ಅಧಿಕಾರ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಇಮ್ರಾನ್ ಖಾನ್ ಪಾಕಿಸ್ತಾನದ ಮಿಲಿಟರಿ ಬಳಿ ಬೇಡಿಕೊಂಡಿದ್ದರು; ಮರ್ಯಾಮ್ ನವಾಜ್ ಟೀಕೆ
ಇಮ್ರಾನ್ ಖಾನ್ ತನ್ನ ಸರ್ಕಾರವನ್ನು ಉಳಿಸಲು ಕೊನೆಯ ಕ್ಷಣದವರೆಗೂ ಮಿಲಿಟರಿ ಮತ್ತು ಜರ್ದಾರಿ ಅವರನ್ನು ಬೇಡಿಕೊಂಡರು. ಆದರೆ, ಅದು ಸಾಧ್ಯವಾಗದಿದ್ದಾಗ ತಮ್ಮ ವಿರುದ್ಧ ವಿದೇಶಿ ಪಿತೂರಿ ನಡೆದಿದೆ ಎಂದು ನಾಟಕವಾಡಿದರು ಎಂದು ಮರ್ಯಾಮ್ ನವಾಜ್ ಟೀಕಿಸಿದ್ದಾರೆ.
ಲಾಹೋರ್: ಪಾಕಿಸ್ತಾನದ ಉಚ್ಚಾಟಿತ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರು ಅಧಿಕಾರದಿಂದ ಕೆಳಗಿಳಿಯುವಾಗ ಬಹಳ ಹತಾಶರಾಗಿದ್ದರು. ಅಧಿಕಾರವನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಅವರು ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಕೊನೆಯ ಕ್ಷಣದವರೆಗೂ ಪಾಕಿಸ್ತಾನದ ಮಿಲಿಟರಿ ಬಳಿ ಬೇಡಿಕೊಂಡಿದ್ದರು ಎಂದು ಆಡಳಿತಾರೂಢ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಉಪಾಧ್ಯಕ್ಷೆ ಮರ್ಯಾಮ್ ನವಾಜ್ (Maryam Nawaz) ಆರೋಪಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಅವಿಶ್ವಾಸ ನಿರ್ಣಯದ ಮೂಲಕ ತಮ್ಮ ಸರ್ಕಾರವನ್ನು ಉರುಳಿಸುವ ಪ್ರತಿಪಕ್ಷಗಳ ಪ್ರಯತ್ನವನ್ನು ತಡೆಯಲು ಸಹಾಯ ಮಾಡಲು ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಪಿಪಿಪಿ ಸಹ-ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಯನ್ನು ಸಂಪರ್ಕಿಸಿದ್ದಾರೆ ಎಂದು ಪಿಎಂಎಲ್-ಎನ್ ಉಪಾಧ್ಯಕ್ಷ ಮರ್ಯಮ್ ನವಾಜ್ ಹೇಳಿದ್ದಾರೆ. ಮಂಗಳವಾರ ರಾತ್ರಿ ಲಾಹೋರ್‌ನ ಎನ್‌ಎ-128 ಕ್ಷೇತ್ರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪಿಎಂಎಲ್-ಎನ್ ನಾಯಕಿ ಮರ್ಯಾಮ್ ನವಾಜ್ ಶರೀಫ್, ಇಮ್ರಾನ್ ಖಾನ್ ತನ್ನ ಸರ್ಕಾರವನ್ನು ಉಳಿಸಲು ಕೊನೆಯ ಕ್ಷಣದವರೆಗೂ ಮಿಲಿಟರಿ ಮತ್ತು ಜರ್ದಾರಿ ಅವರನ್ನು ಬೇಡಿಕೊಂಡರು. ಆದರೆ, ಅದು ಸಾಧ್ಯವಾಗದಿದ್ದಾಗ ತಮ್ಮ ವಿರುದ್ಧ ವಿದೇಶಿ ಪಿತೂರಿ ನಡೆದಿದೆ ಎಂದು ನಾಟಕವಾಡಿದರು ಎಂದು ಟೀಕಿಸಿದ್ದಾರೆ.
ಶಕ್ತಿಶಾಲಿ ಸೇನೆಯು ತನ್ನ 75 ವರ್ಷಗಳ ಅಸ್ತಿತ್ವದ ಅರ್ಧಕ್ಕಿಂತಲೂ ಹೆಚ್ಚು ಕಾಲ ದಂಗೆ ಪೀಡಿತ ಪಾಕಿಸ್ತಾನವನ್ನು ಆಳಿದೆ. ಹಾಗೇ, ಭದ್ರತೆ ಮತ್ತು ವಿದೇಶಾಂಗ ನೀತಿಯ ವಿಷಯಗಳಲ್ಲಿ ಗಣನೀಯ ಅಧಿಕಾರವನ್ನು ಹೊಂದಿದೆ. ಆದರೂ ಶೆಹಬಾಜ್ ಷರೀಫ್ ಮತ್ತು ಇಮ್ರಾನ್ ಖಾನ್ ನಡುವಿನ ಇತ್ತೀಚಿನ ಹೈ ವೋಲ್ಟೇಜ್ ರಾಜಕೀಯ ಜಗಳದಿಂದ ಮಿಲಿಟರಿ ದೂರವಿತ್ತು. ತಾನು ರಾಜಕೀಯದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಅದು ಹೇಳಿತ್ತು ಎಂದು ಮರ್ಯಮ್ ನವಾಜ್ ಹೇಳಿದ್ದಾರೆ.
نائب صدر پاکستان مسلم لیگ ن مریم نواز شریف اور نو منتحب وزیر اعلی پنجاب حمزہ شہباز شریف کی حلقہ NA-128 آمد لیگی کارکنان سے ملاقات https://t.co/rlU9OEJKn2
— PML(N) (@pmln_org) April 26, 2022
“ಪಾಕಿಸ್ತಾನದ ಪ್ರಧಾನಮಂತ್ರಿ ಪಟ್ಟದಿಂದ ಕೆಳಗಿಳಿಯುವ ಬಗ್ಗೆ ಇಮ್ರಾನ್ ಖಾನ್ ಎಷ್ಟು ಹತಾಶರಾಗಿದ್ದರೆಂದರೆ ಅವರು ಅಧಿಕಾರದಲ್ಲಿರುವ ಕೊನೆಯ ನಿಮಿಷಗಳವರೆಗೂ ತಮ್ಮ ಸರ್ಕಾರವನ್ನು ಉಳಿಸಲು ಮಿಲಿಟರಿಯ ಮೊರೆ ಹೋಗಿದ್ದರು. ಅವರು ಮಾಜಿ ಅಧ್ಯಕ್ಷ ಮತ್ತು ಪಿಪಿಪಿ ಸಹ-ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ಅವಿಶ್ವಾಸದ ಹಿನ್ನೆಲೆಯಲ್ಲಿ ಸಹಾಯ ಮಾಡುವಂತೆ ವಿನಂತಿಸಿದ್ದರು ಎಂದಿದ್ದಾರೆ.
ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ಮತದ ಮೂಲಕ ಏಪ್ರಿಲ್ 10ರಂದು ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಲಾಯಿತು. ದಂಗೆ ಪೀಡಿತ ಪಾಕಿಸ್ತಾನ ದೇಶದಲ್ಲಿ ಸಂಸತ್ತಿನಿಂದ ಹೊರಹಾಕಲ್ಪಟ್ಟ ಮೊದಲ ಪಾಕಿಸ್ತಾನಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಆಗಿದ್ದಾರೆ.
ಉಚ್ಚಾಟಿತ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ‘ತೋಷಾ ಖಾನ್’ ಎಂದು ಟೀಕಿಸಿದ ಮರ್ಯಮ್ ನವಾಜ್, ಇಮ್ರಾನ್ ಖಾನ್ ಪ್ರಧಾನಿಯಾಗಿದ್ದಾಗ ಇತರ ರಾಷ್ಟ್ರಗಳ ಮುಖ್ಯಸ್ಥರಿಂದ ಪಡೆದ ಉಡುಗೊರೆಗಳನ್ನು ಮಾರಾಟ ಮಾಡುವ ಮೂಲಕ ಪಾಕಿಸ್ತಾನದ ಗೌರವವನ್ನು ಮಾರಾಟ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಒಂದೆಡೆ ಇಮ್ರಾನ್ ಖಾನ್ ಪಾಕಿಸ್ತಾನದದ ಸಾರ್ವಭೌಮತ್ವದ ಬಗ್ಗೆ ಮಾತನಾಡುತ್ತಾನೆ. ಮತ್ತೊಂದೆಡೆ ದುಬೈನ ಮುಕ್ತ ಮಾರುಕಟ್ಟೆಯಲ್ಲಿ ತೋಷಖಾನಾ (ರಾಷ್ಟ್ರೀಯ ಖಜಾನೆ) ಉಡುಗೊರೆಗಳನ್ನು ಮಾರಾಟ ಮಾಡುತ್ತಾನೆ. ಪ್ರಧಾನಿಯಾಗಿದ್ದಾಗ ಬೇರೆ ದೇಶಗಳಿಂದ ಸಿಕ್ಕಿದ 180 ಮಿಲಿಯನ್ ರೂ. ಮೌಲ್ಯದ ಉಡುಗೊರೆಗಳನ್ನು ಮಾರಾಟ ಮಾಡುವ ಮೂಲಕ ದೇಶದ ಮರ್ಯಾದೆಯನ್ನು ಹರಾಜು ಹಾಕಿರುವ ಆತನ ಕೃತ್ಯಕ್ಕೆ ನಾಚಿಕೆಪಡಬೇಕು ಎಂದು ಮರ್ಯಮ್ ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ₹140 ಮಿಲಿಯನ್ ಮೌಲ್ಯದ ಉಡುಗೊರೆಗಳನ್ನು ಪಾಕ್ ಮಾಜಿ ಪ್ರಧಾನಿ ಮಾರಾಟ ಮಾಡಿದ್ದಾರೆ: ಇಮ್ರಾನ್ ಖಾನ್ ಮೇಲೆ ಆರೋಪ
ಹುಚ್ಚ ಇಮ್ರಾನ್ ಖಾನ್ಗೆ ಭಾರತ ಅಷ್ಟೊಂದು ಇಷ್ಟವಾದರೆ ಅಲ್ಲೇ ಹೋಗಿ ನೆಲೆಸಲಿ; ಪಾಕ್ ವಿಪಕ್ಷ ನಾಯಕಿ ವಾಗ್ದಾಳಿ
Published On - 2:26 pm, Wed, 27 April 22