ಚಾಮರಾಜನಗರ: ಏನಾದರೂ ಮಾಡಬೇಕು ಎಂಬ ಹಂಬಲ, ಸಾಧಿಸುವ ಛಲ ಇದ್ರೆ ವಯಸ್ಸು, ಹಣ ಯಾವುದೂ ಸಮಸ್ಯೆಯಾಗಲ್ಲ. ಅದರಂತೆಯೇ ಬೀದರ್ನ 16 ವರ್ಷದ ಅವಳಿ ಸಹೋದರರು ಭಾರತ ಸ್ವಾತಂತ್ರ್ಯದ 75 ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ನೆನಪಿಗಾಗಿ ಬೀದರ್‌ನಿಂದ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟಕ್ಕೆ ಸೈಕಲ್ ಸವಾರಿ ಮಾಡಿದ್ದಾರೆ.
ಸುಮಾರು 900 ಕಿಲೋಮೀಟರ್ ಸೈಕಲ್ ತುಳಿದು 16 ವರ್ಷದ ಅವಳಿ ಪೋರರು ವಿಭಿನ್ನ ಸಾಹಸ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬೀದರ್ ಜಿಲ್ಲೆ ಔರಾದ್‌ನ ಅರುಣ್, ಕರುಣ್ ಎಂಬ 16 ವರ್ಷದ ಅವಳಿ ಬಾಲಕರು ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ತುಮಕೂರು, ಬೆಂಗಳೂರು, ಮಂಡ್ಯ ಮೂಲಕ ಮಹದೇಶ್ವರ ಬೆಟ್ಟಕ್ಕೆ ಸೈಕಲ್ನಲ್ಲಿ ಬಂದಿದ್ದಾರೆ. 25 ದಿನಗಳ ಕಾಲ ಬರೋಬ್ಬರಿ 900 ಕಿಲೋಮೀಟರ್ ಸೈಕಲ್ ಯಾತ್ರೆ ಮಾಡಿದ್ದಾರೆ. ಇಂದು ಮಹದೇಶ್ವರ ಬೆಟ್ಟಕ್ಕೆ ತಲುಪಿದ್ದು ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಸೈಕಲ್ ಯಾತ್ರೆ ಮುಕ್ತಾಯಗೊಳಿಸಿದ್ದಾರೆ.
ಏಪ್ರಿಲ್ 5ರಂದು ಆರಂಭವಾಗಿದ್ದ ಸೈಕಲ್ ಯಾತ್ರೆ ಇಂದು ಅಂತ್ಯವಾಗಿದೆ. ಪುಟ್ಟ ಪೋರರ ಸಾಹಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಬಾಲಕರು ಸೈಕಲ್ ಯಾತ್ರೆ ಆರಂಭಿಸಿದಾಗ ಗ್ರಾಮಸ್ಥರು, ಹಿರಿಯರು, ಮಕ್ಕಳು ಎಲ್ಲರೂ ಸಂಭ್ರಮದಿಂದ ಮಾಲಾರ್ಪಣೆ ಮಾಡಿ ಕಳಿಸಿಕೊಟ್ಟಿದ್ದರು. ಈಗ ಯಾತ್ರೆ ಅಂತ್ಯವಾಗಿದ್ದು ಅದ್ಧೂರಿಯಾಗಿ ಬಾಲಕರನ್ನು ಬರ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಬೀದರ್ ಜಿಲ್ಲೆ ಔರಾದ್‌ನ ಅರುಣ್, ಕರುಣ್
ಇದನ್ನೂ ಓದಿ: ನಾವು ಸಾಕುಪ್ರಾಣಿಗಳಂತಾಗಿದ್ದೇವೆ, ಮನೆ ಸುತ್ತ ಬೇಲಿ ಕಟ್ಟುತ್ತಿದ್ದಾರೆ-ಶಾಂಘೈ ಆಡಳಿತದ ವಿರುದ್ಧ ತಿರುಗಿಬಿದ್ದ ಜನರು
ನರಗುಂದ: ಸಚಿವ ಸಿಸಿ ಪಾಟೀಲ ಮನೆ ಎದುರು ಬಿಗಿ ಪೊಲೀಸ್ ಬಂದೋಬಸ್ತ್; ದಿಂಗಾಲೇಶ್ವಶ್ರೀ ಭಕ್ತರ ಆಕ್ರೋಶ