ಗಿನ್ನೆಸ್ ದಾಖಲೆ ಸೇರಿದ ವಿಶ್ವದ ಅತ್ಯಂತ ಹಿರಿಯ ಮಹಿಳೆ ಸಿಸ್ಟರ್​ ಆ್ಯಂಡ್ರೆ ದೀರ್ಘಾಯಸ್ಸಿನ ರಹಸ್ಯವೇನು ಗೊತ್ತಾ?

ಗಿನ್ನೆಸ್ ದಾಖಲೆ ಸೇರಿದ ವಿಶ್ವದ ಅತ್ಯಂತ ಹಿರಿಯ ಮಹಿಳೆ ಸಿಸ್ಟರ್​ ಆ್ಯಂಡ್ರೆ ದೀರ್ಘಾಯಸ್ಸಿನ ರಹಸ್ಯವೇನು ಗೊತ್ತಾ?
ಸಿಸ್ಟರ್ ಆ್ಯಂಡ್ರೆ

Guinness World Record: ಸಿಸ್ಟರ್ ಆ್ಯಂಡ್ರೆ ಮೊದಲ ಮಹಾಯುದ್ಧದ ಸಮಯದಲ್ಲಿ 1918ರ ಸ್ಪ್ಯಾನಿಷ್ ಫ್ಲೂ ಸಮಯದಲ್ಲಿ ಜೀವಂತವಾಗಿದ್ದ ಮಹಿಳೆಯಾಗಿದ್ದಾರೆ. 2021ರಲ್ಲಿ ಕೊವಿಡ್​ನಿಂದ ಬದುಕುಳಿದ ವಿಶ್ವದ ಅತ್ಯಂತ ಹಳೆಯ ಮಹಿಳೆ ಎನಿಸಿಕೊಂಡಿದ್ದಾರೆ.

TV9kannada Web Team

| Edited By: Sushma Chakre

Apr 28, 2022 | 2:45 PM

ನವದೆಹಲಿ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯಾಗಿರುವ ಫ್ರೆಂಚ್ ಸನ್ಯಾಸಿನಿಯೊಬ್ಬರು ತಮ್ಮ ಸುದೀರ್ಘ ಜೀವನದ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಪ್ರತಿದಿನ ಒಂದು ಗ್ಲಾಸ್ ವೈನ್ (Wine) ಮತ್ತು ಚಾಕೊಲೇಟ್ (Chocolate) ತಿನ್ನುವ ಅವರ ಅಭ್ಯಾಸವೇ ತಮ್ಮ ದೀರ್ಘಾಯಸ್ಸಿಗೆ ಕಾರಣ ಎಂದಿದ್ದಾರೆ. ಈ ವೃದ್ಧೆಗೆ 118 ವರ್ಷ, 73 ದಿನಗಳಾಗಿವೆ. ಸೋದರಿ ಆಂಡ್ರೆ ಅವರಿಗೆ ಸೋಮವಾರ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (Guinness World Record) ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಬಿರುದನ್ನು ನೀಡಿದೆ. ಸಿಸ್ಟರ್ ಆ್ಯಂಡ್ರೆ ಅವರು 117ನೇ ವರ್ಷಕ್ಕೆ ಕಾಲಿಟ್ಟಾಗಲೇ ಅವರು ಯುರೋಪ್‌ನ ಅತ್ಯಂತ ಹಿರಿಯ ಮಹಿಳೆಯಾಗಿದ್ದರು. ಜಪಾನಿನ ಮಹಿಳೆ ಕೇನ್ ತನಕಾ ಅವರ ಮರಣದ ನಂತರ ಸಿಸ್ಟರ್ ಆ್ಯಂಡ್ರೆ ಅವರಿಗೆ ಯುರೋಪ್​ನ ಅತಿ ಹಿರಿಯ ಮಹಿಳೆ ಎಂಬ ಪ್ರಶಸ್ತಿಯನ್ನು ನೀಡಲಾಯಿತು.

ಗಿನ್ನೆಸ್ ವರ್ಲ್ಡ್​ ರೆಕಾರ್ಡ್​ ತನ್ನ ವೆಬ್‌ಸೈಟ್‌ನಲ್ಲಿ ಸಿಸ್ಟರ್ ಆ್ಯಂಡ್ರೆ 1904ರ ಫೆಬ್ರವರಿ 11ರಂದು ಲುಸಿಲ್ಲೆ ರಾಂಡನ್ ಆಗಿ ಜನಿಸಿದಳು ಎಂದು ತಿಳಿಸಿದೆ. ಅವರು ಮಕ್ಕಳನ್ನು ಗವರ್ನೆಸ್ ಆಗಿ ನೋಡಿಕೊಂಡರು ಮತ್ತು 1944ರಲ್ಲಿ ಎರಡನೆಯ ಮಹಾಯುದ್ಧದ ಸಮಯದಲ್ಲಿ ಅವರು ಸನ್ಯಾಸಿನಿಯಾದರು.

ಸಿಸ್ಟರ್ ಆ್ಯಂಡ್ರೆ ಮೊದಲ ಮಹಾಯುದ್ಧದ ಸಮಯದಲ್ಲಿ 1918ರ ಸ್ಪ್ಯಾನಿಷ್ ಫ್ಲೂ ಸಮಯದಲ್ಲಿ ಜೀವಂತವಾಗಿದ್ದ ಮಹಿಳೆಯಾಗಿದ್ದಾರೆ. 2021ರಲ್ಲಿ ಕೊವಿಡ್​ನಿಂದ ಬದುಕುಳಿದ ವಿಶ್ವದ ಅತ್ಯಂತ ಹಳೆಯ ಮಹಿಳೆ ಎನಿಸಿಕೊಂಡರು. ಕಳೆದ 12 ವರ್ಷಗಳಿಂದ ಸಿಸ್ಟರ್ ಆ್ಯಂಡ್ರೆ ಟೌಲೋನ್‌ನ ನರ್ಸಿಂಗ್ ಹೋಂನಲ್ಲಿ ವಾಸಿಸುತ್ತಿದ್ದಾರೆ. ಕಳೆದ ವರ್ಷ ಕೊವಿಡ್ ಸಾಂಕ್ರಾಮಿಕ ರೋಗದ ಉತ್ತುಂಗದ ವೇಳೆ ಅವರು ತಮ್ಮ ರೂಮಿನಲ್ಲೇ ದಿನಗಳನ್ನು ಕಳೆದಿದ್ದರು. ನಂತರ ಆಸ್ಪತ್ರೆಗೆ ಶಿಫ್ಟ್​ ಆಗಿದ್ದರು.

122 ವರ್ಷ ಮತ್ತು 164 ದಿನಗಳ ಕಾಲ ಬದುಕಿದ್ದ ಜೀನ್ ಲೂಯಿಸ್ ಕಾಲ್ಮೆಂಟ್ ಎಂಬ ಫ್ರೆಂಚ್ ಮಹಿಳೆ ಇದುವರೆಗಿನ ಅತ್ಯಂತ ಹಳೆಯ ವ್ಯಕ್ತಿ ಎಂಬ ದಾಖಲೆ ಇದೆ. ಅವರೂ ಆಗಾಗ ಒಂದು ಲೋಟ ವೈನ್ ಸೇವಿಸುತ್ತಿದ್ದರು ಮತ್ತು ಚಾಕೊಲೇಟ್‌ನ ಬಗ್ಗೆ ವಿಶೇಷ ಒಲವು ಹೊಂದಿದ್ದರು ಎಂಬುದು ವಿಶೇಷ. ಸಿಸ್ಟರ್ ಆ್ಯಂಡ್ರೆ ಈಗ ಆ ದಾಖಲೆಯನ್ನು ಮುರಿಯಲು ಬಯಸಿದ್ದಾರೆ.

ಇದನ್ನೂ ಓದಿ: Viral Video: ಕೂದಲಿಂದಲೇ 12 ಸಾವಿರ ಕೆಜಿ ತೂಕದ ಬಸ್ ಎಳೆದು ಗಿನ್ನೆಸ್ ರೆಕಾರ್ಡ್ ಮಾಡಿದ ಮಹಿಳೆ!

ಗಿನ್ನೆಸ್ ಪುಟ ಸೇರಿತು ಭಾರತದ ಯುವಕ ತಯಾರಿಸಿದ ಉಂಗುರ.. ಇದರಲ್ಲಿರುವ ವಜ್ರದ ಹರಳುಗಳೆಷ್ಟು?!

Follow us on

Related Stories

Most Read Stories

Click on your DTH Provider to Add TV9 Kannada