ಮಲೆ ಮಹದೇಶ್ವರ ಸ್ವಾಮಿ ಫೇಸ್ ಬುಕ್ ಹ್ಯಾಕ್ ಮಾಡಿ ಅಶ್ಲೀಲ ವಿಡಿಯೋಗಳನ್ನು ಫೋಸ್ಟ್ ಮಾಡಿದ ಕಿಡಿಗೇಡಿಗಳು
ಮಲೆ ಮಹದೇಶ್ವರ ಸ್ವಾಮಿ ಹೆಸರಿನ ಫೇಸ್ ಬುಕ್ ಪೇಜ್ಅನ್ನು ಹ್ಯಾಕ್ ಮಾಡಿ ಪೋರ್ನ್ ವಿಡಿಯೋಗನ್ನು ಅಪ್ಲೋಡ್ ಮಾಡಿ ವಿಕೃತಿ ಮೆರೆಯಲಾಗಿದೆ.
ಚಾಮರಾಜನಗರ: ಪ್ರಸಿದ್ಧ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ(Male Mahadeshwara Swamy Temple) ಹೆಸರಿನ ಫೇಸ್ ಬುಕ್ ಪೇಜ್ ಹ್ಯಾಕ್ ಮಾಡಿ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಫೇಸ್ ಬುಕ್ ಖಾತೆಗೆ 17 ಸಾವಿರ ಫಾಲೋವರ್ಸ್ ಇದ್ದು ಭಕ್ತರ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ದೂರು ನೀಡಿದ್ದಾರೆ.
2013ರಲ್ಲಿ ಕೊಳ್ಳೆಗಾಲ ಮೂಲದ ಸಂಜಯ್ ಕುಮಾರ್ ಎಂಬುವವರು ಈ ಶ್ರೀ ಮಲೆ ಮಹದೇಶ್ವರ ಸ್ವಾಮಿ ಫೇಸ್ಬುಕ್ ಖಾತೆಯನ್ನು ಕ್ರಿಯೇಟ್ ಮಾಡಿದ್ದರು. ಇದರಲ್ಲಿ ಮಹದೇಶ್ವರ ಸ್ವಾಮಿ ಮಹಿಮೆ, ಪೂಜೆ ಪುನಸ್ಕಾರಗಳ ಮಾಹಿತಿಯನ್ನ ಅಪ್ಲೋಡ್ ಮಾಡಿ ಭಕ್ತರಿಗೆ ಮಾಹಿತಿ ನೀಡಲಾಗುತ್ತಿತ್ತು. ಈ ಪೇಜ್ಗೆ ಸುಮಾರು 17 ಸಾವಿರ ಫಾಲೋವರ್ಸ್ ಇದ್ದಾರೆ. ಆದ್ರೆ ಈಗ ಫೇಸ್ಬುಕ್ ಪೇಜ್ಅನ್ನು ಹ್ಯಾಕ್ ಮಾಡಿ ಪೋರ್ನ್ ವಿಡಿಯೋಗನ್ನು ಅಪ್ಲೋಡ್ ಮಾಡಿ ವಿಕೃತಿ ಮೆರೆಯಲಾಗಿದೆ. ಆ ಮೂಲಕ ಮಹದೇಶ್ವರನ ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ಮಾಡಿದ್ದಾರೆ. ಇದನ್ನೂ ಓದಿ: ಬೀದರ್ನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಅವಳಿ ಸಹೋದರರ ಸೈಕಲ್ ಸವಾರಿ ಅಂತ್ಯ; ಮಹದೇಶ್ವರನ ದರ್ಶನ ಮಾಡಿ ವಿಶೇಷ ಪೂಜೆ
ಮಾಹಿತಿ ಗೊತ್ತಾಗುತ್ತಿದ್ದಂತೆ ಚಾಮರಾಜನಗರ ಸೆನ್ ಠಾಣೆಯಲ್ಲಿ ಸಂಜಯ್ ದೂರು ದಾಖಲಿಸಿದ್ದಾರೆ. ಆದ್ರೆ 30 ಜನರಿಂದ ರಿಪೋರ್ಟ್ ಮಾಡಿಸಲು ಹೇಳಿ ಪೊಲೀಸರು ಸುಮ್ಮನಾಗಿದ್ದಾರೆ. ಈವರೆಗೆ 5 ಜನರಿಂದ ಸಂಜಯ್ ರಿಪೋರ್ಟ್ ಮಾಡಿಸಿದ್ದಾರೆ. ಹಾಗಾಗಿ ಹ್ಯಾಕ್ ಆಗಿರುವ ಪೇಜ್ ಅನ್ನು ಡೀ ಆ್ಯಕ್ಟಿವ್ ಮಾಡಲು ಸಾಧ್ಯವಾಗುತ್ತಿಲ್ಲ. ಪೊಲೀಸರು ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ