ನಾವು ಸಾಕುಪ್ರಾಣಿಗಳಂತಾಗಿದ್ದೇವೆ, ಮನೆ ಸುತ್ತ ಬೇಲಿ ಕಟ್ಟುತ್ತಿದ್ದಾರೆ-ಶಾಂಘೈ ಆಡಳಿತದ ವಿರುದ್ಧ ತಿರುಗಿಬಿದ್ದ ಜನರು

ಮನೆಯ ಎದುರು ಹಸಿರು ಬಣ್ಣದ ಸರಳುಗಳನ್ನು ಅಳವಡಿಸಲಾಗುತ್ತಿದೆ. ಆದರೆ ಹೀಗೆ ಮಾಡುವ ಮುನ್ನ ಒಂದು ಎಚ್ಚರಿಕೆಯನ್ನೂ ನೀಡುತ್ತಿಲ್ಲ.  ಒಂದು ಏರಿಯಾದಲ್ಲಿ ಒಬ್ಬ ವ್ಯಕ್ತಿಯಲ್ಲಿ ಕೊರೊನಾ ಕಾಣಿಸಿಕೊಂಡರೂ ಇಡೀ ಏರಿಯಾವನ್ನೇ ಸೀಲ್​ಡೌನ್ ಮಾಡುತ್ತಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ.

ನಾವು ಸಾಕುಪ್ರಾಣಿಗಳಂತಾಗಿದ್ದೇವೆ, ಮನೆ ಸುತ್ತ ಬೇಲಿ ಕಟ್ಟುತ್ತಿದ್ದಾರೆ-ಶಾಂಘೈ ಆಡಳಿತದ ವಿರುದ್ಧ ತಿರುಗಿಬಿದ್ದ ಜನರು
ಶಾಂಘೈನಲ್ಲಿ ಮನೆಗಳ ಎದುರು ಹಸಿರು ಗೇಟ್​
Follow us
TV9 Web
| Updated By: Lakshmi Hegde

Updated on: Apr 27, 2022 | 12:43 PM

ಶಾಂಘೈನಲ್ಲಿ ಕೊವಿಡ್​ 19 ಮಿತಿಮೀರುತ್ತಿದೆ. ಅಲ್ಲಿ ಕೊರೊನಾ ಕಷ್ಟಕ್ಕಿಂತ ಅದರ ನಿಯಂತ್ರಣಕ್ಕಾಗಿ ಹೇರಲಾದ ನಿರ್ಬಂಧವೇ ಕ್ರೂರವಾಗಿದೆ. ಜನರು ಮನೆಯಿಂದ ಹೊರಗೆ ಬೀಳುವಂತಿಲ್ಲ. ಮನೆಯೊಳಗೆ ಬಂಧಿಯಾಗಿರುವ ಜನರಿಗೆ ಅಗತ್ಯ ವಸ್ತುಗಳ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಅಷ್ಟೇ ಅಲ್ಲ, ಯಾರಲ್ಲಾದರೂ ಕೊವಿಡ್​ 19 ಸೋಂಕು ಕಂಡುಬಂದರೆ ಅವರ ಮನೆಯ ಎದುರು ಸ್ಥಳೀಯ ಆಡಳಿತ ಬೇಲಿಯನ್ನೂ ನಿರ್ಮಾಣ ಮಾಡುತ್ತಿದೆ ಎಂದು ನ್ಯೂಯಾರ್ಕ್ ಪೋಸ್ಟ್​ ವರದಿ ಮಾಡಿದೆ. ಆದರೆ ಚೀನಾ ಜನರು ಇದನ್ನು ಸಿಕ್ಕಾಪಟೆ ವಿರೋಧ ಮಾಡುತ್ತಿದ್ದಾರೆ. ಕೊರೊನಾ, ಲಾಕ್​ಡೌನ್​ ಹೆಸರಲ್ಲಿ ಇಲ್ಲಿನ ಆಡಳಿತ, ಅಧಿಕಾರಿಗಳು ತಮ್ಮನ್ನು ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಶಾಂಘೈ ನಿವಾಸಿಗಳು ಸೋಷಿಯಲ್​ ಮೀಡಿಯಾಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ ಎಂದೂ ವರದಿಯಲ್ಲಿ ಉಲ್ಲೇಖವಾಗಿದೆ.

ಕೊರೊನಾ ಹೆಚ್ಚಾಗುತ್ತಿದೆ. ಆದರೆ ಅದನ್ನು ತಡೆಯಲು ವಿಧಿಸಲಾಗಿರುವ ಕಠಿಣ ನಿಯಮಗಳನ್ನು ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ. ಸೋಂಕು ಕಂಡುಬಂದವರ ಮನೆಯ ಎದುರು ಲೋಹದ ಬೇಲಿಗಳನ್ನು ಹಾಕಲಾಗುತ್ತಿದೆ. ಈ ಮೂಲಕ ಮನುಷ್ಯರನ್ನೂ ಸಾಕುಪ್ರಾಣಿಗಳಂತೆ ನಡೆಸಿಕೊಳ್ಳಲಾಗುತ್ತಿದೆ. ನಮಗಿದು ಅಗೌರವ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.  ಚೀನಾದ ಸಾಮಾಜಿಕ ಜಾಲತಾಣಗಳಾದ ವೈಬೋ ಮತ್ತು ಇತರ ಆ್ಯಪ್​ಗಳಲ್ಲಿ ಜನರ ಆಕ್ರೋಶವೇ ತುಂಬಿ ಹೋಗಿದೆ.  ಅಲ್ಲದೆ, ಚೀನಾದ ಆರೋಗ್ಯ ಸಿಬ್ಬಂದಿ ವಸತಿ ಕಟ್ಟಡದ ಹೊರಭಾಗದಲ್ಲಿ ಹಸಿರು ಬಣ್ಣದ ಮೆಟಲ್​ ಗೇಟ್​ಗಳನ್ನು ಅಳವಡಿಸುತ್ತಿರುವ ಫೋಟೋ, ವಿಡಿಯೋಗಳನ್ನೂ ಜನ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಮನೆಯ ಎದುರು ಹಸಿರು ಬಣ್ಣದ ಸರಳುಗಳನ್ನು ಅಳವಡಿಸಲಾಗುತ್ತಿದೆ. ಆದರೆ ಹೀಗೆ ಮಾಡುವ ಮುನ್ನ ಒಂದು ಎಚ್ಚರಿಕೆಯನ್ನೂ ನೀಡುತ್ತಿಲ್ಲ.  ಒಂದು ಏರಿಯಾದಲ್ಲಿ ಒಬ್ಬ ವ್ಯಕ್ತಿಯಲ್ಲಿ ಕೊರೊನಾ ಕಾಣಿಸಿಕೊಂಡರೂ ಇಡೀ ಏರಿಯಾವನ್ನೇ ಸೀಲ್​ಡೌನ್ ಮಾಡುತ್ತಿದ್ದಾರೆ. ಹಾಗಂತ ಕೊರೊನಾ ಕಾಣಿಸಿಕೊಂಡವರಿಗೆ ಮನೆಯಲ್ಲೇ ಕ್ವಾರಂಟೈನ್ ಆಗಲೂ ಬಿಡುತ್ತಿಲ್ಲ. ಬಲವಂತವಾಗಿ ಅವರನ್ನು ಕರೆದುಕೊಂಡು ಹೋಗಲಾಗುತ್ತಿದೆ ಎಂದು ಬಿಬಿಸಿ ವರದಿ ಮಾಡಿದೆ. ಶಾಂಘೈನಲ್ಲಿ ಒಮಿಕ್ರಾನ್​​ನಿಂದಾಗಿ ಕೊರೊನಾ ಭಯಂಕರ ಹರಡುತ್ತಿದ್ದು, ಶನಿವಾರ 40 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಚೀನಾದಲ್ಲಿ ಕೊವಿಡ್​ 19 ಮೊದಲ ಅಲೆಯ ಹೊತ್ತಲ್ಲೂ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಈಗಲೂ ಕೂಡ ಲಾಕ್​ಡೌನ್ ಅತ್ಯಂತ ಬಿಗಿಯಾಗಿದೆ. ಅದರಲ್ಲೂ ಶಾಂಘೈನಲ್ಲಂತೂ ಬದುಕುವುದೇ ಕಷ್ಟವಾಗುತ್ತಿದೆ. ಹೀಗಾಗಿ ಜನರು ಸಹಜವಾಗಿಯೇ ಸೋಷಿಯಲ್ ಮೀಡಿಯಾಗಳ ಮೊರೆ ಹೋಗಿದ್ದಾರೆ. ಸ್ವಲ್ಪ ದಿನಗಳ ಹಿಂದೆ ಅಲ್ಲಿನ ನಿವಾಸಿಗಳು ಮನೆಯ ಬಾಲ್ಕನಿಗೆ ಬಂದು, ತಮ್ಮ ಕಷ್ಟವನ್ನು ಹಾಡಿನ ರೂಪದಲ್ಲಿ ಹಾಡಿದ್ದರು. ಬಳಿಕ ಸರ್ಕಾರದ ಡ್ರೋನ್​​ವೊಂದು ಹಾರಾಟ ನಡೆಸಿತ್ತು. ಹೀಗೆಲ್ಲ ವರ್ತಿಸಬೇಡಿ ಎಂಬ ಎಚ್ಚರಿಕೆಯನ್ನೂ ನೀಡಿತ್ತು.

ಇದನ್ನೂ ಓದಿ: ‘ಕೆಜಿಎಫ್​ 2’ ಮಾತ್ರವಲ್ಲ, ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಟಾಪ್​ 10 ಸಿನಿಮಾಗಳ ಲಿಸ್ಟ್​ ಇಲ್ಲಿದೆ..

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು