ಈಸ್ಟರ್ ಹಬ್ಬದ ಸಮಯದಲ್ಲಿ ಅಸ್ವಸ್ಥರಾದಂತೆ ಕಂಡುಬಂದ ರಷ್ಯಾ ಅಧ್ಯಕ್ಷ; ಪುಟಿನ್ ಆರೋಗ್ಯ ಸರಿ ಇಲ್ವಾ?

ಈಸ್ಟರ್ ಹಬ್ಬದ ಸಮಯದಲ್ಲಿ ಅಸ್ವಸ್ಥರಾದಂತೆ ಕಂಡುಬಂದ ರಷ್ಯಾ ಅಧ್ಯಕ್ಷ; ಪುಟಿನ್ ಆರೋಗ್ಯ ಸರಿ ಇಲ್ವಾ?
ವ್ಲಾಡಿಮಿರ್ ಪುಟಿನ್

ದೇಶದ ಒಲಂಪಿಕ್ ಅಥ್ಲೀಟ್‌ಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಛಾಯಾಚಿತ್ರಗಳಿಗೆ ಪೋಸ್ ನೀಡಿದಾಗ ರಷ್ಯಾದ ಅಧ್ಯಕ್ಷರು ಊದಿಕೊಂಡಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಇನ್ನೊಂದು ವಿಡಿಯೊದಲ್ಲಿ ಅವರ ಕೈ ನಡುಗುತ್ತಿರುವುದು ಕಾಣಿಸುತ್ತಿತ್ತು.

TV9kannada Web Team

| Edited By: Rashmi Kallakatta

Apr 27, 2022 | 8:07 PM

ವ್ಲಾಡಿಮಿರ್ ಪುಟಿನ್ (Vladimir Putin) ಅಸ್ವಸ್ಥರಾಗಿದ್ದಾರೆಯೇ ಹೀಗೊಂದು ಪ್ರಶ್ನೆ ಸದ್ಯ ಚರ್ಚೆಯಾಗುತ್ತಿದೆ. ಈಸ್ಟರ್ ಹಬ್ಬದ ವೇಳೆ ಚರ್ಚ್ ಸೇವೆಯ ಸಮಯದಲ್ಲಿ ಚಡಪಡಿಸುತ್ತಿರುವ ಮತ್ತು ಅಸ್ವಸ್ಥರಾದಂತೆ ಕಾಣುವ ವಿಡಿಯೊ ವೈರಲ್ ಆದ ನಂತರ ರಷ್ಯಾದ ಅಧ್ಯಕ್ಷರ(Russian president) ಆರೋಗ್ಯವು ಹದಗೆಟ್ಟಂತೆ ಕಾಣುತ್ತಿದೆ ಎಂದು ಪಶ್ಚಿಮದ ಕೆಲವು ಸುದ್ದಿವಾಹಿನಿಗಳು ಊಹಿಸಿವೆ. ವೈರಲ್ ಆಗಿರುವ ವಿಡಿಯೊ ತುಣುಕಿನಲ್ಲಿ ಪಾರ್ಕಿನ್ಸನ್ ಅಥವಾ ಟರ್ಮಿನಲ್ ಕ್ಯಾನ್ಸರ್ ಹೊಂದಿರುವ 69 ವರ್ಷದ ಅಧ್ಯಕ್ಷರು ಆರ್ಥೊಡಾಕ್ಸ್ ಈಸ್ಟರ್‌ಗಾಗಿ ಮಧ್ಯರಾತ್ರಿಯ ಸಾಮೂಹಿಕ ಪ್ರಾರ್ಥನೆ ವೇಳೆ ಮೇಣದಬತ್ತಿಯನ್ನು ಹಿಡಿದುಕೊಳ್ಳುವಾಗ ಬಾಯಿಯೊಳಗೆ ಜಗಿಯುತ್ತಿರುವಂತೆ ಕಾಣುತ್ತದೆ ಎಂದು ದಿ ಸನ್ ವರದಿ ಮಾಡಿದೆ. ಬಾಯಿ ಒಣಗುವಿಕೆ ಪಾರ್ಕಿನ್ಸನ್ ಕಾಯಿಲೆಯ(Parkinson’s Disease) ಲಕ್ಷಣವಾಗಿರಬಹುದು ಎಂದು ಮತ್ತೊಂದು ಬ್ರಿಟಿಷ್ ಔಟ್ಲೆಟ್ ದಿ ಡೈಲಿ ಮೇಲ್ ಹೇಳಿದೆ. ಈ ವಿಡಿಯೊ ಅವರ ಆರೋಗ್ಯದ ಬಗ್ಗೆ ಹೊಸ ಊಹಾಪೋಹಗಳನ್ನು ಹುಟ್ಟುಹಾಕಿದೆ. ಫೆಬ್ರವರಿ 24 ರಂದು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಪುಟಿನ್ ಆರೋಗ್ಯ ಹದಗೆಟ್ಟಿದೆ ಎಂದು ವರದಿಯಾಗಿದೆ.  ಪುಟಿನ್ ಆರೋಗ್ಯ ಸ್ಥಿತಿ ಸರಿಯಿಲ್ಲ ಎಂದು ಹೇಳಿರುವ ಇನ್ನೊಂದು ವಿಡಿಯೊದಲ್ಲಿ ಪುಟಿನ್ ಟೇಬಲ್ ಅನ್ನು ಹಿಡಿದುಕೊಂಡು ಅವರ ಪಾದವನ್ನು ಕುಟ್ಟುತ್ತಿರುವುದು ಕಾಣಬಹುದು.  ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಅವರೊಂದಿಗೆ ಕುಳಿತಿರುವಾಗ ಪುಟಿನ್ ಅವರ ಉಬ್ಬಿದ ಮುಖ, ಕುತ್ತಿಗೆ ಮತ್ತು ಸುಸ್ತಾದಂತೆ ಕುಳಿತ ರೀತಿಯನ್ನು ವಿಡಿಯೊದಲ್ಲಿ ಕಾಣಬಹುದು.  ಇಬ್ಬರು ಪುರುಷರೂ ಅನಾರೋಗ್ಯದಿಂದ ಇರುವಂತೆ ಕಾಣುತ್ತಿದ್ದಾರೆ ಎಂದು ಲೇಖಕ ಮತ್ತು ರಷ್ಯಾ ಮತ್ತು ಉಕ್ರೇನ್‌ನ ಮಾಜಿ ಸಲಹೆಗಾರ ಆಂಡರ್ಸ್ ಅಸ್ಲುಂಡ್ ಹೇಳಿರುವುದಾಗಿ ವಿಯಾನ್ ನ್ಯೂಸ್ ವರದಿ ಮಾಡಿದೆ.

ದೇಶದ ಒಲಂಪಿಕ್ ಅಥ್ಲೀಟ್‌ಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಛಾಯಾಚಿತ್ರಗಳಿಗೆ ಪೋಸ್ ನೀಡಿದಾಗ ರಷ್ಯಾದ ಅಧ್ಯಕ್ಷರು ಊದಿಕೊಂಡಿದ್ದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಇನ್ನೊಂದು ವಿಡಿಯೊದಲ್ಲಿ ಅವರ ಕೈ ನಡುಗುತ್ತಿರುವುದು ಕಾಣಿಸುತ್ತಿತ್ತು.

ಟ್ವಿಟರ್‌ನಲ್ಲಿನ ಅನೇಕ ವೀಕ್ಷಕರು ಪುಟಿನ್ ಅವರು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವಂತೆ ಕಾಣುತ್ತದೆ. ಇದು ನಡುಕ, ನಿಧಾನ ಚಲನೆ ಮತ್ತು ಬಿಗಿತವನ್ನು ಉಂಟುಮಾಡುತ್ತದೆ ಎಂದಿದ್ದಾರೆ. ಆದರೆ ರಷ್ಯಾದ ನಾಯಕ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವರದಿಗಳನ್ನು ಮಾಸ್ಕೋ ಪದೇ ಪದೇ ನಿರಾಕರಿಸಿದೆ.

ಈ ತಿಂಗಳ ಆರಂಭದಲ್ಲಿ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ಪುಟಿನ್ ಥೈರಾಯ್ಡ್ ಕ್ಯಾನ್ಸರ್​​ಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬುದನ್ನು ನಿರಾಕರಿಸಿದ್ದು ಅಧ್ಯಕ್ಷರ ಆರೋಗ್ಯವು “ಅತ್ಯುತ್ತಮವಾಗಿದೆ”. ಅವರು ಶೀತಕ್ಕಿಂತ ಹೆಚ್ಚು ಗಂಭೀರವಾದ ಯಾವುದೇ ಅನಾರೋಗ್ಯವನ್ನು ಎದುರಿಸಲಿಲ್ಲ ಎಂದು ಹೇಳಿದ್ದಾರೆ.

Disclaimer: ಪುಟಿನ್ ಅವರ ಆರೋಗ್ಯ ಸ್ಥಿತಿ ಕುರಿತು ಹಲವಾರು ಊಹಾಪೋಹಗಳು ಹರಿದಾಡುತ್ತಿವೆ. ಈ ಬಗ್ಗೆ Tv9  ಸ್ವತಂತ್ರವಾಗಿ ಕ್ರಾಸ್ ಚೆಕ್  ಮಾಡಲು ಆಗುತ್ತಿಲ್ಲ.

ಇದನ್ನೂ ಓದಿ: ಬುಚಾ ನಾಗರಿಕರನ್ನು ಕೊಂದ ಸೈನಿಕರನ್ನು ಪುಟಿನ್ ಸನ್ಮಾನಿಸಿದ ಸುದ್ದಿ ಓದುವಾಗ ಕಣ್ಣೀರಿಟ್ಟ ಜಪಾನೀ ನ್ಯೂಸ್ ರೀಡರ್

Follow us on

Related Stories

Most Read Stories

Click on your DTH Provider to Add TV9 Kannada