ಚಾಮರಾಜನಗರ ಮೆಡಿಕಲ್ ಕಾಲೇಜಿನ ಡೀನ್, ನೇತ್ರ ವೈದ್ಯನ ನಡುವೆ ಗಲಾಟೆ; ವಿಡಿಯೋ ವೈರಲ್
ಚಾಮರಾಜನಗರ ಯಡಪುರ ಬಳಿಯ ಮೆಡಿಕಲ್ ಕಾಲೇಜಿನ ಡೀನ್ ಮತ್ತು ನೇತ್ರ ವೈದ್ಯನ ನಡುವೆ ಗಲಾಟೆ ನಡೆದಿದೆ.
ಚಾಮರಾಜನಗರ: ಚಾಮರಾಜನಗರ ಯಡಪುರ ಬಳಿಯ ಮೆಡಿಕಲ್ ಕಾಲೇಜಿನ ಡೀನ್ ಮತ್ತು ನೇತ್ರ ವೈದ್ಯನ ನಡುವೆ ಗಲಾಟೆ ನಡೆದಿದೆ. ಇಬ್ಬರ ನಡುವಿನ ಗಲಾಟೆ ವಿಡಿಯೋ ವೈರಲ್ ಆಗಿದ್ದು, ನೇತ್ರ ತಜ್ಞ ಡಾ. ಮಹೇಶ್ವರ್ ಅವಾಚ್ಯ ಶಬ್ದದಿಂದ ಡೀನ್ ಸಂಜೀವ್ ಅವರಿಗೆ ನಿಂದಿಸಿದ್ದಾರೆ. ಡಾ. ಮಹೇಶ್ವರ್ ವಿರುದ್ಧ ತಮ್ಮ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಡೀನ್ ಸಂಜೀವ್ ದೂರು ದಾಖಲಿಸಿದ್ದಾರೆ. ನೇತ್ರ ತಜ್ಞ ಮಹೇಶ್ವರ್ ಪಾನಮತ್ತರಾಗಿ ಬಂದು ಗಲಾಟೆ ಮಾಡಿದ್ದಾರೆ.
ಡಾ. ಮಹೇಶ್ವರ್ ವಿಧ್ಯಾರ್ಥಿ ಜೊತೆಗೆ ಅನುಚಿತವಾಗಿ ವರ್ತಸಿದ ಸಂಬಂಧ ಸಸ್ಪೆಂಡ್ ಆಗಿದ್ದರು. ನಂತರ ಸಸ್ಪೆಂಡ್ ರಿವೋಕ್ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇದೀಗ ಕುಡಿದು ಬಂದು ಅವಾಚ್ಯ ಶಬ್ದದಿಂದ ನಿಂದಿಸುವ ವಿಡಿಯೋ ವೈರಲ್ ಆಗಿದೆ. ಡಾ. ಮಹೇಶ್ವರ್ ಮದ್ಯದ ಬಾಟಲಿ, ಡಬ್ಬಿ ಎಸೆದು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆಂದು ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ