ಚಾಮರಾಜನಗರ: ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಭ್ರಷ್ಟಾಚಾರ ; ತನಿಖೆ ವರದಿ ಸಲ್ಲಿಸಿ ಐದು ತಿಂಗಳಾದರೂ ಕ್ರಮಕೈಗೊಳ್ಳದ ಜಿಲ್ಲಾಡಳಿತ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಕೋವಿಡ್ ಕೇರ್ ಸೆಂಟರ್‌‌ಗಳಲ್ಲಿ ನಕಲಿ ಬಿಲ್‌ ಸೃಷ್ಟಿಸಿ ಲಕ್ಷಾಂತರ ಹಣ ದುರುಪಯೋಗ ಪಡೆಸಿಕೊಂಡಿರುವ ಆರೋಪ ಕೇಳಿ ಬಂದಿದೆ.

ಚಾಮರಾಜನಗರ: ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಭ್ರಷ್ಟಾಚಾರ ; ತನಿಖೆ ವರದಿ ಸಲ್ಲಿಸಿ ಐದು ತಿಂಗಳಾದರೂ ಕ್ರಮಕೈಗೊಳ್ಳದ ಜಿಲ್ಲಾಡಳಿತ
ಸಾಂರ್ಭಿಕ ಚಿತ್ರ
Edited By:

Updated on: Sep 21, 2022 | 8:44 AM

ಚಾಮರಾಜನಗರ: ಹನೂರು ತಾಲೂಕು ಕೋವಿಡ್ ಕೇರ್ ಸೆಂಟರ್‌‌ಗಳಲ್ಲಿ (Covid Care Centre) ನಕಲಿ ಬಿಲ್‌ ಸೃಷ್ಟಿಸಿ ಲಕ್ಷಾಂತರ ಹಣ ದುರುಪಯೋಗ ಪಡೆಸಿಕೊಂಡಿರುವ ಆರೋಪ ಕೇಳಿ ಬಂದಿದೆ. ಜಾರಿಗೆಯಾದ 2.35 ಕೋಟಿ ಅನುದಾನದಲ್ಲಿ 33.67 ಲಕ್ಷ ದುರುಪಯೋಗ ಮಾಡಿಕೊಳ್ಳಲಾಗಿದೆ. ಎಸಿ ನೇತೃತ್ವದ ತಂಡ ಸಲ್ಲಿಸಿದ್ದ ವರದಿಯಲ್ಲಿ ಅಕ್ರಮ ಬಯಲಾಗಿದೆ. ವರದಿ ಸಲ್ಲಿಸಿ ಐದು ತಿಂಗಳಾದರೂ ಜಿಲ್ಲಾಡಳಿತ ಕ್ರಮಕೈಗೊಂಡಿಲ್ಲ.

ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿ ಕೋವಿಡ್​ ಕೇರ್​ ಸೆಂಟರ್​ಗಳನ್ನು ತೆರೆಯಲಾಗಿತ್ತು. ಕೇರ್​ ಸೆಂಟರ್​​ನಲ್ಲಿನ ವಸ್ತುಗಳನ್ನು ಖರೀದಿಸಲು ಮತ್ತು ಆಹಾರ ಸರಬರಾಜಿಗೆ ಜಿಲ್ಲಾಧಿಕಾರಿ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿ ನಕಲಿ ಬಿಲ್‌ಗಳನ್ನ ಸೃಷ್ಟಿಸಿ ಭ್ರಷ್ಟಾಚಾರ ಮಾಡಲಾಗಿದೆ. ದಿನಸಿ, ಸ್ಯಾನಿಟೈಸರ್, ಸೋಪ್, ಟೂತ್ ಪೇಸ್ಟ್, ಟೂತ್ ಬ್ರಶ್, ಕಸದ ಪೊರಕೆ, ಬಕೆಟ್, ಜಗ್ಗು, ಡಸ್ಟ್‌ಬಿನ್, ಟಿವಿ, ವಾಟರ್ ಹೀಟರ್, ವಾಟರ್ ಡಿಸ್ಪೆನ್ಸರ್, ಡಿಶ್​ಗಳ ಖರೀದಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಅಕ್ರಮ ಎಸಗಲಾಗಿದೆ.

ಕೇರ್ ಸೆಂಟರ್​‌ಗಳಲ್ಲಿದ್ದ ರೋಗಿಗಳ ಹಾಜರಾತಿ ಸಂಖ್ಯೆಗು, ಆಹಾರ ಸರಬರಾಜು ಮಾಡಿರುವ ಸಂಖ್ಯೆ‌ ನಡುವೆ ವ್ಯತ್ಯಾಸ ಕಂಡುಬಂದಿದೆ. ಅಲ್ಲದೇ ಹೊಟೇಲ್ ಮಾಲೀಕರಲ್ಲದೆ ಬೇರೆ ಹೆಸರಿನಲ್ಲಿ ಚೆಕ್ ಮೂಲಕ ಹಣ ಪಾವತಿ ಮಾಡಲಾಗಿದೆ. ಕಾಟನ್ ಬೆಡ್‌ಶೀಟ್, ಉಲ್ಲನ್ ಬೆಡ್‌ಶೀಟ್, ಟವೆಲ್​ಗಳ ಖರೀದಿಯಲ್ಲಿ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರ ಪಾವತಿ ಮಾಡಲಾಗಿದೆ ಎಂದು ಆರೋಪ ಕೇಳಿ ಬಂದಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ