಣ್ ಕೊಳ್ಳೇಗಾಲ ಸೆರೆಹಿಡಿದಿದ್ದಾರೆ.
ಚಾಮರಾಜನಗರ, ಮಾರ್ಚ್ 12: ಬಂಡೀಪುರ ಸಫಾರಿ ವೇಳೆ ಹುಲಿ ಮರಿಯೊಂದು ತಾಯಿಯ ಜತೆ ಆಟವಾಡುಗತ್ತಿರುವ ದೃಶ್ಯ ಪ್ರವಾಸಿಗರಿಗೆ ಕಾಣಿಸಿದೆ. ಮಂಗಳವಾರ ಸಂಜೆ ಈ ದೃಶ್ಯ ಕಾಣಿಸಿದ್ದು, ವನ್ಯಜೀವಿ ಛಯಾಗ್ರಹಾಕ ಕಿರಣ್ ಕೊಳ್ಳೇಗಾಲ ಕ್ಯಾಮರಾದಲ್ಲಿ ಸೆರೆಯಾಗಿದೆ. ಮರಿ ಹುಲಿ ತುಂಟಾಟವಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Latest Videos